ಭಾರತೀಯ ರಸ್ತೆಗೆ ಒಗ್ಗದ ಬೈಕ್ ಗಳನ್ನು ಇನ್ನಾದರೂ ನಿಷೇಧಿಸಬಹುದೇ
ದುಬಾರಿ ಮೊತ್ತದ ಬೈಕ್ ಗಳು ಇದೀಗ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಶೋಕಿಗಾಗಿ ಬೈಕ್ ಬಳಸುವ ಮಂದಿ ಉಳಿದವರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದಾರೆ. ಇದೇ ರೀತಿಯಲ್ಲಿ 24 ಲಕ್ಷ ರೂಪಾಯಿ ಮೊತ್ತದ ಬೈಕ್ ಸ್ಪೀಡ್ ಟೆಸ್ಟ್ ಮಾಡಲು ಹೋದ ಸವಾರನೊಬ್ಬ ದುರಂತವಾಗಿ ಮೃತಪಟ್ಟಿದ್ದಾನೆ.
ಬೆಂಗಳೂರಿನ ಶೇಕ್ ನಾಸಿರ್ ಹಾಗೂ ಸೈಯದ್ ಮುದಾಸಿರ್ ಬೈಕ್ ಡೀಲರ್ಸ್ ವ್ಯವಹಾರ ಮಾಡಿಕೊಂಡಿದ್ದರು. ಸೈಯದ್ ಮುದಾಸಿರ್ ದುಬಾರಿ ಬೈಕ್ ಒಂದರ ಹುಡುಕಾಟದಲ್ಲಿದ್ದ. ಗ್ರಾಹಕರೊಬ್ಬರು ಕೊಟ್ಟ ಆರ್ಡರ್ ಸಲುವಾಗಿ ಬೆಸ್ಟ್ ಬೈಕ್ ಗಾಗಿ ಹುಡುಕಾಟ ನಡೆಸಿದ್ದ.
ಹೀಗೆ ಸಿಕ್ಕ ಬೈಕ್ ಒಂದರ Performance ತೋರಿಸಲು ಸೈಯದ್ ಮುದಾಸಿರ್, ಶೇಕ್ ನಾಸಿರ್ ಬಳಿ ಬಂದಿದ್ದ. ಕಳೆದ ರಾತ್ರಿ ಬೈಕ್ Performance ಪರೀಕ್ಷೆ ಮಾಡಲು ಇಬ್ಬರೂ ಮಾಧವ ಪಾರ್ಕ್ ಕಡೆಯಿಂದ ಅಶೋಕ ಪಿಲ್ಲರ್ ಕಡೆ ಬಂದಿದ್ದಾರೆ. ಈ ವೇಳೆ ಅತೀ ವೇಗದಲ್ಲಿದ್ದ ಬೈಕ್ ಕನಕಪಾಳ್ಯ ಕಡೆಯಿಂದ ಬರುತ್ತಿದ್ದ ಬಲೆನೊ ಕಾರಿಗೆ ಡಿಕ್ಕಿ ಹೊಡೆದಿದೆ.
ಈ ವೇಳೆ ಬೈಕ್ ರೈಡ್ ಮಾಡುತ್ತಿದ್ದ ಶೇಕ್ ನಾಸಿರ್(32) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಸೈಯದ್ ಮುದಾಸಿರ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಇದನ್ನೂ ಓದಿ : ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M
ರಾತ್ರಿ 10 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ 24 ಲಕ್ಷ ರೂಪಾಯಿ ಮೌಲ್ಯದ ಬಿಎಂಡಬ್ಲ್ಯೂ ಆರ್ ಆರ್ 1000 ಸಿಸಿ ಬೈಕ್ ಪುಡಿ ಪುಡಿಯಾಗಿದೆ.
ಅಪಘಾತದ ತೀವ್ರತೆ ಎಷ್ಟಿತ್ತು ಅಂದ್ರೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಶೇಕ್ ನಾಸಿರ್ ಕಾರಿಗೆ ಅಂಟಿ ಹೋಗಿದ್ದ. ಈ ವೇಳೆ ಹಿಂಬದಿ ಸವಾರ ಸೈಯದ್ ಮುದಾಸಿರ್ ಬೈಕ್ ನಿಂದ ಹಾರಿದ್ದನಂತೆ. ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Discussion about this post