ಶುಭ ರಕ್ಷಾ 2024ರಲ್ಲಿ ಸದ್ದು ಮಾಡೋ ಎಲ್ಲಾ ಲಕ್ಷಣಗಳಿದೆ Shubha Raksha
ಆಪಲ್ ಕೇಕ್ ಅನ್ನೋ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶುಭ ರಕ್ಷಾ, ( Shubha Raksha ) ಹಲವು ಚಿತ್ರಗಳ ಮೂಲಕ ಗ್ಲಾಮರ್ ಬೆಡಗಿಯಾಗಿ ಗುರುತಿಸಿಕೊಂಡಿದ್ದಾರೆ. ಆಪಲ್ ಕೇಕ್ ಅನ್ನೋ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಶುಭಾ ರಕ್ಷಾ ಅವರ ಮೊದಲ ಸಿನಿಮಾ ನಿರೀಕ್ಷೆಯಷ್ಟು ಸದ್ದು ಮಾಡಲಿಲ್ಲ. ಆದರೆ ಓಟಿಟಿಯಲ್ಲಿ ಮಾತ್ರ ಈ ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು.
ಆಪಲ್ ಕೇಕ್ ಸಿನಿಮಾದ ನಟನೆಯ ಕಾರಣದಿಂದಲೇ, ಟಿಪಿ ಕೈಲಾಸಂ ಅವರ ಕಥೆಯನ್ನು ಆಧರಿಸಿ ತೆಗೆದ ವಿಸ್ಮಿತ ಸಿನಿಮಾದ ಆಫರ್ ಶುಭಾ ಅವರಿಗೆ ಸಿಕ್ಕಿತ್ತು. ಆದಾದ ನಂತರ ಕೂಡ್ಲು ರಾಮಕಷ್ಣ ಅವರ ಮತ್ತೆ ಉದ್ಭವ ಚಿತ್ರದಲ್ಲಿ ಶುಭ ಕಾಣಿಸಿಕೊಂಡರು.
ಇದನ್ನೂ ಓದಿ : 18 ಜಿಲ್ಲೆ ಸಂಪರ್ಕಿಸೋ Peenya Flyover 4 ದಿನ ಬಂದ್
ಆದಾದ ನಂತರ ಹೋಮ್ ಮಿನಿಸ್ಟರ್ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡ ಶುಭ, ಈ ಚಿತ್ರದ ನಟನೆಗಾಗಿ ಬೆಸ್ಟ್ ಸಪೋರ್ಟಿಂಗ್ ಕ್ಯಾರೆಕ್ಟರ್ ಸೈಮಾ ಆವಾರ್ಡ್ ಗಿಟ್ಟಿಸಿಕೊಂಡರು. ಇದಾದ ಬಳಿಕ ದರ್ಶನ್ ನಟನೆಯ ರಾಬರ್ಟ್ ಸಿನಿಮಾದಲ್ಲೂ ಶುಭ ರಕ್ಷ ಕಾಣಿಸಿಕೊಂಡಿದ್ದಾರೆ.
ಕೇವಲ ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಮಿಂಚುತ್ತಿರುವ ನಟಿ, ಜೆಡಿ ಚಕ್ರವರ್ತಿ ನಟಿಸಿರುವ ಹೂ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಸಿನಿಮಾ ಮಾತ್ರವಲ್ಲದೆ ಸೀರಿಯಲ್ ಗಳಲ್ಲೂ ನಟಿಸುತ್ತಿರುವ ಶುಭ, ಕಾರ್ತಿಕ್ ನಿರ್ದೇಶನದ ತಮಿಳು ಮೆಗಾ ಧಾರಾವಾಹಿ ಕಾರ್ತಿಕೈ ದೀಪಂನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದರೊಂದಿಗೆ ಕೈ ತುಂಬಾ ಆಫರ್ ಗಳನ್ನು ಇಟ್ಟುಕೊಂಡಿರುವ ಶುಭ ರಕ್ಷಾ, MADX ENTERTAINMENT ನಿರ್ಮಿಸಲಿರುವ ಹೊಸ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಕನ್ನಡದಲ್ಲಿ ಸಿರಿ ನಿರ್ದೇಶನದ ಮಹಿಳಾ ಪ್ರಧಾನ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಲಿದೆ.
Discussion about this post