ಕಿಶೋರ್ ಅಮನ್ ಈ ಹಿಂದೆ ಸಾಕಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು, ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇದೀಗ ಪಿಲಿರಂಗ್ ವೇದಿಕೆಯಲ್ಲಿ
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವರಾತ್ರಿ ಅಂದ್ರೆ ಅದನ್ನು ಕಲರ್ ಫುಲ್ ಆಗಿಸೋದು ಹುಲಿವೇಷ. ಈ ಭಾಗದಲ್ಲಿ ಪಿಲಿ ವೇಷ ( ಪಿಲಿರಂಗ್ ) ಎಂದೇ ಖ್ಯಾತವಾಗಿರುವ ಈ ಸಂಪ್ರದಾಯ ಜಾನಪದ ಕಲೆ ಎಂದೇ ಪರಿಗಣಿತವಾಗಿದೆ ಮಾತ್ರವಲ್ಲದೆ ಇದೊಂದು ಆರಾಧನ ಕಲೆಯೂ ಹೌದು.
ಇದಾದ ನಂತ್ರ ಇದಕ್ಕೊಂದು ಸೆಲೆಬ್ರೆಟಿ ಪಟ್ಟ ಸಿಕ್ಕಿದ್ದು, ಹುಲಿವೇಷ ಸ್ಪರ್ಧೆಗಳು ಪ್ರಾರಂಭಗೊಂಡ ನಂತರ. ಅದರಲ್ಲೂ ಜಿಲ್ಲೆಯ ಹೃದಯ ಭಾಗವಾದ ಮಂಗಳೂರಿನಲ್ಲಿ ಪ್ರಾರಂಭವಾದ ಹುಲಿ ವೇಷದ ಸ್ಪರ್ಧೆಗಳು ಪಿಲಿ ವೇಷಕ್ಕೊಂದು ಹೊಸ ಖದರ್ ತಂದುಕೊಟ್ಟಿದ್ದು ಸುಳ್ಳಲ್ಲ.
ಫೋಟೋ ಕೃಪೆ ನಮ್ಮ ಕುಡ್ಲ ಯೂಟ್ಯೂಬ್
ಇದೀಗ ಹುಲಿವೇಷದ ಸ್ಪರ್ಧೆ ಪುತ್ತೂರಿನಲ್ಲೂ ಪ್ರಾರಂಭಗೊಂಡಿದೆ. ಪುತ್ತೂರಿನಲ್ಲಿ ಹುಲಿ ವೇಷಧಾರಿಗಳ ಸಂಖ್ಯೆ ಹೆಚ್ಚಾಗಿದೆ. ಹುಲಿ ವೇಷದ ಟೀಮ್ ಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಪುತ್ತೂರಿನಲ್ಲಿ ನಡೆಯುತ್ತಿದ್ದ ಪಿಲಿರಂಗ್ ಸ್ಪರ್ಧೆಗೆ ಈ ಬಾರಿ ಮತ್ತು ಪಿಲಿಗೊಬ್ಬ ಅನ್ನುವ ಹೊಸ ಸ್ಪರ್ಧಾ ವೇದಿಕೆಯೊಂದು ಸೇರ್ಪಡೆಯಾಗಿದೆ. ಈ ರೀತಿಯ ಸ್ಪರ್ಧಾ ವೇದಿಕೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಪಿಲಿರಂಗ್ ಸ್ಪರ್ಧೆ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಎರಡನೇ ವರ್ಷದ ಪಿಲಿರಂಗ್ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಂಡಗಳು ಉತ್ಸಾಹದಿಂದ ಪಾಲ್ಗೊಂಡಿದೆ.
ಈ ನಡುವೆ ಪಿಲಿರಂಗ್ ಹುಲಿ ವೇಷದ ಸ್ಪರ್ಧೆಯ ತೀರ್ಪುಗಾರರ ಪಟ್ಟದಲ್ಲಿ ಕಿಶೋರ್ ಅಮನ್ ಕಾಣಿಸಿರುವುದು ಅಚ್ಚರಿ ಹುಟ್ಟಿಸಿದೆ. ಇದೇ ಕಿಶೋರ್ ಅಮನ್ 2021ರ ಡ್ರಗ್ಸ್ ಪ್ರಕರಣದಲ್ಲಿ ಸುದ್ದಿಯಾಗಿದ್ದರು. ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿಸಿಕೊಂಡಾಗ ಕೊರಿಯೋಗ್ರಫರ್ ಕಿಶೋರ್ ಅಮನ್ ಹೆಸರು ಪ್ರಚಲಿತಕ್ಕೆ ಬಂದಿತ್ತು. ಮುಂದೆ ಡ್ರಗ್ಸ್ ಪ್ರಕರಣದ ಚಾರ್ಜ್ಶೀಟ್ನಲ್ಲಿ ಅನುಶ್ರೀ ಹೆಸರಿಲ್ಲ, ಕಿಶೋರ್ ಹೇಳಿಕೆಯಲ್ಲಷ್ಟೇ ಇದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟನೆ ಕೊಟ್ಟಿದ್ದರು. ಈ ವಿಚಾರ ಬಹಿರಂಗವಾದ ಬಳಿಕ ‘’ನಾನು ಆ ರೀತಿ ಹೇಳಿಕೆಯೇ ನೀಡಿಲ್ಲ’’ ಎಂದು ಕಿಶೋರ್ ಅಮನ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದರು.
ಆದಾದ ನಂತ್ರ ರೌಡಿಗಳ ಪರೇಡ್ ಒಂದರಲ್ಲಿ ಆಗಿನ ಕಮಿಷನರ್ ಶಶಿಕುಮಾರ್ ಕಿಶೋರ್ ಅಮನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
Discussion about this post