ಪಂಪ್ ವೆಲ್ ಫ್ಲೈ ಓವರ್ ಹೇಗೋ ಹಲವು ದಶಕಗಳ ಬಳಿಕ ಮುಗಿಯಿತು, ಇದೀಗ ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ Kalladka ಹೆದ್ದಾರಿ ಕಾಮಗಾರಿ ಜನರ ಪ್ರಾಣ ಹಿಂಡುತ್ತಿದೆ
ಮಂಗಳೂರು : ಬುದ್ದಿವಂತರ ಜಿಲ್ಲೆಯಲ್ಲಿ ನಡೆಯುವ ಕಾಮಗಾರಿಗಳು ಮಾತ್ರ ದಡ್ಡತನದಿಂದ ಕೂಡಿರುತ್ತದೆ. ಪಂಪ್ ವೆಲ್ ಬಳಿಯ ಫ್ಲೈ ಓವರ್ ಕಾಮಗಾರಿ ಇದಕ್ಕೆ ಉತ್ತಮ ಉದಾಹರಣೆ. ಇದೀಗ ಬಿಸಿರೋಡ್, ಕಲ್ಲಡ್ಕ, ಮಾಣಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ Kalladka ಕಾಮಗಾರಿ ಸರದಿ.
ಅದರಲ್ಲೂ ಕಲ್ಲಡ್ಕದಲ್ಲಿ ಮಳೆ ಬಂದರೆ ಕಂಬಳದ ಗದ್ದೆ, ಬಿಸಿಲು ಬಂದ್ರೆ ಬಳ್ಳಾರಿ ಗಣಿ ನೆನಪಾಗುತ್ತದೆ. ದೆಹಲಿಯಲ್ಲಿ ಕೂತ ಸಚಿವ ಗಡ್ಕರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಸಾಧನೆ ಮಾಡಿದ್ದೇವೆ ಅನ್ನುತ್ತಾರೆ. ಆದರೆ ಕಲ್ಲಡ್ಕದಲ್ಲಿ ನಡೆಯುತ್ತಿರುವ ಕಾಮಗಾರಿಯ ಹಣೆ ಬರಹ ಅವರಿಗೆ ಕಾಣಿಸಿಲ್ಲ.
Read More : pramod muthalik: ಸಿದ್ದರಾಮಯ್ಯ ಬೆಂಬಲಕ್ಕೆ ಪ್ರಮೋದ್ ಮುತಾಲಿಕ್ : ಮಾಂಸಹಾರ ಸೇವಿಸಿ ದೇವಸ್ಥಾನ ಪ್ರವೇಶ ವಿವಾದ
ಇನ್ನು ಈ ಕಾಮಗಾರಿಗೆ ವೇಗ ಸಿಗಬೇಕು ಅಂದ್ರೆ ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಓಡಾಡಬೇಕು, ಆದರೆ ಬೆಂಗಳೂರು ಮಂಗಳೂರಿಗೆ ವಿಮಾನ ಹತ್ತುವ ಅವರಿಗೆ ಜನರ ಸೊಂಟ ನೋವು ಅವರಿಗೆಲ್ಲಿ ಅರ್ಥವಾಗುತ್ತದೆ.
ಇದೇ ಕಲ್ಲಡ್ಕದ ರಸ್ತೆ ಅವ್ಯವಸ್ಥೆಯಿಂದಾಗಿ ಬಸ್ಸಿನ ಚಕ್ರ ಗುಂಡಿಗೆ ಬಿದ್ದು, ಹಿಂಬದಿಯಲ್ಲಿ ಕೂತಿದ್ದ ಪ್ರಯಾಣಿಕ ಎಗರಿ ಬಿದ್ದು ಬೆನ್ನು ಹುರಿ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಮಾಡಿಕೊಂಡಿದ್ದಾರೆ.
ಸುಳ್ಯ ಬೆಳ್ಳಾರೆಯ ವಿಜಯ ಕುಮಾರ್ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದಾರೆ. ಬಿಡಿ ಭಾಗಕ್ಕಾಗಿ ಕೆಲ ದಿನಗಳ ಹಿಂದೆ ಮಂಗಳೂರಿಗೆ ಬಂದಿದ್ದ ಅವರು ಊರಿಗೆ ತೆರಳಲು ಸಾರಿಗೆ ಬಸ್ ಹತ್ತಿದ್ದಾರೆ.
ಕಲ್ಲಡ್ಕದಲ್ಲಿ ಕಾಮಗಾರಿ ಕುಂಠುತ್ತಾ ಸಾಗುತ್ತಿರುವ ಕಾರಣ ರಸ್ತೆಯಲ್ಲಿ ಗುಂಡಿಗಳು ಬಿದ್ದಿದೆ. ಈ ವೇಳೆ ಗುಂಡಿನ ಆಳ ಅರಿಯದೆ ಬಸ್ ಗುಂಡಿಗೆ ಬಿದ್ದಿದೆ. ಬಿದ್ದ ರಭಸಕ್ಕೆ ವಿಜಯ್ ಸೀಟಿನಿಂದ ಮೇಲೆ ಹಾರಿದ್ದಾರೆ. ಹಾರಿದ ರಭಸಕ್ಕೆ ಅವರ ತಲೆ ಬಸ್ ಮೇಲ್ಬಾವಣಿಗೆ ಬಡಿದಿದೆ. ಈ ವೇಳೆ ಕುತ್ತಿಗೆಗೆ ಗಂಭೀರ ಗಾಯವಾಗಿದೆ. ಮಾತ್ರವಲ್ಲದೆ ಬಸ್ಸಿನ ರಾಡ್ ತಾಗಿ ಬೆನ್ನು ಹುರಿಯೂ ಜಖಂಗೊಂಡಿದೆ.
ಇದೀಗ ವಿಜಯಕುಮಾರ್ ಮಲಗಿದ ಸ್ಥಿತಿಯಲ್ಲೇ ಇದ್ದು, ವೈದ್ಯರು ಆಪರೇಷನ್ ಗೆ ಸೂಚಿಸಿದ್ದಾರೆ.
ಹಾಗಾದ್ರೆ ಈ ದುರಂತಕ್ಕೆ ಹೊಣೆ ಯಾರು, ಗುತ್ತಿಗೆ ವಹಿಸಿದ ಕಂಪನಿಯೋ, ಸರಿಯಾದ ಸಮಯಕ್ಕೆ ಕೆಲಸ ಮಾಡಿಸದ ಸಂಸದರೋ, ಕಾಮಗಾರಿಯ ಗುಣಮಟ್ಟದ ನೋಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೋ.
Discussion about this post