ಕಳೆದ ವರ್ಷ ನಡೆದ ಪೆಟ್ರೋಲ್ ಬಂಕ್ ಕಳ್ಳತನ ಬಂಕ್ ಪ್ರಕರಣದ ಆರೋಪಿಗಳನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ ( Puttur )
ಬಂಟ್ವಾಳ : ಕೆಲ ದಿನಗಳ ಹಿಂದೆ ಪುತ್ತೂರು ( Puttur ) ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ ಗ್ರಾಮದ ರೆಂಜ ಎಂಬಲ್ಲಿ ಮಹಿಳೆಯೊಬ್ಬರ ಕರಿಮಣಿ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಎಳೆದು ಪರಾರಿಯಾಗಿದ್ದರು.
ಈ ವೇಳೆ ಆರೋಪಿಗಳನ್ನು ಬೆನ್ನತ್ತಿದ್ದ ಸ್ಥಳೀಯರು ಆರೋಪಿಗಳನ್ನು ಹಿಡಿದು ಪುತ್ತೂರು ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಪೊಲೀಸರು ವಿಚಾರಣೆ ನಡೆಸಿದ ಸಂದರ್ಭದಲ್ಲಿ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪೆಟ್ರೋಲ್ ಬಂಕ್ ಕಳ್ಳತನ ಪ್ರಕರಣದ ಸುಳಿವು ಸಿಕ್ಕಿದೆ.
ಇದನ್ನು ಓದಿ : pramod muthalik: ಸಿದ್ದರಾಮಯ್ಯ ಬೆಂಬಲಕ್ಕೆ ಪ್ರಮೋದ್ ಮುತಾಲಿಕ್ : ಮಾಂಸಹಾರ ಸೇವಿಸಿ ದೇವಸ್ಥಾನ ಪ್ರವೇಶ ವಿವಾದ
ಕುದ್ದುಪದವು ಜಗನ್ನಾಥ ಶೆಟ್ಟಿಯವರ ಎಸ್ ಆರ್ ಪೆಟ್ರೋಲ್ ಬಂಕ್ ಕಚೇರಿಗೆ ನುಗ್ಗಿದ ಫೈಝಲ್ ಗ್ಯಾಂಗ್ ಲಾಕರು ಒಡೆದು ನಗದು ಕಳ್ಳತನ ನಡೆಸಿತ್ತು. ಇದೀಗ ನ್ಯಾಯಾಂಗ ಬಂಧನದಲ್ಲಿದ್ದ ಫೈಝಲ್ ನನ್ನು ವಶಕ್ಕೆ ಪಡೆದಿರುವ ವಿಟ್ಲ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
Discussion about this post