ಮಜಾವಾದಿ ರಾಜಕಾರಣ : ಸಿದ್ದರಾಮಯ್ಯ ಸರ್ಕಾರದ ಅನ್ಯಾಯದ ಕಥೆಯಿದು
ಗೃಹಲಕ್ಷ್ಮಿಯಲ್ಲಿ ದೋಖಾ, ಗೃಹ ಜ್ಯೋತಿಯಲ್ಲೂ ಮೋಸ ಹೀಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇಳಿ ಬಂದಿರುವ ಆರೋಪಗಳು ಒಂದೆರಡಲ್ಲ. ಬಿಜೆಪಿಯ ಭ್ರಷ್ಟಚಾರದಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಜನ ಆಯ್ಕೆ ಮಾಡಿದ್ದರು. ಆದರೆ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಬಿಜೆಪಿ ಕಾಂಗ್ರೆಸ್ ಎರಡೂ ಕೂಡಾ ಒಂದೇ ನಾಣ್ಯದ ಎರಡು ಮುಖ ಅನ್ನೋದು ಅರ್ಥವಾಗಿದೆ.
ಹತ್ತಾರು ಭರವಸೆಗಳನ್ನು ಕೊಟ್ಟ ಕಾಂಗ್ರೆಸ್, ಅಧಿಕಾರಕ್ಕೆ ಬರುತ್ತಿದ್ದಂತೆ ಹಲವಾರು ಯೋಜನೆಗಳನ್ನು ವಾಪಾಸ್ ಪಡೆಯಲಾರಂಭಿಸಿದೆ. ಭಾಗ್ಯಗಳಿಗೆ ಕಾಸು ಒದಗಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳಿಗೆ ಕತ್ತರಿ ಬಿದ್ದಿದೆ.ಮತ್ತೊಂದು ಕಡೆ ಬರ ತಾಂಡವವಾಡುತ್ತಿದೆ. ಹೀಗಾಗಿ ಹಲವು ಆಚರಣೆಗಳಿಗೂ ಬ್ರೇಕ್ ಬಿದ್ದಿದೆ.
ಹಾಗಂತ ಸಿದ್ದರಾಮಯ್ಯ ಸಚಿವ ಸಂಪುಟದ ಸಚಿವರ ಮಜಾ ಜೀವನಕ್ಕೆ ಬ್ರೇಕ್ ಬಿದ್ದಿದೆಯೇ ಖಂಡಿತಾ ಇಲ್ಲ. ಈಗಾಗಲೇ ಮಂತ್ರಿಗಳಿಗೆ ಹೊಸ ಇನ್ನೋವ ಕಾರು ಸಲುವಾಗಿ ಕೋಟಿ ಕೋಟಿ ಹಣವನ್ನು ಸುರಿಯಲಾಗಿದೆ. ಮುಂದುವರಿದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಮಂತ್ರಿಗಳ ಮನೆ ಹಾಗೂ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ಲೆಕ್ಕದಲ್ಲಿ ಜನರ ತೆರಿಗೆ ದುಡ್ಡನ್ನು ಬಳಕೆ ಮಾಡಲಾಗಿದೆ.
ಇದನ್ನೂ ಓದಿ : ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್
ಈ ಬಗ್ಗೆ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಕನ್ನಡ ವಾಹಿನಿ ವರದಿಯೊಂದನ್ನು ಪ್ರಸಾರ ಮಾಡಿದ್ದು, ಸಚಿವರ ಮಜಾ ಜೀವನವನ್ನು ಅನಾವರಣ ಮಾಡಿದೆ. ಅಚ್ಚರಿ ಅಂದ್ರೆ ಸಚಿವರ ಕಚೇರಿ ನವೀಕರಣಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಲಾಗಿದೆ. ಹಾಗಾದ್ರೆ ಅದ್ಯಾವ ರೀತಿಯ ನವೀಕರಣವಿರಬಹುದು.
- ಸಿದ್ದರಾಮಯ್ಯ ಮನೆ ನವೀಕರಣ 3 ಕೋಟಿ ರೂಪಾಯಿ ವೆಚ್ಚ
- ಸಿಎಂ ಕಚೇರಿ ನವೀಕರಣ 50 ಲಕ್ಷ ರೂಪಾಯಿ ವೆಚ್ಚ
- ಡಿಸಿಎಂ ಕಚೇರಿ ನವೀಕರಣಕ್ಕೆ 50 ಲಕ್ಷ ರೂಪಾಯಿ
- ಡಿಸಿಎಂ ಡಿಕೆ ಶಿವಕುಮಾರ್ ಮನೆ ನವೀಕರಣಕ್ಕೆ 50 ಲಕ್ಷ
- ಸಚಿವ ಡಾ. ಜಿ ಪರಮೇಶ್ವರ್ ಕಚೇರಿ ನವೀಕರಣಕ್ಕೆ 15 ಲಕ್ಷ
- ಸಚಿವ ಡಾ. ಜಿ ಪರಮೇಶ್ವರ್ ಮನೆ ನವೀಕರಣಕ್ಕೆ 35 ಲಕ್ಷ
- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಚೇರಿ ನವೀಕರಣಕ್ಕೆ 10 ಲಕ್ಷ ರೂಪಾಯಿ
- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನೆ ನವೀಕರಣಕ್ಕೆ 25 ಲಕ್ಷ ರೂಪಾಯಿ ವೆಚ್ಚ
- ಕೆಜೆ ಜಾರ್ಜ್ ಕಚೇರಿ ನವೀಕರಣಕ್ಕೆ 8 ಲಕ್ಷ ರೂಪಾಯಿ
- ಸಚಿವ ಬೈರತಿ ಸುರೇಶ್ ಕಚೇರಿ ನವೀಕರಣಕ್ಕೆ 7 ಲಕ್ಷ ರೂಪಾಯಿ
- ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಕಚೇರಿ ನವೀಕರಣಕ್ಕೆ 10 ಲಕ್ಷ ರೂಪಾಯಿ
- ಸಚಿವ ಕೆ ಎನ್ ರಾಜಣ್ಣ ಕಚೇರಿ ನವೀಕರಣಕ್ಕೆ 10 ಲಕ್ಷ ರೂಪಾಯಿ
- ಸಚಿವ ಎಚ್. ಸಿ. ಮಹದೇವಪ್ಪ ಕಚೇರಿ ನವೀಕರಣಕ್ಕೆ 12 ಲಕ್ಷ ರೂಪಾಯಿ
- ಸಚಿವ ಎಂ.ಬಿ. ಪಾಟೀಲ್ ಕಚೇರಿ ನವೀಕರಣಕ್ಕೆ 10 ಲಕ್ಷ ರೂಪಾಯಿ
- ಸಚಿವ ಮಧು ಬಂಗಾರಪ್ಪ ಕಚೇರಿ ನವೀಕರಣಕ್ಕೆ 10 ಲಕ್ಷ ರೂಪಾಯಿ
- ಸಚಿವ ಕೃಷ್ಣಬೈರೇಗೌಡ ಅವರ ಕಚೇರಿ ನವೀಕರಣಕ್ಕೆ 15 ಲಕ್ಷ ರೂಪಾಯಿ
- ಸಚಿವ ಶಿವಾನಂದ ಪಾಟೀಲ್ ಕಚೇರಿ ನವೀಕರಣಕ್ಕೆ 8 ಲಕ್ಷ ರೂಪಾಯಿ
- ಸಚಿವ ಕೆ ಎಚ್ ಮುನಿಯಪ್ಪ ಕಚೇರಿ ನವೀಕರಣಕ್ಕೆ 10 ಲಕ್ಷ ರೂಪಾಯಿ
ಹಾಗಾದ್ರೆ ಹೊಸದಾಗಿ ಸಚಿವರಾಗಿ ಬಂದವರು ಕಚೇರಿ ನವೀಕರಣ ಮಾಡೋದು ತಪ್ಪಾ, ಖಂಡಿತಾ ಅಲ್ಲ, ಹಾಗಂತ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅನ್ನುವ ಗಾದೆ ಮಾತಿನಂತೆ ಆಡಬಾರದು ತಾನೇ. ಆದರೆ 2014ರಲ್ಲಿ ಸಿದ್ದರಾಮಯ್ಯನವರು ಹೀಗೆ ನವೀಕರಣ ಸಲುವಾಗಿ 1.92 ಕೋಟಿ ರೂಪಾಯಿ ವೆಚ್ಚ ಮಾಡಿದ್ದರು.
Discussion about this post