ಆನ್ ಲೈನ್ ನಲ್ಲಿ ಸಾಲ ಕೊಡುವ ಕ್ವಿಕ್ ಮನಿಯಂತಹ Appಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಅಪಾಯ
ಮಂಗಳೂರು : Quick money ಕ್ವಿಕ್ ಮನಿ ಅನ್ನುವ ಲೋನ್ ಆ್ಯಪ್ ಮೂಲಕ ಸಾಲ ಪಡೆದ ಯುವತಿಯ ಫೋಟೋ ಎಡಿಟ್ ಮಾಡಿ, ಬೆತ್ತಲೆ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಕ್ವಿಕ್ ಮನಿ’ ಸಂಸ್ಥೆ ವಿರುದ್ಧ ದೂರು ದಾಖಲಾಗಿದೆ.
ಈ ಸಂಬಂಧ ನೊಂದ ಯುವತಿಯೊಬ್ಬಳು ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು , ತಾನು ಎಪ್ರಿಲ್.15ರಂದು ಗೂಗಲ್ ಪ್ಲೇ ಸ್ಟೋರ್ನಿಂದ ‘ಕ್ವಿಕ್ ಮನಿ’ ಅನ್ನೋ ಲೋನ್ ಆ್ಯಪ್ ಡೌನ್ಲೋಡ್ ಮಾಡಿ 10,000 ರೂ. ಸಾಲಕ್ಕೆ ಅರ್ಜಿ ಹಾಕಿದ್ದೆ. ಇದಾದ ತಕ್ಷಣ ತನ್ನ ಖಾತೆಗೆ 7,500 ರೂ. ಜಮೆಯಾಗಿತ್ತು. ಕೆಲ ದಿನಗಳ ಬಳಿಕ ಸಾಲ ಮರುಪಾವತಿ ಮಾಡಿದ್ದೆ.
ಬಳಿಕ ಹಲವು ವಾಟ್ಸ್ಆ್ಯಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದ್ದು ಮಾತ್ರವಲ್ಲದೆ ಲನ್ನ ಖಾತೆಗೆ 14,000 ರೂ. ಜಮೆ ಮಾಡಿದ್ದರು. ಅದನ್ನು ಕೂಡ ತಾನು ಮರುಪಾವತಿ ಮಾಡಿದ್ದೆ. ಆ ಬಳಿಕವೂ ತನಗೆ ಕರೆ ಮಾಡಿದ ಅಪರಿಚಿತರು ಹೆಚ್ಚಿನ ಹಣ ಪಾವತಿ ಮಾಡುವಂತೆ ಒತ್ತಾಯಿಸಿದರು. ಹಾಗೂ ನನ್ನ ಖಾತೆಯಿಂದ 51,000 ರೂ. ವರ್ಗಾಯಿಸಿಕೊಂಡರು.
ಇದೀಗ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸುತ್ತಿದ್ದು. ಒಂದು ವೇಳೆ ಹಣ ನೀಡದಿದ್ದರೆ ನಿನ್ನ ಫೋಟೊವನ್ನು ಹುಡುಗನೊಂದಿಗೆ ನಗ್ನವಾಗಿ ಇರುವಂತೆ ಎಡಿಟ್ ಮಾಡಿ ಸ್ನೇಹಿತರು, ಸಂಬಂಧಿಕರಿಗೆ ಕಳುಹಿಸುವುದಾಗಿ, ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
Discussion about this post