ಅಬ್ ಕಿ ಬಾರ್, 400 ಪಾರ್ ಅನ್ನೋ ಭರವಸೆಯೊಂದಿಗೆ ಕಣಕ್ಕಿಳಿದಿರುವ ಬಿಜೆಪಿಯ ಚುನಾವಣಾ ರಣ ತಂತ್ರವೇ ಬದಲಾಗಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವರಸೆಯೂ ಈ ಬಾರಿ ಬದಲಾಗಿದೆ.
ಪ್ರತೀ ಸಲ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಹರಿ ಹಾಯುತ್ತಿದ್ದ ನರೇಂದ್ರ ಮೋದಿ ಈ ಬಾರಿ ಭಾವನೆಗಳ ಮೂಲಕ ಮತ ಸೆಳೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತ್ರ ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್ನ ಆದೇಶವನ್ನು ಪ್ರಶ್ನಿಸಲು ಯೋಜಿಸುತ್ತಿದೆ. ಅಂತಿಮವಾಗಿ ದೇವಾಲಯವನ್ನು ಕೆಡವಲಿದೆ ಎಂದು ಆರೋಪಿಸಿದ್ದಾರೆ.
ಇಂಡಿಯಾ’ ಮೈತ್ರಿಕೂಟ (INDIA Alliance) ಅಧಿಕಾರಕ್ಕೆ ಬಂದ್ರೆ ರಾಮಮಂದಿರವನ್ನು (Ram Mandir) ಕಾಂಗ್ರೆಸ್ ಬುಲ್ಡೋಜರ್ನಿಂದ ಬೀಳಿಸುತ್ತದೆ ಎಂದು ಗಂಭೀರ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ರಾಮಲಲ್ಲಾನನ್ನು ಟೆಂಟ್ಗೆ ಕಳುಹಿಸಲಿದೆ ಅಂದರು.
Discussion about this post