ದೇವೇಗೌಡರ ಕಾರಣದಿಂದ ರಾಜಕೀಯ ನೇಪಥ್ಯಕ್ಕೆ ಸರಿದ ಮುದ್ದಹನುಮೇ ಗೌಡ ( Muddahanume gowda) ಮತ್ತೆ ಎದ್ದು ಬರಲೇ ಇಲ್ಲ. ಅವರಿಗೆ ಸಿಕ್ಕಿದ್ದು ಬರೀ ಅವಮಾನ
ತುಮಕೂರು : ಒಂದಿಷ್ಟು ವರ್ಷಗಳ ಕಾಲ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಹಿರಿಮೆಯನ್ನು ಕಾಂಗ್ರೆಸ್ ಮುಖಂಡ ಮುದ್ದಹನುಮೇ ಗೌಡ ( Muddahanume gowda) ಉಳಿಸಿಕೊಂಡಿದ್ದಾರೆ. ಸೇವೆ ಸಲ್ಲಿಸಿದ ಕಾಂಗ್ರೆಸ್ ಪಕ್ಷದಿಂದ ಸತತ ಅನ್ಯಾಯವಾದರೂ ನುಂಗಿಕೊಂಡು ಕೂತಿದ್ದ ಮುದ್ದಹನುಮೇ ಗೌಡ ಇದೀಗ ಗೌರವಯುತವಾಗಿ ಪಕ್ಷದಿಂದ ಹೊರ ಬರಲು ತೀರ್ಮಾನಿಸಿದ್ದಾರೆ. ಉಳಿದ ನಾಯಕರಂತೆ ಅವಕಾಶ ಕೊಟ್ಟ ಪಕ್ಷವನ್ನು ಹಾದಿ ಬೀದಿಯಲ್ಲಿ ಟೀಕಿಸದೆ ಕೈ ಪಾಳಯಕ್ಕೆ ಮುದ್ದಹನುಮೇ ಗೌಡ ಗುಡ್ ಬೈ ಹೇಳಲಿದ್ದಾರೆ.
2014ರಲ್ಲಿ ನಡೆದ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದ ಮುದ್ದಹನುಮೇ ಗೌಡರಿಗೆ 2019ರಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ದೇವೇಗೌಡರನ್ನು ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುದ್ದಹನುಮೇ ಗೌಡ ಸೈಡ್ ಲೈನ್ ಮಾಡಲಾಗಿತ್ತು. ಹೋಗ್ಲಿ ದೇವೇಗೌಡರ ಗೆದ್ರ ಇಲ್ಲ, ಬಿಜೆಪಿ ಅಲ್ಲಿ ಗೆಲುವಿನ ನಗೆ ಬೀರಿತ್ತು.
Read More : Puttur : ಪುತ್ತೂರಿನಲ್ಲಿ ಕರಿಮಣಿ ಎಳೆದ ಫೈಜಲ್ ಗ್ಯಾಂಗ್ ನ ಮತ್ತೊಂದು ಕೃತ್ಯ ಬೆಳಕಿಗೆ
ಈ ವೇಳೆ ಮುದ್ದಹನುಮೇ ಗೌಡ ಅವರಿಗೆ ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಕರೆ ಮಾಡಿ ರಾಜ್ಯಸಭಾ ಸದಸ್ಯರನ್ನಾಗಿ ಮಾಡೋದಾಗಿ ಹೇಳಿದ್ರು. ಆದರೆ ಅವರು ಕೊಟ್ಟ ಮಾತನ್ನು ಉಳಿಸಿಕೊಂಡಿರಲಿಲ್ಲ. 1994 ಮತ್ತು 1999 ರಲ್ಲಿ ಕುಣಿಗಲ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮುದ್ದಹನುಮೇ ಗೌಡ 2023ರಲ್ಲಿ ಇದೇ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ನಾನು ಲೋಕಸಭೆಯಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರಿಗಾಗಿ ನನ್ನ ಸ್ಥಾನ ತ್ಯಾಗ ಮಾಡಿದ್ದೆ. ಈಗ ನನಗಾಗಿ ಶಾಸಕ ಡಾ.ರಂಗನಾಥ್ ಸ್ಥಾನ ತ್ಯಾಗ ಮಾಡಲಿ ಎಂದು ಹೇಳುವ ಮೂಲಕ 2023ರ ವಿಧನಾಸಭಾ ಚುನಾವಣೆಗೆ ಕುಣಿಗಲ್ನಿಂದ ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ್ದರು.
ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಇಲ್ಲಿಂದ ಸ್ಪರ್ಧೆ ಮಾಡಬೇಕೆಂದು ಗಂಭೀರವಾಗಿ ಪರಿಗಣಿಸಿದ್ದೇನೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾರಿಗೂ ಈ ಬಗ್ಗೆ ಬೇಡಿಕೆ ಇಟ್ಟಿದ್ದೇನೆ. ರಾಜ್ಯ ಪಕ್ಷದ ಮುಖಂಡರಿಗೂ ಹೇಳಿದ್ದೇನೆ. ನಾನು ಕುಣಿಗಲ್ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದೆ. ಅಲ್ಲಿ ಹಾಲಿ ಶಾಸಕರಿರುವುದರಿಂದ ಟಿಕೆಟ್ ಕೊಡಲು ಆಗಲ್ಲ ಅಂತಿದ್ದಾರೆ. ನಾನೂ ಹಾಲಿ ಸಂಸದರಿರುವಾಗ ನನಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಕೊಟ್ಟಿದ್ದು ನೆನಪಿಸಿದೆ. ನಾನು ಅಂದು ತ್ಯಾಗ ಮಾಡಿದಕ್ಕೆ ಇಂದು ಕುಣಿಗಲ್ ಶಾಸಕರು ತ್ಯಾಗ ಮಾಡಲಿ ಅಂದಿದ್ದರು. ಆದರೆ ಡಿಕೆಶಿ ಸಂಬಂಧಿ ಡಾ.ರಂಗನಾಥ್ ಕುಣಿಗಲ್ ಕ್ಷೇತ್ರವನ್ನು ಬಿಟ್ಟುಕೊಡುವ ಯಾವ ಲಕ್ಷಣಗಳು ಇರಲಿಲ್ಲ.
ಈ ಎಲ್ಲಾ ಬೆಳವಣಿಗೆಗಳಿಂದ ಬೇಸರಗೊಂಡಿರುವ ಮುದ್ದಹನುಮೇ ಗೌಡ ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದಾರೆ. ಈ ಸಂಬಂಧ ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವ ಅವರು,ಪಕ್ಷದಿಂದ ಬಿಡುಗಡೆ ಮಾಡಿ ಎಂದು ಮನವಿ ಸಲ್ಲಿಸಿ ಬಂದಿದ್ದಾರೆ.
1989ರಲ್ಲಿ ಬಿ ಫಾರಂ ಕೊಟ್ಟು ನಂತರ ಬೇರೆಯವರನ್ನು ಕಣಕ್ಕಿಳಿಸಿದರು. 2019ರಲ್ಲಿ ಸಂಸದನಾಗಿದ್ದರೂ, ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಹೀಗೆ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧೆ ಮಾಡುವುದನ್ನು ತಪ್ಪಿಸಲಾಗಿದೆ. ಪಕ್ಷಕಕ್ಕೆ ನನ್ನದೇ ಆದ ಅಳಿಲು ಸೇವೆಯನ್ನು ಮಾಡಿದ್ದೇನೆ. ಪಕ್ಷ ಅಧಿಕಾರಕ್ಕೆ ಬರುವಲ್ಲಿ ನನ್ನ ಸೇವೆಯೂ ಇದೆ ಎಂದು ತಮ್ಮ ರಾಜೀನಾಮೆ ಬಗ್ಗೆ ಮುದ್ದಹನುಮೇ ಗೌಡ ಹೇಳಿದ್ದಾರೆ.
ಹಾಗಾದ್ರೆ ಮುದ್ದಹನುಮೇ ಗೌಡ ಮುಂದೇನು ಮಾಡ್ತಾರೆ, ಕುಣಿಗಲ್ ಕ್ಷೇತ್ರದಿಂದ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಯಾವ ಪಕ್ಷದಿಂದ ಅವರು ಕಣಕ್ಕಿಳಿಯುತ್ತಾರೆ ಅನ್ನುವುದೇ ಈಗಿರುವ ಕುತೂಹಲ.
Discussion about this post