ದಿನ ಭವಿಷ್ಯ ಯಾವ ರಾಶಿಗೆ ಯಾವ ಫಲ
ಮೇಷ : ನಿಮ್ಮ ಕೆಲಸಗಳಲ್ಲಿ ಇಂದು ತೀರಾ ವಿಳಂಭವಾಗಲಿದೆ. ನೀವು ನಿರೀಕ್ಷಿಸಿದ ರೀತಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಹೊಟ್ಟೆ ಮತ್ತು ಜೀರ್ಣಾಂಗಕ್ಕೆ ಸಂಬಂಧಪಟ್ಟಂತೆ ಅನಾರೋಗ್ಯ ಉಂಟಾಗುವ ಸಾಧ್ಯತೆಗಳಿದೆ. ವೈದ್ಯರನ್ನು ಭೇಟಿಯಾಗಲು ಮರೆಯಬೇಡಿ. ಜೊತೆಗೆ ಶ್ರೀ ಗಜಾನನ ಆರಾತ್ರಿಕ ಸ್ತೋತ್ರವನ್ನು ಪಠಿಸಿ. ದಿನ ಭವಿಷ್ಯ
ವೃಷಭ : ಇಂದು ನೀವು ಕೌಟುಂಬಿಕ ಕಲಹಗಳಿಂದ ದೂರವಾಗಲಿದ್ದೀರಿ. ಮಾನಸಿಕ ಸುಖ ಶಾಂತಿ ನೆಮ್ಮದಿ ನಿಮಗೆ ಲಭಿಸಲಿದೆ. ವ್ಯಾಪಾಕ ವಹಿವಾಟುಗಳಲ್ಲಿ ನಿಮಗೆ ಇಂದು ಲಾಭ ಕಟ್ಟಿಟ್ಟ ಬುತ್ತಿ. ಹಳೆಯ ಕಾಯಿಲೆಗಳು ಮರುಕಳಿಸುವ ಸಾಧ್ಯತೆಗಳಿದೆ.
ಪರಿಹಾರ : ಶ್ರೀಗಣೇಶಾಯಧೀಮಹಿ ಸ್ತೋತ್ರ ಪಠಣ
ಮಿಥುನ : ಉದ್ಯೋಗ ಸ್ಥಳದಲ್ಲಿ ಎದುರಿಸುತ್ತಿದ್ದ ಏರಿಳಿತಗಳಿಂದ ಮುಕ್ತಿ ದೊರೆಯಲಿದೆ. ಇಂದಿನ ದಿನ ನಿಮ್ಮ ಮನಸ್ಸಿಗೆ ಸಂತೋಷ ನೀಡುವ ದಿನವಾಗಲಿದೆ. ವೃತ್ತಿ ವ್ಯಾಪಾರ ಮತ್ತು ವ್ಯವಹಾರದಲ್ಲಿ ನಿರೀಕ್ಷೆಗಿಂತಲೂ ಅಭಿವೃದ್ಧಿ ಕಂಡು ಬರಲಿದೆ
ಪರಿಹಾರ : ಶ್ರೀಗಣೇಶ ಸ್ತುತಿ ಪಠಣ
ಕರ್ಕಾಟಕ : ಕೃಷಿಕರಿಗೆ ಪಶು ಸಂಗೋಪನೆ ಮಾಡುವವರಿಗೆ, ರೇಷ್ಮೆ ಬೆಳೆಗಾರರಿಗೆ ಮತ್ತು ಜವಳಿ ವ್ಯಾಪಾರಸ್ಥರಿಗೆ ಅತ್ಯಧಿಕ ಧನ ಲಾಭ ಉಂಟಾಗಲಿದೆ. ಮಾನಸಿಕ ಏರಿಳಿತಗಳಿಂದ ದೂರವಾಗಲಿದ್ದೀರಿ. ಅತ್ಯಂತ ಸುಖ ಮತ್ತು ಸಂತೋಷದ ದಿನ ಇಂದಾಗಲಿದೆ.
ಪರಿಹಾರ : ಶ್ರೀಗಣೇಶ ಏಕವಿಂಶತಿನಾಮಾವಳಿ ಪಠಿಸಿ
ಸಿಂಹ : ಕುಟುಂಬ ಸದಸ್ಯರಿಗೆ ಅಸೌಖ್ಯ ಉಂಟಾಗುವ ಸಾಧ್ಯತೆ ಇದೆ. ಅಪ್ಪ ಮಕ್ಕಳ ನಡುವೆ ಕಲಹ ಉಂಟಾಗುವ ಸಾಧ್ಯತೆಗಳಿದೆ. ಕೆಲಸ ಕಾರ್ಯದಲ್ಲಿ ಪ್ರಗತಿ ಕಂಡು ಬರುವುದಿಲ್ಲ. ಧನ, ದ್ರವ್ಯ ನಷ್ಟವಾಗಲಿದೆ. ಅತ್ಯಂತ ಎಚ್ಚರಿಕೆಯಿಂದ ಇಂದಿನ ದಿನವನ್ನು ಕಳೆಯಿರಿ
ಪರಿಹಾರ : ಶ್ರೀಗಣೇಶ ಚಿಂತಾಮಣಿ ಷಟ್ಪದಿ ಪಠಿಸಿ
ಕನ್ಯಾ : ಸ್ವಂತ ವ್ಯಾಪಾರದಲ್ಲಿ ತೊಡಗಿಸಿಕೊಂಡವರಿಗೆ ಧನ ಲಾಭವಾಗಲಿದೆ. ತರ್ಕಾರಿ ಬೆಳಗಾರರಿಗೆ ಇಂದು ಅತ್ಯಧಿಕ ಲಾಭವಾಗಲಿದೆ. ತರಕಾರಿ ಮಾರಾಟಗಾರರು ಗೆಲುವಿನ ನಗೆ ಬೀರಲಿದ್ದಾರೆ. ತೀರ್ಥ ಕ್ಷೇತ್ರಗಳ ಭೇಟಿಗೆ ಇಂದು ಸಕಾಲ
ಪರಿಹಾರ : ಶ್ರೀಗಣೇಶ ಚಿಂತಾಮಣಿ ಷಟ್ಪದಿ ಪಠಿಸಿ
ತುಲಾ : ಕಾಡುತ್ತಿದ್ದ ದಾಂಪತ್ಯ ಕಲಹ ದೂರವಾಗಿ, ಅನ್ಯೋನ್ಯತೆ ಮೂಡಲಿದೆ. ಮೂತ್ರಪಿಂಡ ಮತ್ತು ಮೂತ್ರಕೋಶಕ್ಕೆ ಸಂಬಂಧಿಸಿದ ಅನಾರೋಗ್ಯ ನಿಮ್ಮನ್ನು ಕಾಡಲಿದೆ. ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಷ್ಟೇನೂ ಪ್ರಗತಿ ಇರುವುದಿಲ್ಲ.
ಪರಿಹಾರ : ಶ್ರೀಗಣೇಶ ಪಂಚರತ್ನ ಸ್ತೋತ್ರ ಪಠಣ
ವೃಶ್ಚಿಕ : ಅದೆಷ್ಟು ಪ್ರಯತ್ನ ಪಟ್ಟರೂ ನಿಮ್ಮ ಕೆಲಸ ಕಾರ್ಯಗಳಲ್ಲಿ ಇಂದಿನ ಮಟ್ಟಿಗೆ ಪ್ರಗತಿ ಇರೋದಿಲ್ಲ. ಮಾನಸಿಕ ಚಿಂತೆ ನಿಮ್ಮನ್ನು ಕಾಡಲಿದೆ. ಅನಿರೀಕ್ಷಿತವಾಗಿ ಅಪಮಾನ ಮತ್ತು ಅಪನಿಂದೆಗೆ ಒಳಗಾಗಲಿದ್ದೀರಿ. ಅತ್ಯಂತ ಮುಂಜಾಗ್ರತೆಯಿಂದ ಇರಿ
ಪರಿಹಾರ : ಶ್ರೀಗಣೇಶಸ್ತವ ಸ್ತೋತ್ರ ಪಠಿಸಿ
ಧನಸ್ಸು : ಇಂದು ನಿಮಗೆ ಮಾನಸಿಕ ಸುಖ ಶಾಂತಿ ನೆಮ್ಮದಿ ಪ್ರಾಪ್ತವಾಗಲಿದೆ. ಅಂದುಕೊಂಡ ಎಲ್ಲಾ ಕೆಲಸಗಳಲ್ಲಿ ನಿರೀಕ್ಷೆಗಿಂತ ಅಧಿಕ ಪ್ರಗತಿ ಲಭಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವವರಿಗೆ ಇಂದಿನ ದಿನ ಅತ್ಯಂತ ಹರ್ಷ ತರಲಿದೆ
ಪರಿಹಾರ : ಶ್ರೀಗಣೇಶಚಾಲೀಸ ಪಠಿಸಿ
ಮಕರ : ವೃತ್ತಿ ಮತ್ತು ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸವಾಗಲಿದೆ. ಖನಿಜ ವ್ಯಾಪಾರದಲ್ಲಿ ತೊಡಗಿರುವವರಿಗೆ ಧನ ಲಾಭವಾಗಲಿದೆ. ವಜ್ರದ ವ್ಯಾಪಾರಿಗಳಿಗೆ ಬಂಪರ್ ಲಾಭವಾಗಲಿದೆ. ಒಟ್ಟಿನಲ್ಲಿ ಶುಭದಾಯಕ ದಿನವಾಗಲಿದೆ
ಪರಿಹಾರ : ಶ್ರೀಗಣಪತಿತಾಳಂ ಸ್ತೋತ್ರ ಪಠಿಸಿ
ಕುಂಭ : ಇಂದು ನಿಮ್ಮ ಕನಸುಗಳು ಸಾಕಾರವಾಗಲಿದೆ. ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಸೌಖ್ಯ ಲಭಿಸಲಿದೆ. ತಾಯಿಯ ಅನಾರೋಗ್ಯಕ್ಕೂ ಮುಕ್ತಿ ಸಿಗಲಿದೆ.
ಪರಿಹಾರ : ಶ್ರೀ ಅಕ್ಷರಮಾಲಾ ಸ್ತೋತ್ರ ಪಠಿಸಿ
ಮೀನ : ಭುಜ ಮತ್ತು ಮೂಳೆಗೆ ಸಂಬಂಧಿಸಿದ ಅನಾರೋಗ್ಯ ಕಾಡಲಿದೆ. ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ನಿರ್ಲಕ್ಷ್ಯ ಬೇಡ. ಕೆಲಸ ಕಾರ್ಯಗಳಲ್ಲಿ ಉತ್ತಮ ಅಭಿವೃದ್ಧಿ ಲಭಿಸಲಿದೆ. ವ್ಯಾಪಾರ ವ್ಯವಹಾರದಲ್ಲೂ ದನ ಲಾಭವಾಗಲಿದೆ
ಪರಿಹಾರ : ಶ್ರೀಗಣೇಶ ದೂರ್ವಪಂಚಕಂ ಪಠಿಸಿ
Discussion about this post