ಜಮೀರ್ರ ಮದುವೆ ವೇಳೆ ಸರ್ಕಾರ ಇವರಿಗೆ ವರದಕ್ಷಿಣೆಯಾಗಿ chamrajpet ground ಮೈದಾನವನ್ನು ಕೊಟ್ಟಿತ್ತಾ?
ಬೆಂಗಳೂರು : ರಾಜ್ಯದಲ್ಲಿ ಅಭಿವೃದ್ಧಿ ಕುರಿತಂತೆ ಚರ್ಚೆಯಾಗುವುದು ನಿಂತು ಹೋಗಿದೆ ಈಗ ಏನಿದ್ರೂ ಧರ್ಮ ದಂಗಲ್ ಕಾಲ. ಇದರ ಭಾಗವಾಗಿ ನಡೆಯುತ್ತಿರುವ ಚಾಮರಾಜಪೇಟೆ ಆಟದ ಮೈದಾನ ( chamrajpet ground) ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಚಾಮರಾಜಪೇಟೆ ( chamrajpet ground) ಮೈದಾನಕ್ಕಾಗಿ ವಕ್ಫ್ ಬೋರ್ಡ್ ಮತ್ತು ಬಿಬಿಎಂಪಿ ಎಳೆದಾಡುತ್ತಿತ್ತು.
ಇದೀಗ ಚಾಮರಾಜಪೇಟೆ ಮೈದಾನ ಕಂದಾಯ ಇಲಾಖೆ ಸೇರಿದ್ದು ಎಂದು ಬಿಬಿಎಂಪಿ ಹೇಳಿದೆ. ಈ ಹಿಂದೆ ದಾಖಲೆ ಕೊಟ್ಟವರಿಗೆ ಖಾತೆ ಮಾಡಿಕೊಡುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ ಯಾರೊಬ್ಬರೂ ಸೂಕ್ತ ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಹೀಗಾಗಿ ಇದೀಗ ಇದು ಕಂದಾಯ ಇಲಾಖೆಗೆ ಸೇರಿಕೊಂಡಿದೆ.
ಈ ನಿರ್ಧಾರ ಹಿಂದೂ ಸಂಘಟನೆಗಳ ಸಂಭ್ರಮಕ್ಕೆ ಕಾರಣವಾಗಿದ್ದು. ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಥಳೀಯ ಶಾಸಕ ಜಮೀರ್, ಅಲ್ಲಿ ಗಣೇಶೋತ್ಸವ ಮಾಡೋ ಹಾಗಿಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವಕ್ಕೆ ಮಾತ್ರ ಅವಕಾಶ ಅಂದಿದ್ದರು.
ಇದೀಗ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.
ಜಮೀರ್ರ ಮದುವೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇವರಿಗೆ ವರದಕ್ಷಿಣೆಯಾಗಿ ಚಾಮರಾಜಪೇಟೆ ಮೈದಾನವನ್ನು ಬರೆದು ಕೊಟ್ಟಿತ್ತಾ?
ಭಾಸ್ಕರ್ ಅಧ್ಯಕ್ಷ ವಿಶ್ವ ಸನಾತನ ಪರಿಷತ್
ಜಮೀರ್ ಮುಸ್ಲಿಮರ ಶಾಸಕನಲ್ಲ. ಚಾಮರಾಜಪೇಟೆ ಮೈದಾನ ಅವರ ಪಿತ್ರಾರ್ಜಿತ ಆಸ್ತಿಯಲ್ಲ. ಮೈದಾನದಲ್ಲಿ ಪ್ರಾರ್ಥನೆ ಮಾಡಬಹುದು. ಆದರೆ ಗಣೇಶ ಹಬ್ಬವನ್ನು ನಾವು ಆಚರಿಸಬಾರದು ಅನ್ನೋದು ಸರಿಯೇ? ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಅಂದ್ರೆ, ಅಲ್ಲಿ ನಮಾಜ್ ಏಕೆ ಮಾಡ್ತೀರಿ?
ಪ್ರಮೋದ್ ಮುತಾಲಿಕ್
ಒಟ್ಟಿನಲ್ಲಿ ಚುನಾವಣಾ ವರ್ಷದಲ್ಲಿ ಪ್ರಾರಂಭವಾಗಿರುವ ಮೈದಾನ ಗಲಾಟೆ ಅದೆಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ
Discussion about this post