ಪುತ್ತಿಲ ಪರಿವಾರ ವಿಸರ್ಜಿಸಿ ವಿಷಾಧ ವ್ಯಕ್ತಪಡಿಸಿ ಪಕ್ಷಕ್ಕೆ ಬರಲಿ
ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ ಅನ್ನುವ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ ಮತ್ತೆ ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿ ಜೋರಾಗಿದೆ.
ಈ ನಡುವೆ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪುತ್ತೂರು ನಾಯಕರಿಂದಲೇ ವಿರೋಧ ವ್ಯಕ್ತವಾಗುತ್ತಿರುವುದು ಸುಳ್ಳಲ್ಲ. ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಅನೇಕ ನಾಯಕರು ಪುತ್ತಿಲ ಬರುವುದಾದ್ರೆ ಬರ್ಲಿ, ಷರತ್ತು ಒಪ್ಪಿ ಬರ್ಲಿ ಎಂದು ಹೇಳಿದ್ದಾರೆ. ಪುತ್ತಿಲ ಅವರನ್ನು ಘರ್ ವಾಪ್ಸಿ ಮಾಡಲೇಬೇಕು ಎಂದು ಪಣ ತೊಟ್ಟಿರುವ ರಾಜ್ಯ ನಾಯಕರಿಗೆ ಈ ಹಗ್ಗಜಗ್ಗಾಟ ತಲೆ ನೋವಾಗಿ ಪರಿಣಮಿಸಿದೆ.
ಇದೀಗ ಈ ಬೆಳವಣಿಗೆ ಕುರಿತಂತೆ ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿದ್ದು, ಪುತ್ತಿಲ ಬಿಜೆಪಿ ಸೇರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ತಾವೇ ಕಟ್ಟಿ ಬೆಳೆಸಿದ ಪುತ್ತಿಲ ಪರಿವಾರವನ್ನು ಅದಿಕೃತವಾಗಿ ವಿಸರ್ಜಿಸಿ ಪಕ್ಷಕ್ಕೆ ಬರಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ
ಈ ಬಗ್ಗೆ ಶುಕ್ರವಾರ ಪುತ್ತೂರಿನಲ್ಲಿ ಮಾತನಾಡಿರುವ ಮಠಂದೂರು, ಪಕ್ಷದ ಸಂವಿಧಾನ ಒಪ್ಪಿಕೊಂಡು ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಯಾರೇ ಆಗ್ಲಿ ಪಕ್ಷಕ್ಕೆ ಬರಬಹುದು. ಹಾಗಂತ ಬೇಡಿಕೆ ಇಟ್ಟು ಪಕ್ಷಕ್ಕೆ ಬರುವಂತಿಲ್ಲ. ಹೀಗಾಗಿ ಪುತ್ತಿಲ ಕಟ್ಟಿಕೊಂಡಿರುವ, ತಾವೇ ಕಟ್ಟಿ ಬೆಳೆಸಿದ ಪುತ್ತಿಲ ಪರಿವಾರ ವಿಸರ್ಜಿಸಿ ಬರಬೇಕು ಎಂದು ಮಠಂದೂರು ಆಗ್ರಹಿಸಿದ್ದಾರೆ.
ಇದರೊಂದಿಗೆ ಕಳೆದ ಬಾರಿಯ ಚುನಾವಣೆ ಸಂದರ್ಭದಲ್ಲಿ ಸಂಘಟನೆ ಹಿರಿಯರ ಬಗ್ಗೆ ಪುತ್ತಿಲ ಅವರಾಡಿದ ಮಾತುಗಳು ಸಾಕಷ್ಟು ನೋವು ಉಂಟು ಮಾಡಿದೆ. ಹೀಗಾಗಿ ಈ ಬಗ್ಗೆ ವಿಷಾದ ವ್ಯಕ್ತಪಡಿಸಬೇಕು ಎಂದು ಸಂಜೀವ ಮಠಂದೂರು ಹೇಳಿದ್ದಾರೆ.
ಇದನ್ನೂ ಓದಿ : 10 ದಿನಗಳಲ್ಲಿ 21 ಜನರಿಗೆ ಸೋಂಕು : ಮಂಗನ ಕಾಯಿಲೆಯಿಂದ ತತ್ತರಿಸಿದ ಉತ್ತರಕನ್ನಡ
ಮುಂದಿನ ರಾಜಕೀಯ ನಡೆ ಕುರಿತಂತೆ ಚರ್ಚಿಸಲು ಅರುಣ್ ಪುತ್ತಿಲ ಫೆಬ್ರವರಿ 5 ರಂದು ಅಭಿಮಾನಿಗಳ ಸಭೆ ಕರೆದಿದ್ದಾರೆ. ಸಭೆ ಕರೆದ ಬೆನ್ನಲ್ಲೇ ಮಠಂದೂರು ಹೇಳಿಕೆ ನೀಡಿರುವುದು ದಕ್ಷಿಣ ಕನ್ನಡದ ಹಿಂದೂ ಕಾರ್ಯಕರ್ತರಲ್ಲಿ ಚರ್ಚೆಗೆ ಕಾರಣವಾಗಿದೆ. ಹಿಂದೊಮ್ಮೆ ಇದೇ ಸಂಜೀವ ಮಠಂದೂರು ಅರುಣ್ ಪುತ್ತಿಲ ಅವರನ್ನು ಅಣಬೆಗೆ ಹೋಲಿಸಿದ್ರು ಅನ್ನೋ ಆರೋಪ ಕೂಡಾ ಕೇಳಿ ಬಂದಿತ್ತು. ಜೊತೆಗೆ ಪುತ್ತಿಲ ಪರವಾಗಿ ದೊಡ್ಡ ಸಂಖ್ಯೆ ಕಾರ್ಯಕರ್ತರು ಇದ್ದಾರೆ ಅನ್ನೋದು ಕಳೆದ ಬಾರಿಯ ಚುನಾವಣೆಯಲ್ಲಿ ಸಾಬೀತಾಗಿತ್ತು.
ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿಗೆ ಸೇರಿದಂತೆ ರಾಜಕೀಯ ಭವಿಷ್ಯ ಇಲ್ಲ, ಬಿಜೆಪಿ ನಾಯಕರ ಷರತ್ತಿಗೆ ಒಪ್ಪಿಗೆ ಬಿಜೆಪಿಗೆ ಹೋದ್ರೆ ಭವಿಷ್ಯದಲ್ಲಿ ನಾನು ರಾಜಕೀಯವಾಗಿ ಮೂಲೆ ಗುಂಪಾಗುತ್ತೇನೆ ಅನ್ನೋದು ಅರುಣ್ ಪುತ್ತಿಲ ಅವರಿಗೂ ಗೊತ್ತಿದೆ. ಹೀಗಾಗಿ ಪಕ್ಷದಲ್ಲೊಂದು ಗೌರವದ ಹುದ್ದೆ ಕೊಡಿ ಎಂದು ಪುತ್ತಿಲ ಪರಿವಾರ ಬೇಡಿಕೆ ಇಟ್ಟಿದೆ. ಈ ಹಿಂದೆ ಸಂಘಟನೆಗಾಗಿ ದುಡಿದ ಸತ್ಯಜಿತ್ ಸುರತ್ಕಲ್, ಪ್ರವೀಣ್ ವಾಲ್ಕೆ ಸೇರಿದಂತೆ ಅನೇಕ ನಾಯಕರನ್ನು ಹೇಗೆ ಸೈಡ್ ಲೈನ್ ಮಾಡಿದ್ರು ಅನ್ನೋದು ಈಗ ಇತಿಹಾಸ. ಹೀಗಾಗಿಯೇ ಪುತ್ತಿಲ ಪರಿವಾರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ.
Discussion about this post