PDO ಶೃತಿ ಗೌಡ ಅನೈತಿಕ ಸಂಬಂಧದ ಗಲಾಟೆಯಲ್ಲಿ ಇಬ್ಬರು ಮೃತಪಟ್ಟಿದ್ದರು
ವಕೀಲ ಅಮಿತ್ ಕೇಶವಮೂರ್ತಿ ( lawyer amit murder case ) ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿ ರಾಜೇಶ್ ಅವರನ್ನು ನ್ಯಾಯಾಲಯ ಆರೋಪಿ ಎಂದು ಘೋಷಿಸಿದೆ. PDO ಶೃತಿ ಗೌಡ ಅವರ ಪತಿಯಾಗಿದ್ದ ರಾಜೇಶ್, ವಕೀಲ ಅಮಿತ್ ಕೇಶವಮೂರ್ತಿಯವರನ್ನು ಗುಂಡಿಕ್ಕಿ ಕೊಲೆಗೈದಿದ್ದರು.
ತನ್ನ ಪತ್ನಿ ಶೃತಿಗೌಡ ಜೊತೆಗೆ ವಕೀಲ ಅಮಿತ್ ಕೇಶವಮೂರ್ತಿ ಸಂಬಂಧ ಇಟ್ಟುಕೊಂಡಿದ್ದಾನೆ ಅನ್ನುವ ಹಿನ್ನಲೆಯಲ್ಲಿ ರಾಜೇಶ್ ಗುಂಡಿಕ್ಕಿ ಕೊಲೆ ಮಾಡಿದ್ದ. ಈ ಬಗ್ಗೆ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ಪೂರ್ಣಗೊಳಿಸಿ ಜಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
ಇದನ್ನೂ ಓದಿ : Sonia Gandhi : ಸೋನಿಯಾ ಗಾಂಧಿ ಜೈಪುರಕ್ಕೆ ಶಿಫ್ಟ್ : ಏರುತ್ತಿರುವ ದೆಹಲಿ ಮಾಲಿನ್ಯ
ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರಿಂದ ಕೋರ್ಟ್ಗೆ 300 ಪುಟಗಳ ಚಾರ್ಜ್ಶೀಟ್ ಸಲ್ಲಿಕೆಯಾಗಿತ್ತು. ಪೊಲೀಸರು 47 ಮಂದಿ ಸಾಕ್ಷಿಗಳ ಹೇಳಿಕೆಯನ್ನ ದಾಖಲಿಸಿದ್ದರು.
ಈ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ರಾಜೇಶ್ ಅವರನ್ನು ಅಪರಾಧಿ ಎಂದು ಘೋಷಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಶಿಕ್ಷೆ ಪ್ರಕಟಿಸಿದ್ದು, ದೋಷಿ ರಾಜೇಶ್ಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಜೀವಾವಧಿ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 30ರ ಅಡಿಯಲ್ಲಿ 4 ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ ₹ 2 ಸಾವಿರ ದಂಡ ವಿಧಿಸಲಾಗಿದೆ. ₹ 1 ಲಕ್ಷ ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಲಾಗಿದೆ.
ಪ್ರಕರಣದ ಹಿನ್ನಲೆ
2017ರ ಜನವರಿ13 ರಂದು ಹೆಸರಘಟ್ಟ ಹತ್ತಿರದ ಆಚಾರ್ಯ ಕಾಲೇಜು ಬಳಿ ಶೃತಿಗೌಡ ಮತ್ತು ಕೇಶವಮೂರ್ತಿ ಒಂದೇ ಕಾರಿನಲ್ಲಿ ಕುಳಿತಿದ್ದ ವೇಳೆ ಸ್ಥಳಕ್ಕೆ ಬಂದ ರಾಜೇಶ್ ಗುಂಡಿಕ್ಕಿ ವಕೀಲರನ್ನು ಹತ್ಯೆ ಮಾಡಿದ್ದ. ಶೃತಿಗೌಡ ಜೊತೆಗೆ ಕೇಶವಮೂರ್ತಿ ಅನೈತಿಕ ಸಂಬಂಧ ಹೊಂದಿದ್ದಾನೆ ಅನ್ನೋದು ಆತನ ಆರೋಪವಾಗಿತ್ತು.
ರಾಜೇಶ್ ತನ್ನ ಹೆಂಡತಿ ಶೀಲದ ಮೇಲೆ ಅನುಮಾನ ಪಟ್ಟು ಶೃತಿಗೌಡ ಕಾರಿಗೆ GPS ಅಳವಡಿಸಿದ್ದ. ಜ.13ರಂದು ಶೃತಿಯವರ ಕಾರು ಹೆಸರಘಟ್ಟ ರಸ್ತೆಯ ಆಚಾರ್ಯ ಕಾಲೇಜು ಬಳಿ ನಿಂತಿತ್ತು. ಶೃತಿ ಗಂಡ ರಾಜೇಶ್ ಮತ್ತು ಮಾವ ಗೋಪಾಲಕೃಷ್ಣ ಕಾರಿನ ಬಳಿ ಬಂದಿದ್ರು. ಈ ವೇಳೆ ಗನ್ ತೆಗೆದ ರಾಜೇಶ್ ಶೃತಿ ಜೊತೆ ಮಾತಾಡ್ತಿದ್ದ ಅಮಿತ್ ಎದೆಗೆ ಗುಂಡು ಹಾರಿಸಿದ್ದ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿತ್ತು.
ಇದನ್ನೂ ಓದಿ : ಪತ್ನಿಗೆ ವಿಚ್ಛೇದನ ನೀಡಿದ ರೇಮಂಡ್ ಗ್ರೂಪ್ನ ಗೌತಮ್ ಹರಿ ಸಿಂಘಾನಿಯಾ Gautam Singhnia
ಈ ವೇಳೆ ಗುಂಡೇಟು ತಿಂದು ಬಿದ್ದ ಕೇಶವಮೂರ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಶೃತಿಗೌಡ, ಆಸ್ಪತ್ರೆ ಮುಂಭಾಗದ ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೇಸ್ಬುಕ್ ಮೂಲಕ ಶೃತಿ ಅಮಿತ್ ಪರಿಚಯವಾಗಿತ್ತು. ಈ ಗೆಳೆತನದ ಬಗ್ಗೆ ಆಗಸ್ಟ್ 2016ರಲ್ಲೇ ಅಮಿತ್ ಪತ್ನಿಗೆ ಗೊತ್ತಾಗಿತ್ತು. ನಿಮ್ಮ ಪತ್ನಿಯ ನಡತೆ ಸರಿ ಇಲ್ಲ ಎಂದು ಶೃತಿಗೌಡ ಪತಿ ರಾಜೇಶ್ಗೆ ಅಮಿತ್ ಪತ್ನಿ ಎಚ್ಚರಿಕೆ ಕೊಟ್ಟಿದ್ದರಂತೆ. ನೀವು ಶೃತಿಯವರಿಗೆ ಎಚ್ಚರಿಕೆ ನೀಡಿ, ನಾನು ಅಮಿತ್ಗೆ ಎಚ್ಚರಿಕೆ ಕೊಡ್ತೀನಿ ಅಂತ ರಂಜಿತಾ ಹೇಳಿದ್ರು. ಇದು ಗೊತ್ತಾಗಿ ರಾಜೇಶ್ ಶೃತಿಗೆ ಹೊಡೆದು ಮನೆಯಲ್ಲೇ ಕೂಡಿ ಹಾಕಿದ್ದನಂತೆ. ಈ ಬಗ್ಗೆ ಶೃತಿ ತನ್ನ ಪೋಷಕರ ಬಳಿ ನೋವು ತೋಡಿಕೊಂಡಿದ್ದು, ಅನುಮಾನ ಬೇಡ ಎಂದು ಶೃತಿ ಪೋಷಕರು ರಾಜೇಶ್ಗೆ ಹೇಳಿದ್ದರು.
ಸಂಸಾರದ ಎಲ್ಲಾ ನಿರ್ವಹಣೆ ಹೊಣೆ ಶೃತಿಯೇ ನೋಡಿಕೊಳ್ಳುತ್ತಿದ್ದರು. 2011ರಲ್ಲಿ 2ನೇ ಮಗುವೂ ಹೆಣ್ಣಾಗಿದ್ದಕ್ಕೆ ರಾಜೇಶ್ ಪತ್ನಿಗೆ ಮಾನಸಿಕ ಹಿಂಸೆ ಕೂಡಾ ನೀಡುತ್ತಿದ್ದ. ತವರು ಮನೆಯ ಹೋಗಿ ಆಸ್ತಿ ಸಮ ಭಾಗ ಮಾಡಿಸು ಅಂತಾ ರಾಜೇಶ್ ಶೃತಿ ಬಳಿ ಜಗಳ ಮಾಡುತ್ತಿದ್ದನಂತೆ. ರಾಜೇಶ್ ಯಾವುದೇ ಕೆಲಸಕ್ಕೆ ಹೋಗದೇ ಪತ್ನಿ ಶೃತಿ ಸಂಪಾದನೆಯಲ್ಲಿ ಜೀವನ ನಡೆಸುತ್ತಿದ್ದ ಅನ್ನಲಾಗಿದೆ.
ಪ್ರಕರಣದ ತನಿಖೆ ನಡೆಸಿದ್ದ ಸರ್ಕಲ್ ಇನ್ ಸ್ಪೆಕ್ಟರ್ ಜಿ. ಪ್ರವೀಣ್ ಬಾಬು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ವಿಶೇಷ ಅಭಿಯೋಜಕರಾಗಿ ಹಿರಿಯ ವಕೀಲ ಸಿ ಎಚ್ ಹನುಮಂತರಾಯ ವಾದ ಮಂಡಿಸಿದ್ದರು. ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದ ರಾಜೇಶ್ ತಂದೆ ಗೋಪಾಲಕೃಷ್ಣ (82) ವಿಚಾರಣೆಗೂ ಮುನ್ನವೇ ಮೃತಪಟ್ಟಿದ್ದರು.
Discussion about this post