ದಂಪತಿಗಳ ಪ್ರೇಮಿಗಳ ಕಾಲ್ ರೆಕಾರ್ಡ್ Call detail record ಮೇಲೆ ಕಣ್ಣಿಟ್ಟಿದ್ದ ಖದೀಮ ಪೊಲೀಸ್
ಇದೊಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದ. ಕರ್ನಾಟಕ ಪೊಲೀಸ್ ಅಂದ್ರೆ ಹೆಮ್ಮೆ ಪಡೋ ರೀತಿಯಲ್ಲಿ ಕೆಲಸ ಮಾಡೋ ಪೊಲೀಸ್ ಅಧಿಕಾರಿಗಳಿಗೆ ಮಸಿ ಬಳಿಯೋ ಯತ್ನ ಇದು ಅಂದ್ರೆ ತಪ್ಪಿಲ್ಲ. ಅ ಮಾತ್ರವಲ್ಲದೆ ಡಿಟೆಕ್ಟಿವ್ ಏಜೆನ್ಸಿ ಎಂದು ಬೋರ್ಡ್ ಹಾಕಿಕೊಂಡಿರುವ ಮಂದಿಯ ಪೈಕಿ ಕೆಲವರು ಮಾಡೋ ಅಡ್ಡ ವ್ಯವಹಾರದ ಕಥೆಯೂ ಇದೇ ಆಗಿದೆ.
ಅನಧಿಕೃತವಾಗಿ ಸಾರ್ವಜನಿಕರ ಕರೆ ವಿವರ ( CDR Call detail record ) ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮಾಹಿತಿ ಆರೋಪದಡಿಯಲ್ಲಿ ಪ್ರಕರಣ ಕುರಿತಂತೆ ಗೋವಿಂದರಾಜ ನಗರ ಮತ್ತು ಬಸವೇಶ್ವರನಗರದಲ್ಲಿ ಮೂರು ಪ್ರಕರಣ ದಾಖಲಾಗಿತ್ತು. ಇದಾದ ನಂತರ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿತ್ತು.
ಸಿಸಿಬಿ ಪೊಲೀಸರು ಮೇ 22 ರಂದು ಗ್ರಾಹಕರ ಸೋಗಿನಲ್ಲಿ ರಾಜಧಾನಿ, ಮಹಾನಗರ, ರಾಜಧಾನಿ ಮತ್ತು ಎಲಿಗೆಂಟ್ ಡಿಟೆಕ್ಟಿವ್ ಏಜೆನ್ಸಿಗಳ ಕಚೇರಿ ಮೇಲೆ ದಾಳಿ ಮಾಡಿದ್ದರು.ಈ ವೇಳೆ ಡಿಟೆಕ್ಟಿವ್ ಏಜೆನ್ಸಿಗಳ ಮಾಲೀಕರು ಮತ್ತು ಕೆಲಸಗಾರರು ಸೇರಿ 10 ಮಂದಿಯನ್ನು ಬಂಧಿಸಲಾಗಿತ್ತು.
ಈ ಸಂದರ್ಭದಲ್ಲಿ ಸಿಡಿಆರ್ ಮಾರಾಟ ದಂಧೆಯ ಕಿಂಗ್ ಪಿನ್ ಆಂಧ್ರಪ್ರದೇಶದ ನಾಗೇಶ್ವರ ರೆಡ್ಡಿ ಎಂದು ಗೊತ್ತಾಗಿತ್ತು. ಆತನನ್ನು ಬಂಧಿಸಿದ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದಾಗ, ಈ ದಂಧೆಯಲ್ಲಿ ಅಪರಾಧ ತನಿಖಾ ದಳ ( CID ) ಯ ತಂತ್ರಜ್ಞಾನ ವಿಭಾಗದ ಮುಖ್ಯ ಪೇದೆ ಕೂಡಾ ಪಾಲುದಾರ ಅನ್ನೋದು ಗೊತ್ತಾಗಿತ್ತು.
ಈ ಹಿನ್ನಲೆಯಲ್ಲಿ ಇದೀಗ ಸಿಐಡಿ ಟೆಕ್ನಿಕಲ್ ಸೆಲ್ ನ ಮುಖ್ಯ ಪೇದೆ ಮುನಿರತ್ನನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮುಖ್ಯ ಪೇದೆ ಮುನಿರತ್ನನಿಂದ ತನಗೆ ಬೇಕಾದ ಮೊಬೈಲ್ ಸಂಖ್ಯೆಗಳ ಸಿಡಿಆರ್ ಪಡೆಯುತ್ತಿದ್ದ ಕಿಂಗ್ ಪಿನ್ ನಾಗೇಶ್ವರ ರೆಡ್ಡಿ ಮೊಬೈಲ್ ಕರೆ ವಿವರಗಳನ್ನು ಪ್ರಶಾಂತನಗರದ ಮಹಾನಗರ ಡಿಟೆಕ್ಟಿವ್ ಅಂಡ್ ಸೆಕ್ಯೂರಿಟಿ ಸರ್ವೀಸ್, ಗೋವಿಂದರಾಜನಗರದ ರಾಜಧಾನಿ ಕಾರ್ಪೋರೇಷನ್ ಡಿಟೆಕ್ಟಿವ್ ಏಜೆನ್ಸಿ ಮತ್ತು ಬಸವೇಶ್ವರನಗರದ ಎಲಿಗೆಂಟ್ ಡಿಟೆಕ್ಟಿವ್ ಏಜೆನ್ಸಿಗೆ ಮಾರಾಟ ಮಾಡುತ್ತಿದ್ದ.
ಹೀಗೆ ಕರೆ ವಿವರ ಮಾರಿ ಬರುತ್ತಿದ್ದ ಹಣದಲ್ಲಿ ಮುನಿರತ್ನನಿಗೂ ಒಂದು ಪಾಲನ್ನು ನಾಗೇಶ್ವರ ರೆಡ್ಡಿ ನೀಡುತ್ತಿದ್ದ. ಒಂದು ಮೊಬೈಲ್ ಸಂಖ್ಯೆಯ ಸಿಡಿಆರ್ ಗೆ 18 ರಿಂದ 20 ಸಾವಿರ ರೂಪಾಯಿ ದರವನ್ನು ಡಿಟೆಕ್ಟಿವ್ ಏಜೆನ್ಸಿಗಳು ಗ್ರಾಹಕರಿಂದ ವಸೂಲಿ ಮಾಡುತ್ತಿತ್ತು ಅನ್ನಲಾಗಿದೆ.
ಕದ್ದು ಮುಚ್ಚಿ ಕರೆ ವಿವರ ಸಂಗ್ರಹ ಹೇಗೆ
ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳು ತಮಗೆ ಬೇಕಾದ ಕರೆ ವಿವರಗಳನ್ನು ಪಡೆಯಲು ಕಿಂಗ್ ಪಿನ್ ನಾಗೇಶ್ವರ ರೆಡ್ಡಿಯನ್ನು ಸಂಪರ್ಕ ಮಾಡುತ್ತಿತ್ತು. ನಾಗೇಶ್ವರ ರೆಡ್ಡಿ ಪೇದೆ ಮುನಿರತ್ನನನ್ನು ಸಂಪರ್ಕಿಸುತ್ತಿದ್ದ. ಈ ವೇಳೆ ಕೆಲಸ ಶುರುಮಾಡುತ್ತಿದ್ದ ಪೇದೆ ಮುನಿರತ್ನ ಕರೆ ವಿವರಗಳನ್ನು ಸಂಗ್ರಹಿಸುತ್ತಿದ್ದ.
ನಿಯಮಗಳ ಪ್ರಕಾರ ಅಪರಾಧ ಪ್ರಕರಣಗಳ ಸಂಬಂಧ ಆರೋಪಿಗಳಿಗೆ ಸಂಬಂಧಿಸಿದ ಮೊಬೈಲ್ ಕರೆಗಳ ಸಿಡಿಆರ್ ಪಡೆಯಲು ತನಿಖಾಧಿಕಾರಿಗಳಿಗೆ ಮಾತ್ರ ಅನಕಾಶವಿದೆ. ಹೀಗೆ ಕರೆ ವಿವರ ಪಡೆಯಲು ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಡಿಸಿಪಿ ಮತ್ತು ಜಿಲ್ಲೆಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಅನುಮತಿ ಬೇಕು. ಬಳಿಕ ಸಿಐಡಿ ಟೆಕ್ನಿಕಲ್ ಸೆಲ್ ಗೆ ಪತ್ರ ಬರೆದು ಕರೆ ವಿವರಗಳನ್ನು ಪಡೆಯಬಹುದಾಗಿತ್ತು.
ಹೀಗೆ ಸಿಡಿಆರ್ ಪಡೆಯಲು ತನಿಖಾಧಿಕಾರಿಗಳಿಂದ ಬರುತ್ತಿದ್ದ ಮನವಿ ಸ್ವೀಕರಿಸಿದ ಪೇದೆ ಮುನಿರತ್ನ ಆ ಮನವಿಯಲ್ಲಿ ತನಗೆ ಬೇಕಾದ ಮೊಬೈಲ್ ಸಂಖ್ಯೆಗಳನ್ನು ಸೇರಿಸಿ ಸರ್ವೀಸ್ ಪ್ರೊವೈಡರ್ ಗಳಿಗೆ ರವಾನಿಸುತ್ತಿದ್ದ. ಅಲ್ಲಿಂದ ಕರೆ ವಿವರ ಬಂದ ಬೆನ್ನಲ್ಲೇ ತನಗೆ ಬೇಕಾದ ಕರೆ ವಿವರಗಳನ್ನು ತಾನಿಟ್ಟುಕೊಂಡು, ಅಧಿಕೃತ ಸಂಖ್ಯೆಯ ಕರೆ ವಿವರಗಳನ್ನು ಆಯಾ ತನಿಖಾಧಿಕಾರಿಗಳಿಗೆ ನೀಡಲಾಗುತ್ತಿತ್ತು. ಅಚ್ಚರಿ ಅಂದ್ರೆ ದಂಪತಿ, ಪ್ರೇಮಿಗಳು, ರಾಜಕಾರಣಿಗಳು, ಅಧಿಕಾರಿಗಳು ಕರೆ ವಿವರಗಳನ್ನೇ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳು ಅನಧಿಕೃತವಾಗಿ ಬಯಸುತ್ತಿತ್ತು. ಪರಸ್ಪರ ಅನುಮಾನದ ಹಿನ್ನಲೆಯಲ್ಲಿ ದಂಪತಿ ಮತ್ತು ಪ್ರೇಮಿಗಳ ಸಂಖ್ಯೆಯ ಕರೆ ವಿವರಗಳನ್ನೇ ಅಧಿಕ ಪಡೆಯಲಾಗಿದೆಯಂತೆ.
The Bengaluru police on Thursday arrested a policeman and the alleged mastermind following investigations into the illegal sale of Call Detail Records (CDRs). The arrested men are Munirathna, a police constable who worked with the Criminal Investigation Department (CID) and was posted in the Kolar district, and Nageshwar Reddy, a resident of Andhra Pradesh.