ರೇಮಂಡ್ ಗ್ರೂಪ್ನ ಮಾಲೀಕನ 37 ವರ್ಷಗಳ ದಾಂಪತ್ಯ ಜೀವನ ಅಂತ್ಯ Gautam Singhnia
ಮುಂಬೈ: ರೇಮಂಡ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಹರಿ ಸಿಂಘಾನಿಯಾ ( Gautam Singhnia )ಅವರು ತಮ್ಮ ಪತ್ನಿ ನವಾಜ್ ಮೋದಿ ಸಿಂಘಾನಿಯಾ ಅವರಿಂದ ಬೇರ್ಪಟ್ಟಿರುವುದಾಗಿ ಸೋಮವಾರ ಘೋಷಿಸಿದ್ದಾರೆ.
ಥಾಣೆಯ ಜೆಕೆ ಗ್ರಾಮ್ನ ಗೇಟ್ ಹೊರಗೆ ಧರಣಿ ಕುಳಿತಿರುವ ನವಾಜ್ ಮೋದಿ ಸಿಂಘಾನಿಯಾ ಅವರು ಸರಣಿ ವೀಡಿಯೊಗಳನ್ನು ಪೋಸ್ಟ್ ಮಾಡಿದ ಬೆನ್ನಲ್ಲೇ ಸಿಂಘಾನಿಯಾ ಅವರು ತಾವು ಪತ್ನಿಯಿಂದ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ.
ಇದನ್ನೂ ಓದಿ : ವರ್ತೂರು ಸಂತೋಷ್ : Bigg Boss ಮನೆಯಲ್ಲೇ ಮುಂದವರಿಯಲು ನಿರ್ಧಾರ
ತನ್ನ ಪತಿ ಆಯೋಜಿಸಿದ್ದ ದೀಪಾವಳಿ ಪಾರ್ಟಿಗೆ ತನಗೆ ಪ್ರವೇಶ ನೀಡಲು ಸಿಂಘಾನಿಯಾ ಪ್ರಧಾನ ಕಛೇರಿಯ ಭದ್ರತಾ ಸಿಬ್ಬಂದಿ ನಿರಾಕರಿಸುತ್ತಿದ್ದಾರೆ ಎಂದು ನವಾಜ್ ಮೋದಿ ಸಿಂಘಾನಿಯಾ ಆರೋಪಿಸಿದ್ದು, ವೀಲ್ ಚೇರ್ನಲ್ಲಿ ಪಾರ್ಟಿಗೆ ಆಗಮಿಸಿದ ಮೋದಿ-ಸಿಂಘಾನಿಯಾ ಅವರನ್ನು ಭದ್ರತಾ ಸಿಬ್ಬಂದಿ ತಡೆ ವೇಳೆ ಈ ಹಂಗಾಮ ಎಬ್ಬಿಸಲಾಗಿದೆ.
ಈ ಹಿಂದೆ ಸೆಪ್ಟೆಂಬರ್ನಲ್ಲಿ ಗೌತಮ್ ಸಿಂಘಾನಿಯಾ ತನ್ನ 58 ನೇ ಹುಟ್ಟುಹಬ್ಬದಂದು ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮೋದಿ-ಸಿಂಘಾನಿಯಾ ಆರೋಪಿಸಿದ್ದರು. ಇದರ ಬೆನ್ನಲ್ಲೇ ಹಲ್ಲೆ ವೇಳೆ ಬೆನ್ನಿನ ಕೆಳ ಭಾಗದ ಮೂಳೆಗಳು ಮುರಿದಿದ್ದು ಸರ್ ಎಚ್ಎನ್ ರಿಲಯನ್ಸ್ ಆಸ್ಪತ್ರೆಯ ಐಸಿಯುನಲ್ಲಿ ತಾನು ದಾಖಲಾಗಿರೋದಾಗಿ ನವಾಜ್ ಮೋದಿ ಸಿಂಘಾನಿಯಾ ಆರೋಪಿಸಿದ್ದಾರೆ.
ಇದನ್ನೂ ಓದಿ : ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)
ರೇಮಂಡ್ ಗ್ರೂಪ್ ಪ್ರಸ್ತುತ ₹5700 ಕೋಟಿ ಮೊತ್ತದ ಕಂಪನಿಯಾಗಿದ್ದು ನವಾಜ್ ಮೋದಿ-ಸಿಂಘಾನಿಯಾ ಅವರು ಸಿಂಘಾನಿಯಾ ಕುಟುಂಬದ ಕನಿಷ್ಠ 10 ಕಂಪನಿಗಳಲ್ಲಿ ನಿರ್ದೇಶಕರಾಗಿದ್ದಾರೆ.
ಈ ನಡುವೆ ಥಾಣೆಯ ವರ್ತಕ್ ನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಹೆತ್ತವರು ಮತ್ತು ಒಡಹುಟ್ಟಿದವರೊಂದಿಗೆ ಸಿಂಘಾನಿಯಾ ಅನುಚಿತವಾಗಿ ವರ್ತಿಸಿದ್ದು, ಎರಡು ತಿಂಗಳ ಹಿಂದೆ ಅವರ ಮನೆಯಲ್ಲಿ ದೈಹಿಕವಾಗಿ ನನ್ನ ಮೇಲೆ ಹಲ್ಲೆ ನಡೆಸಿ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ನಾನು ಆತಂಕಿತಳಾಗಿದ್ದು ನ್ಯಾಯ ಕೊಡಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದರು.
ಇಷ್ಟೆಲ್ಲಾ ಬೆಳವಣಿಗೆ ನಡುವೆ ತಾನು ರಿಯಲ್ ಎಸ್ಟೇಟ್ ವ್ಯವಹಾರವನ್ನು ವಿಸ್ತರಿಸುವತ್ತ ಗಮನಹರಿಸಿರುವುದಾಗಿ ಘೋಷಿಸಿದ್ದ ಸಿಂಘಾನಿಯಾ ಬೆನ್ನಲ್ಲೇ ಪತ್ನಿಯಿಂದ ದೂರವಾಗುತ್ತಿರುವುದಾಗಿ ತಿಳಿಸಿದ್ದಾರೆ. “ಈ ದೀಪಾವಳಿಯು ಹಿಂದಿನ ದೀಪಾವಳಿಯಂತೆ ಇರೋದಿಲ್ಲ. 32 ವರ್ಷಗಳು ದಂಪತಿಯಾಗಿ ಒಟ್ಟಿಗೆ ಇದ್ದು, ಪೋಷಕರಾಗಿ ಬೆಳೆಯುತ್ತಾ ಮತ್ತು ಯಾವಾಗಲೂ ಪರಸ್ಪರ ಶಕ್ತಿಯ ಮೂಲವಾಗಿ… ನಾವು ಬದ್ಧತೆ, ಸಂಕಲ್ಪ, ನಂಬಿಕೆಯೊಂದಿಗೆ ಸಾಗಿದೆವು. ನವಾಜ್ ಮತ್ತು ನಾನು ಇಲ್ಲಿಂದ ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತೇವೆ. ನಮ್ಮ ಎರಡು ಅಮೂಲ್ಯ ವಜ್ರಗಳಾದ ನಿಹಾರಿಕಾ ಮತ್ತು ನಿಸಾ ಅವರಿ ಉತ್ತಮವಾದುದನ್ನೇ ನೀಡುತ್ತೇನೆ ಅಂದಿದ್ದಾರೆ.
Discussion about this post