ಕೊರೋನಾ ಸಂದರ್ಭದಲ್ಲಿ ಡೆಂಘೀ ಜ್ವರದ ಅಬ್ಬರ ಕಡಿಮೆಯಾಗಿತ್ತು. ( prevent dengue ) ಈಗ ಕೊರೋನಾ ಅಬ್ಬರ ಕಡಿಮೆಯಾಯ್ತು ಡೆಂಘೀ ಅಬ್ಬರಿಸಲಾರಂಭಿಸಿದೆ.
ಬೆಂಗಳೂರು : ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಡೆಂಘೀ ಜ್ವರದ ಅಬ್ಬರ ತೀವ್ರವಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದಂತೆ ಗೋಚರಿಸುತ್ತಿದೆ. ( prevent dengue ) ಖಾಸಗಿ ಆಸ್ಪತ್ರೆ, ಗಲ್ಲಿ ಮೂಲೆಯ ಕ್ಲಿನಿಕ್ ಗಳಲ್ಲಿ ಡೆಂಘೀ ಜ್ವರದಿಂದ ಬಳಲುತ್ತಿರುವವರೇ ಕಾಣಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಜ್ವರ ಕಾಣಿಸಿಕೊಂಡ ಕಾರಣ ಊರಲ್ಲಿರುವ ಪೋಷಕರ ಆತಂಕವೂ ಹೆಚ್ಚಾಗಿದೆ. ಇನ್ನೂ ರಕ್ತ ಪರೀಕ್ಷಾ ಕೇಂದ್ರದಲ್ಲಿ ಪ್ಲೇಟ್ಲೆಟ್ ಲೆಕ್ಕ ಪತ್ತೆ ಹಚ್ಚಲು ಬಂದವರೇ ಹೆಚ್ಚಾಗಿದ್ದಾರೆ.
ಈಗಿನ ವ್ಯವಸ್ಥೆಯಲ್ಲಿ ಡೆಂಘೀ ರೋಗಿಗಳೆಷ್ಟು ( prevent dengue ) ಅನ್ನುವ ಪಕ್ಕಾ ಡಾಟಾ ಆರೋಗ್ಯ ಇಲಾಖೆಯ ಬಳಿ ಇಲ್ಲ. ಆದರೆ ಖಾಸಗಿ ವೈದ್ಯರು ಹೇಳುವ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಘೀಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಡೆಂಘೀ ಬಂದ ಮೇಲೆ ಪರಿತಪಿಸುವ ಬದಲು ಅದು ಬಾರದಂತೆ ನೋಡಿಕೊಳ್ಳುವುದು ಮುಖ್ಯ.
ಇದನ್ನೂ ಓದಿ : congress leader navyashree honey trap : ಸರ್ಕಾರಿ ಅಧಿಕಾರಿಗೆ ಕಾಂಗ್ರೆಸ್ ನಾಯಕಿಯಿಂದ ಹನಿಟ್ಯಾಪ್…?
ಮೂರು ಹಂತದಲ್ಲಿ ಕಾಡುವ ಡೆಂಘೀ
ಸಂಗ್ರಹಿಸಿಟ್ಟ ತಿಳಿ ನೀರಿನಲ್ಲಿ ಮೊಟ್ಟೆ ಇಡುವ ಈಡಿಸ್ ಈಜಿಪ್ಟೆ ಅನ್ನುವ ಸೊಳ್ಳೆ ಈ ಡೆಂಘೀ ಜ್ವರವನ್ನು ( prevent dengue ) ಹರಡುತ್ತದೆ. ಈ ಈಡಿಸ್ ಈಜಿಪ್ಟೆ ಸೊಳ್ಳೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಕಚ್ಚಿದರೆ ಅಪಾಯ ಹೆಚ್ಚು. ಮೂರು ಹಂತಗಳಲ್ಲಿ ಕಾಡುವ ಈ ಜ್ವರ ಮೊದಲು ಸಾಮಾನ್ಯ ಜ್ವರದಿಂದ ಗೋಚರಿಸಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ ಅಪಾಯ ಇರೋದಿಲ್ಲ. ಎರಡನೇ ಹಂತದಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಲು ಆರಂಭವಾಗುತ್ತದೆ. ಅಲ್ಲೂ ನಿರ್ಲಕ್ಷ್ಯ ವಹಿಸಿದರೆ ದೇಹದಲ್ಲಿ ರಕ್ತಸ್ರಾವ ಪ್ರಾರಂಭವಾಗಿ ರೋಗಿ ಅಪಾಯದ ಹಂತಕ್ಕೆ ತಲುಪುತ್ತಾನೆ.
ಡೆಂಘೀ ಜ್ವರದ ಲಕ್ಷಣಗಳು
ಜ್ವರ, ಅತೀಯಾದ ತಲೆನೋವು, ಶೀತ ಗಂಟಲು ನೋವು, ಕೆಲವೊಂದು ವ್ಯಕ್ತಿಗಳಲ್ಲಿ ವಾಂತಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ನಿಶಕ್ತಿ, ಮೈ-ಕೈ ನೋವು, ಭೇದಿ, ಮೈ ಮೇಲೆ ಗುಳ್ಳೆ ಏಳುವುದು. ಹಾಗಂತ ಈ ಎಲ್ಲಾ ಲಕ್ಷಣಗಳಿಗೆ ಕಾಯುವ ಬದಲು ಜ್ವರ ಬಂತು ಅಂದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗಿ, ಯಾವುದಕ್ಕೂ ಒಂದು ರಕ್ತ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ : ಅಪಘಾತವಾಗಿದೆ ಅಂದ ಪತಿಯನ್ನು ಪತ್ನಿಯೇ ಬಂದು ಸಾಯಿಸಿದ್ಲು
ಮುನ್ನೆಚ್ಚರಿಕಾ ಕ್ರಮಗಳು – prevent dengue
ಕೊರೋನಾ ಕಾಲದಲ್ಲಿ ಸ್ವಚ್ಛತೆಗೆ ಸಿಕ್ಕಾಪಟ್ಟೆ ಆದ್ಯತೆ ಕೊಟ್ಟ ಡೆಂಘೀ ಕಾಟ ಕೊಟ್ಟಿರಲಿಲ್ಲ. ಈಗ ಮತ್ತೆ ಸ್ವಚ್ಛತೆಯ ವಿಚಾರದಲ್ಲಿ ನಿರ್ಲಕ್ಷ್ಯ ಪ್ರಾರಂಭವಾಗಿದೆ. ಹೀಗಾಗಿ ಮಳೆಗಾಲದ ಪ್ರಾರಂಭದೊಂದಿಗೆ ಡೆಂಘೀಯೂ ಬಂದಿದೆ. ಹೀಗಾಗಿ ಹೊರಗಡೆ ಹೋಗುವ ಸಂದರ್ಭದಲ್ಲಿ ಸೊಳ್ಳೆ ಕಚ್ಚಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಿ. ಅದರಲ್ಲೂ ಮಕ್ಕಳ ಬಗ್ಗೆ ತೀವ್ರ ಕಾಳಜಿ ಅತೀ ಆಗತ್ಯ.
ಇನ್ನು ಹಗಲಲ್ಲಿ ಸೊಳ್ಳೆ ಕಚ್ಚಿಸಿಕೊಳ್ಳಬೇಡಿ, ನೀರು ಶೇಖರಿಸುವ ತೊಟ್ಟಿಗಳ ಮುಚ್ಚಳವನ್ನು ಭದ್ರವಾಗಿಸಿ, ಮನೆಯ ಸುತ್ತ, ತಾರಸಿ, ಹೀಗೆ ಎಲ್ಲೆ ಆಗ್ಲೀ ನೀರು ನಿಲ್ಲದಂತೆ ನೋಡಿಕೊಳ್ಳಿ. ಇನ್ನು ಮನೆಯ ಸುತ್ತ ಮುತ್ತ ಸೊಳ್ಳೆ ಕಾಟ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ.
ರಾಜಕುಮಾರ ಟಾಕಳೆ ನನ್ನ ಗಂಡ : ಬೆಳಗಾವಿ ಹನಿಟ್ರ್ಯಾಪ್ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್
ಹನಿಟ್ರ್ಯಾಪ್ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕಿ ಮಾಧ್ಯಮಗಳ ಮುಂದೆ ಬಂದಿರುವುದನ್ನು ನೋಡಿದ್ರೆ ಅಧಿಕಾರಿ ಮೇಲೆ ಅನುಮಾನ ದಟ್ಟವಾಗುತ್ತಿದೆ
ಬೆಳಗಾವಿ : ತೋಟಗಾರಿಕಾ ಇಲಾಖೆ ಅಧಿಕಾರಿ ಹಾದಿ ತಪ್ಪಿದ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಸರ್ಕಾರಿ ಅಧಿಕಾರಿಯಿಂದ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್ ನಾಯಕಿ ನವ್ಯಾ ರಾಮಚಂದ್ರನ್ ಮಾಧ್ಯಮಗಳ ಮುಂದೆ ಬಂದಿದ್ದು, ರಾಮಚಂದ್ರ ಟಾಕಳೆ ನನ್ನ ಗಂಡ, ಹೇಗೆ ಮದುವೆಯಾದೆವು ಅನ್ನುವುದನ್ನು ನಾಳೆ ಹೇಳ್ತಿನಿ ಅಂದಿದ್ದಾರೆ.
ನಾನು 15 ದಿನಗಳಿಂದ ದೇಶದಲ್ಲಿ ಇರಲಿಲ್ಲ. ಇಂಟರ್ ನ್ಯಾಶನಲ್ ಪೀಸ್ ಆವಾರ್ಡ್ ಸ್ವೀಕರಿಸಲು ದುಬೈಗೆ ತೆರಳಿದ್ದೆ. ಅಷ್ಟರಲ್ಲಿ ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ನನ್ನ ವಿರುದ್ಧ ದೂರು ದಾಖಲಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪೊಲೀಸರು ಕೂಡಾ ನನ್ನ ಸಂಪರ್ಕಿಸಿಲ್ಲ. ಒಂದು ವೇಳೆ FIR ಪ್ರತಿ ಸಿಕ್ರೆ ಕಾನೂನು ಪ್ರಕಾರ ನಾನು ಅದನ್ನು ಎದುರಿಸುತ್ತೇನೆ.
ಕಳೆದ 8 ವರ್ಷಗಳಿಂದ ಹಣ, ದೇಣಿಗೆ ಪಡೆಯದೇ ಸಮಾಜ ಸೇವೆ ಮಾಡುತ್ತಿದ್ದೇನೆ. ನವ್ಯಶ್ರೀ ಫೌಂಡೇಶನ್ ಗೆ ನನ್ನ ಸ್ವಂತ ಹಣ ಹಾಕುತ್ತಿದ್ದೇನೆ. ಮೊದಲು ನನ್ನ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹೇಗೆ ಬಂತು ಎಲ್ಲಿಂದ ಅನ್ನೋದನ್ನ ತಿಳಿದುಕೊಳ್ಳಬೇಕಿದೆ. ಹೀಗಾಗಿ ಈ ಸಂಬಂಧ ನಾನು ಪೊಲೀಸ್ ಆಯುಕ್ತರನ್ನು ಭೇಟಿಯಾಗುತ್ತೇನೆ ಎಂದು ನವ್ಯಾಶ್ರೀ ಹೇಳಿದ್ದಾರೆ.
ಮತ್ತೊಂದು ಮಾಹಿತಿಗಳ ಪ್ರಕಾರ ರಾಜಕುಮಾರ ಟಾಕಳೆ ನನಗೆ ಮದುವೆಯೇ ಆಗಿಲ್ಲ ಎಂದು ನವ್ಯಾಶ್ರೀಯನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದನಂತೆ. ಇದಾದ ಬಳಿಕ ಆತ ಮದುವೆಯಾಗಿರುವ ವಿಚಾರ ನವ್ಯಾಶ್ರೀಗೆ ಗೊತ್ತಾಗಿದೆ. ಈ ವೇಳೆ ಕಿರಿಕ್ ತೆಗೆದ ಕಾರಣಕ್ಕೆ ನವ್ಯಾಶ್ರೀ ಕೊರಳಿಗೆ ಟಾಕಳೆ ದೇವಸ್ಥಾನವೊಂದರಲ್ಲಿ ತಾಳಿ ಕಟ್ಟಿದ ಎಂದು ಗೊತ್ತಾಗಿದೆ. ಈ ಬಗ್ಗೆ ನಾಳೆ ನವ್ಯಾಶ್ರೀ ಮಾತನಾಡುವ ನಿರೀಕ್ಷೆಗಳಿದೆ.
Discussion about this post