ಕರಾವಳಿ ಅಂದರೆ ಮಂಗಳೂರು ದೈವ ದೇವರುಗಳ ಸತ್ಯದ ನೆಲ ಎಂದೇ ಪ್ರಸಿದ್ಧ. ಇಲ್ಲಿ ದೈವ ದೇವರ ಕಾರ್ಯಕ್ಕೆ ಒಂದಿಷ್ಟು ತೊಡಕಾದರೂ, ಕುಂದು ಉಂಟಾದರೂ ಊರಿಗೆ ಅಪಾಯ ಕಾದಿದೆ ಎಂದೇ ಅರ್ಥ.
ಅದರಲ್ಲೂ ದೈವದ ಜಾತ್ರೆ ಸಂದರ್ಭದಲ್ಲಿ ಯಾವುದಾದರೂ ನೆಗೆಟಿವ್ ಅಂಶಗಳು ಕಾಣಿಸಿಕೊಂಡರೆ ಸೇರಿದ್ದ ಭಕ್ತರು ಅಯ್ಯೋ ದೇವರೇ ಎಂದು ಅನ್ನುತ್ತಾರೆ.
ಹಾಗೇ ದೇವಸ್ಥಾನಗಳನ್ನು ಕೂಡಾ. ಅದರಲ್ಲೂ ದೇವರ ಬಲಿ ನಡೆಯುವ ಸಂದರ್ಭದಲ್ಲಿ ದೇವರ ಉತ್ಸವ ಮೂರ್ತಿ ಹೊತ್ತವರ ಶಿರದಿಂದ ಉತ್ಸವ ಮೂರ್ತಿ ಕೆಳಗೆ ಬಿದ್ದರೆ ಅಪಾಯ ಅನ್ನುವ ನಂಬಿಕೆ ಪರಶುರಾಮನ ನಾಡಿನಲ್ಲಿದೆ.
ಈ ಹಿಂದೆ ಕರಾವಳಿಯ ಅನೇಕ ದೇವಸ್ಥಾನಗಳಲ್ಲೂ ಇಂತಹ ಘಟನೆಗಳು ನಡೆದಿದ್ದು, ಪ್ರಾಯಶ್ಚಿತ್ತ ಮತ್ತು ಬ್ರಹ್ಮಕಲಶದ ಬಳಿಕ ಮತ್ತೆ ನಿತ್ಯದ ಪ್ರಕ್ರಿಯೆಗಳನ್ನು ನಡೆಸಲಾಗಿದೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಈ ಬಾರಿ ಶಿವರಾತ್ರಿಯಂದು ಅಪಚಾರ ನಡೆದಿದೆ.
ಶಿವರಾತ್ರಿ ಉತ್ಸವ ಪ್ರಯುಕ್ತ ರಾತ್ರಿ ಬಲಿ ಉತ್ಸವ ನಡೆಯುತ್ತಿದ್ದಾಗ ದೇವರ ಮೂರ್ತಿ, ದೇವರ ಉತ್ಸವ ಮೂರ್ತಿ, ಅರ್ಚಕರ ಶಿರದಿಂದ ನೆಲಕ್ಕೆ ಬಿದ್ದಿದೆ.
ಶಿವರಾತ್ರಿಯಂದೇ ಶಿವನ ಪವರ್ ಫುಲ್ ಕ್ಷೇತ್ರದಲ್ಲಿ ಇಂತಹುದೊಂದು ಘಟನೆ ನಡೆದಿರುವುದು ಭಕ್ತ ಗಣದಲ್ಲಿ ಆತಂಕ ಮೂಡಿಸಿದೆ.
ಕೆಲ ವರ್ಷಗಳ ಹಿಂದೆ ಇದೇ ದೇವಸ್ಥಾನದಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವ ನಡೆದಿತ್ತು. ಆಗ ಹಾಕಲಾಗಿದ್ದ ಹೊಸ ಧ್ವಜ ಸ್ತಂಭ ( ಕೊಡಿ ಮರ ) ಕೆಲ ತಿಂಗಳುಗಳನ್ನು ದುರಸ್ಥಿಗೆ ಬಂದಿತ್ತು. ಬಳಿಕ ಮತ್ತೆ ಹೊಸ ಧ್ವಜ ಸ್ತಂಭ ಹಾಕಲು ನಿರ್ಧರಿಸಲಾಗಿತ್ತು.ಧ್ವಜ ಸ್ತಂಭ ಇಲ್ಲದೆ ದೇವರ ಬಲಿ ಉತ್ಸವ ನಡೆಸುವುದು ಸೂಕ್ತವಲ್ಲ ಅನ್ನುವುದು ಕೆಲವು ಧಾರ್ಮಿಕ ವಿದ್ವಾಂಸರ ನಂಬಿಕೆ. ಹೀಗಿದ್ದರೂ ಶಿವರಾತ್ರಿಯಂದು ಎಂಬಲಿ ಉತ್ಸವ ನಡೆಸಲಾಗಿದೆ. ಹೀಗಾಗಿ ದೇವರು ತನಗೆ ಇಷ್ಟವಿಲ್ಲದ ಕಾರ್ಯ ನಡೆಸಲಾಗಿದೆ ಅನ್ನುವುದು ಪ್ರಕಟಿಸಿದ್ದಾನೆ ಎನ್ನಲಾಗಿದೆ.
ಇನ್ನು ಕೆಳಗೆ ಬಿದ್ದ ದೇವರ ಮೂರ್ತಿಯನ್ನು ಶುದ್ಧಿಕಲಶ ಮಾಡಿಸದೆ ಹಾಗೇ ಗರ್ಭಗುಡಿಯಲ್ಲಿ ಇಡಲಾಗಿದೆ ಅನ್ನು ಸುದ್ದಿಯಿದೆ. ಒಂದು ವೇಳೆ ಹಾಗೇ ಮಾಡಿದ್ದರೆ ಅದು ದೇವರೂ ಕ್ಷಮಿಸದ ಅಪರಾಧವಾಗಬಹುದಂತೆ.
ದೇವಸ್ಥಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಶಿವನಿಗೆ ಇಷ್ಟವಿರಲಿಲ್ಲ ಅನ್ನುವ ಮಾತುಗಳು ಈ ನಡುವೆ ಕೇಳಿಬಂದಿದೆ.
ದೇವಸ್ಥಾನಕ್ಕೆ ಬರೋ ಭಕ್ತರಿಗಿಂತ ವ್ಯವಸ್ಥಾಪನಾ ಸಮಿತಿಯ ಆಟವೇ ಇಲ್ಲಿ ನಡೆಯುತ್ತಿದೆ. ಅದರಲ್ಲೂ ಗಣ್ಯ ವ್ಯಕ್ತಿಗಳು ಬಂದರೆ ಸಾಮಾನ್ಯ ಭಕ್ತನನ್ನು ಇಲ್ಲಿ ಕೇಳುವವರೇ ಇರುವುದಿಲ್ಲವಂತೆ. ಅರ್ಚಕರು ಮತ್ತು ವ್ಯವಸ್ಥಾಪನಾ ಸಮಿತಿಯ ಕೆಲವರು ಸೇರಿಕೊಂಡು ಏಕಪಕ್ಷೀಯ ತೀರ್ಮಾನಗಳನ್ನು ತೆಗೆದುಕೊಂಡ ಆರೋಪಗಳು ಕೂಡಾ ಇದೆ.
ಒಟ್ಟಿನಲ್ಲಿ ಪುತ್ತೂರಿನ ಮುತ್ತು ಮುನಿದಿರುವುದು ಸತ್ಯ. ಹತ್ತೂರು ಒಡೆಯನ ನೆಲದಲ್ಲಿ ಸಾಮಾನ್ಯ ಭಕ್ತನಿಗಾದ ನೋವು ಶಿವನಿಗೆ ತಟ್ಟಿದಂತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶಿವನನ್ನು ಶಾಂತಗೊಳಿಸುವ ಕೆಲಸವಾಗಲಿ ಅನ್ನುವುದು ಆಸ್ತಿಕರ ಒತ್ತಾಯ.
ಇನ್ನು ಈ ವಿಷಯವನ್ನು ಪ್ರಚಾರ ಮಾಡದಂತೆ ಯಾರಿಗೂ ಹೇಳದಂತೆ ಒತ್ತಡ ಹೇರಿರುವುದು ಹಲವು ಅನುಮಾಕ್ಕೆ ಕಾರಣವಾಗಿದೆ. ಜೊತೆಗೆ ಮೊಬೈಲ್ ಗಳಲ್ಲಿ ಸೆರೆಯಾದ ದೃಶ್ಯಗಳನ್ನು ಡಿಲೀಟ್ ಮಾಡಿಸಿರುವ ಹಿಂದಿರುವ ಉದ್ದೇಶವೇನು ಅನ್ನುವುದನ್ನು ಮುಜರಾಯಿ ಇಲಾಖೆಯ ಅಧಿಕಾರಿಗಳೇ ಹೇಳಬೇಕು.
Discussion about this post