ಕರಾವಳಿಯ ನೆಮ್ಮದಿ ನಾಶ ಮಾಡಿದ್ದ ಪ್ರಕರಣದ ತನಿಖೆ ಒಂದು ಹಂತಕ್ಕೆ ಬಂದಿದೆ ( Praveen nettar)
ಮಂಗಳೂರು : ಕರಾವಳಿಯ ನೆಮ್ಮದಿಗೆ ಕೊಳ್ಳಿ ಇಟ್ಟಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬಹುತೇಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗಾರರಿಗೆ ಆಶ್ರಯ ನೀಡಿದ್ದ ಕೆಲವು ಆರೋಪಿಗಳು ಹಾಗೂ ಕೊಲೆಗಾರರಿಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದವರ ಬಂಧನ ಇನ್ನಷ್ಟೇ ಆಗಬೇಕಾಗಿದೆ.
ಪ್ರವೀಣ್ ನೆಟ್ಟಾರು ಕೊಲೆ ನಡೆದ 16 ದಿನಗಳ ಬಳಿಕ ಜಿಲ್ಲಾ ಪೊಲೀಸರು ಕೊಲೆಯ ಪ್ರಕರಣ ಪ್ರಮುಖ ಎಲ್ಲಾ ಆರೋಪಿಗಳನ್ನು ಬಂಧಿಸುವ ಮೂಲಕ ತನಿಖೆಯಲ್ಲಿ ಮೈಲಿಗಲ್ಲು ಸಾಧಿಸಿದ್ದಾರೆ. ಇನ್ನು ಮುಂದೆ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸಲಿದೆ. ಜೊತೆಗೆ ಈ ತನಕ ಪ್ರಕರಣದ ತನಿಖೆ ಮುನ್ನಡೆಸಿದ ತನಿಖಾಧಿಕಾರಿ ಕೂಡಾ ಎನ್ಐಎ ತನಿಖೆಗೆ ಸಾಥ್ ನೀಡಲಿದ್ದಾರೆ.
ಪ್ರವೀಣ್ ನೆಟ್ಟಾರು ಅವರ ರಕ್ತ ಚೆಲ್ಲಾಡಿದ ಶಿಯಾಬ್ (33),ರಿಯಾಝ್ ಅಂಕತ್ತಡ್ಕ (27), ಬಶೀರ್ ಏಳಿಮಲೆ (29)ಯನ್ನು ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ಮೂವರಿಗೆ ಯಾವುದೇ ಕ್ರಿಮಿನಲ್ ಹಿನ್ನಲೆಗಳಿಲ್ಲ. ಪೊಲೀಸ್ ಠಾಣೆಗಳಲ್ಲಿ ಗಂಭೀರ ಪ್ರಕರಣಗಳು ಕೂಡಾ ಇಲ್ಲ.
ಶಿಯಾಬ್ ಕ್ಯಾಂಪ್ಕೋಗೆ ಕೋಕೋ ಸರಬರಾಜು ಕೆಲಸ ಮಾಡುತ್ತಿದ್ದ, ರಿಯಾಝ್ ಕೋಳಿ ಲೈನ್ ಸೇಲ್ ಮಾಡುತ್ತಿದ್ದ, ಬಶೀರ್ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಯಾವುದೇ ಕ್ರಿಮಿನಲ್ ಹಿನ್ನಲೆ ಇಲ್ಲದ ಮಂದಿ ಕೊಲೆ ಮಾಡುವ ಮಟ್ಟಕ್ಕೆ ಬಂದಿದ್ದಾರೆ ಅಂದ್ರೆ ಕೊಲೆಯ ಹಿಂದಿರುವ ಥಿಂಕ್ ಟ್ಯಾಂಕ್ ಗಳು ಅದೆಷ್ಟರ ಮಟ್ಟಿಗೆ ಬ್ರೆನ್ ವಾಷ್ ಮಾಡಿರಬೇಕು. ಅದ್ಯಾವ ಆಫರ್ ಗಳನ್ನು ಕೊಟ್ಟಿರಬೇಡ. ಈ ಎಲ್ಲಾ ವಿವರಗಳನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸಲಿದೆ.
ಇದನ್ನು ಓದಿ :
Discussion about this post