ನಿತ್ಯ 400ಕ್ಕೂ ಹೆಚ್ಚು ಡೆಂಘೀ ಪ್ರಕರಣಗಳು ಪತ್ತೆಯಾಗುತ್ತಿದೆ
ರಾಜ್ಯದಲ್ಲಿ ಡೆಂಘೀ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಏರುತ್ತಿದೆ. ಭಾನುವಾರ 320 ಮಂದಿಗೆ ಡೆಂಘೀ ಧೃಡಪಟ್ಟಿದ್ದು, ಈ ಮೂಲಕ ಒಟ್ಟು ಡೆಂಘೀ ಪ್ರಕರಣ 17 ಸಾವಿರದ ಗಡಿ ದಾಟಿದೆ.
ಪ್ರಸ್ತುತ ರಾಜ್ಯದಲ್ಲಿ 3000ಕ್ಕೂ ಅಧಿಕ ಸಕ್ರಿಯ ಡೆಂಘೀ ಪ್ರಕರಣಗಳಿದ್ದು, 2539 ಮಂದಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. 465 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.9 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.
ಪ್ರತೀ ನಿತ್ಯ ಸುಮಾರು 2500 ಮಂದಿಗೆ ಪರೀಕ್ಷೆ ನಡೆಸುತ್ತಿರುವ ಆರೋಗ್ಯ ಇಲಾಖೆ ಭಾನುವಾರ 1630 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದೆ. ಈ ಪೈಕಿ 320 ಮಂದಿಗ ಡೆಂಘೀ ದೃಢಪಟ್ಟಿದೆ. ಈ ಪೈಕಿ ಬೆಂಗಳೂರಿನಲ್ಲಿ 142, ಬೆಳಗಾವಿ 21, ಹಾವೇರಿ ದಾವಣಗೆರೆ ತಲಾ 17, ರಾಮನಗರ 15, ಕಲಬುರಗಿ 13 ಪ್ರಕರಣಗಳು ದೃಢಪಟ್ಟಿವೆ.
ತುಮಕೂರು 9, ದಕ್ಷಿಣ ಕನ್ನಡ 7, ಮಂಡ್ಯ 6, ಚಿಕ್ಕಬಳ್ಳಾಪುರ 5, ಬಳ್ಳಾರಿ, ವಿಜಯನಗರ,ಮೈಸೂರು, ಹಾಸನ ಜಿಲ್ಲೆಗಳಲ್ಲಿ ತಲಾ 4 ಮತ್ತು ಚಾಮರಾಜನಗರ, ಬಾಗಲಕೋಟೆ, ವಿಜಯಪುರ ತಲಾ 3 ಧಾರವಾಡ, ಯಾದಗಿರಿ, ರಾಯಚೂರು, ಬೀದರ್ ತಲಾ 2 ಕೊಡಗು, ಚಿಕ್ಕಮಗಳೂರು, ಕೊಪ್ಪಳ, ಉತ್ತರ ಕನ್ನಡ, ಗದಗ ಮತ್ತು ಕೋಲಾರ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿದೆ.