ಚೀನಾ ಯುದ್ಧ ನೌಕೆ ಲಂಗರು ಹಾಕಿರೋದು ಇದೀಗ ಭಾರತಕ್ಕೆ ಹೊಸ ತಲೆನೋವಾಗಿದೆ ( Warships In Karachi )
ಭಾರತದ ವಿರುದ್ಧ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಕಮ್ಯುನಿಸ್ಟ್ ರಾಷ್ಟ್ರ ಚೀನಾ ಇದೀಗ ಮತ್ತೊಮ್ಮೆ ಕಿರಿ ಕಿರಿ ಮಾಡಲು ಮುಂದಾಗಿದೆ. ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ತನ್ನ ಯುದ್ಧ ನೌಕೆಗಳನ್ನು ( Warships In Karachi ) ತಂದಿರಿಸಿರುವ ಚೀನಾ ಭಾರತಕ್ಕೆ ಸಂದೇಶ ರವಾನಿಸಲು ಮುಂದಾಗಿದೆ.
ಈಗಾಗಲೇ ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ಮುಂದಾಗುತ್ತಿರುವ ಚೀನಾ ಪಾಕಿಸ್ತಾನದ ನೆಲದಲ್ಲಿ ನೆಲೆ ಬಲಗೊಳಿಸುವ ಮೂಲಕ ಭಾರತಕ್ಕೆ ತಲೆನೋವು ತಂದಿಡಲು ಯತ್ನಿಸುತ್ತಿದೆ.
ಇದನ್ನು ಓದಿ : ಬ್ಯಾಂಕ್ ಹಣವನ್ನೇ ಲೂಟಿ ಹೊಡೆದ ಯೂನಿಯನ್ ಬ್ಯಾಂಕ್ ( union bank) ಸ.ಮ್ಯಾನೇಜರ್
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಚೀನಾದೊಂದಿಗೆ ಸೇರಿಕೊಂಡು ಸೀಗಾರ್ಡಿಯನ್ ಹೆಸರಿನಡಿಯಲ್ಲಿ ಅತಿ ದೊಡ್ಡ ನೌಕಾ ತಾಲೀಮು ಪ್ರಾರಂಭಿಸಿದೆ. ಚೀನಾವೇ ಈ ತಾಲೀಮಿನ ಪ್ರಾಯೋಜಕತ್ವ ವಹಿಸಿಕೊಂಡಿರುವುದು ಸುಳ್ಳಲ್ಲ.
ತಾಲೀಮು ಸಲುವಾಗಿ ಚೀನಾದ ಯುದ್ಧನೌಕೆ, ಸಬ್ ಮೆರೀನ್ ಮತ್ತು ನೌಕಾ ಪಡೆಯ ಇತರ ಹಡಗುಗಳು ಕರಾಚಿ ಬಂದರಿಗೆ ಆಗಮಿಸಿದ್ದು ಲಂಗರು ಹಾಕಿದೆ. ಈ ಬಗ್ಗೆ ಮ್ಯಾಕ್ಸರ್ ಟೆಕ್ನಾಲಜೀಸ್ ಉಪಗ್ರಹ ಚಿತ್ರವೊಂದನ್ನು ನೀಡಿದ್ದು, ಲಂಗರು ಹಾಕಿರುವ ಹಡುಗಳ ಸುತ್ತ ಯಾರೊಬ್ಬರೂ ಸುಳಿಯದಂತೆ ತಡೆಗೋಡೆಯನ್ನನು ನಿರ್ಮಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Vessel YANGCHENGHU a suspected PLA NAVY TYPE 926 Submarine Support Vessel, is currently approaching Karachi, it was tracked from China's Hainan Naval base & is likely en-route to Pakistan for the upcoming China-Pakistan Joint Naval Drills pic.twitter.com/04vJQY4reF
— Damien Symon (@detresfa_) November 8, 2023
Discussion about this post