ಬೆಂಗಳೂರಿನ ರಸ್ತೆಗಳು ಗುಂಡಿ ( bengaluru roads ) ಬಿದ್ದು ಎಕ್ಕುಟ್ಟು ಹೋಗಿದೆ. ಅದೆಷ್ಟೋ ಜನರು ಇದೇ ಗುಂಡಿಯ ಕಾರಣದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆ ಗುಂಡಿ ಮುಚ್ಚುವ ಬದಲು ತಮ್ಮ ಮನೆ ಮುಂದೆ ರಸ್ತೆಗೆ ವೈಟ್ ಟಾಪಿಂಗ್ ಮಾಡಿಸಲು ಸಿಎಂ ಬಸವರಾಜ್ ಬೊಮ್ಮಾಯಿ ಮುಂದಾಗಿದ್ದಾರೆ
ಬೆಂಗಳೂರು : ರಾಜಧಾನಿಯ ರಸ್ತೆಗಳು ಎಲ್ಲಿಂದ ಎಂದು ಹುಡುಕಬೇಕಾಗಿದೆ. ( bengaluru roads ) ಬಿಬಿಎಂಪಿ ಮಾಡಿದ ಕಳಪೆ ಕಾಮಗಾರಿ ಕಾರಣದಿಂದ ಗುಂಡಿಗಳು ಬಿದ್ದು, ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡೇ ಡ್ರೈವ್ ಮಾಡಬೇಕಾಗಿದೆ. ಗುಂಡಿ ಮುಚ್ಚುವ ವಿಚಾರದಲ್ಲಿ ಸರ್ಕಾರ ಕಥೆ ಹೇಳುತ್ತಿದೆ ಬಿಟ್ರೆ, ಅದಕ್ಕೊಂದು ಶಾಶ್ವತ ಪರಿಹಾರದ ಬಗ್ಗೆ ಈವರೆಗೆ ಬಂದ ಅದ್ಯಾವ ಸರ್ಕಾರಗಳು ತಲೆ ಕೆಡಿಸಿಕೊಂಡಿಲ್ಲ. ಇದಕ್ಕೆ ಬೊಮ್ಮಾಯಿ ಸರ್ಕಾರವೂ ಹೊರತಲ್ಲ.
ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಿಸುವ ಬದಲು ತಮ್ಮ ಮನೆ ಮುಂದಿನ ರಸ್ತೆಗೆ 29 ಕೋಟಿ ರೂಪಾಯಿ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಿಸಲು ಮುಂದಾಗಿದ್ದಾರೆ. ಈ ಸಂಬಂಧ ಬಿಬಿಎಂಪಿ ಟೆಂಡರ್ ಕೂಡಾ ಕರೆದಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಬಾರದಂತೆ ಶಾಶ್ವತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅಧಿಕಾರಿಗಳು ಖಾಸಗಿ ಟಿವಿ ವಾಹಿನಿಯೊಂದಕ್ಕೆ ಸಮರ್ಥನೆ ಬೇರೆ ಕೊಟ್ಟಿದ್ದಾರೆ.
ಇನ್ನು ಸಿಎಂ ಮನೆ ಇರುವ 4.6 ಕಿಮೀ ಉದ್ಧದ ಈ ತರಳಬಾಳು ರಸ್ತೆಗೆ ಬೊಮ್ಮಾಯಿಯವರು ಅಧಿಕಾರ ಸ್ವೀಕರಿಸಿದ ಬಳಿ ಎರಡೆರಡು ಬಾರಿ ಕಾಮಗಾರಿ ಕೈಗಳ್ಳಲಾಗಿದೆ. ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಇದೆಷ್ಟು ಸಲ ಬಿಬಿಎಂಪಿ ಡಾಂಬರು ಸುರಿದಿದೆಯೋ ಗೊತ್ತಿಲ್ಲ.
ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುತ್ತಿದ್ದಂತೆ ರಾತ್ರೋರಾತ್ರಿ ಈ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿತ್ತು. ಟ್ರಾಫಿಕ್ ಮಾರ್ಕಿಂಗ್, ಫುಟ್ ಪಾತ್ ಅಭಿವೃದ್ಧಿ ನಡೆಸಲಾಗಿತ್ತು. ಮೂರು ತಿಂಗಳ ಹಿಂದೆ ಮತ್ತೆ ಡಾಂಬರೀಕರಣ ನಡೆದಿತ್ತು. ಹಾಗೇ ನೋಡಿದರೆ ಈ ತರಳಬಾಳು ರಸ್ತೆ ಚೆನ್ನಾಗಿದೆ. ಒಂದೇ ಒಂದು ಗುಂಡಿಯೂ ಇಲ್ಲ ಹಾಗಿದ್ದ ಮೇಲೆ 29 ಕೋಟಿ ರೂಪಾಯಿ ಸುರಿಯುವ ಅಗತ್ಯವೇನಿದೆ, ಮುಖ್ಯಮಂತ್ರಿಗಳೇ ಉತ್ತರಿಸಬೇಕು.
ಗಂಡ ಬೇಕು ಗಂಡ : ಒಬ್ಬ ಗಂಡನಿಗಾಗಿ ಇಬ್ಬರು ಹೆಣ್ಮಕ್ಕಳ ಕಿತ್ತಾಟ
ವಂಚಕನೊಬ್ಬನ ಮಾತು ನಂಬಿ ಗಂಡನಿಗೆ ಡಿವೋರ್ಸ್ ಕೊಟ್ಟ ಮಹಿಳೆಯೊಬ್ಬಳು ಇದೀಗ ಮೋಸವಾಯ್ತು ಎಂದು ಪ್ರತಿಭಟನೆ ನಡೆಸಿದ್ದಾಳೆ. ( marriage fraud ) ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರದ ಗೌರಿ ಬಿದನೂರಿನಲ್ಲಿ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪವಿತ್ರ ತಾಳಿ ಕಟ್ಟಿದ ಗಂಡನೊಂದಿಗೆ ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದರು. ಈ ವೇಳೆ ಆಸ್ಪತ್ರೆಯಲ್ಲೇ ಕೆಲಸ ನಿರ್ವಹಿಸುತ್ತಿರುವ ಸಾದೇನಹಳ್ಳಿಯ ಮಂಜುನಾಥ್ ಅನ್ನುವವನ ಪರಿಚಯವಾಗಿದೆ. ಗಂಡನಿಗಿಂತ ಚೆನ್ನಾಗಿ ನೋಡಿಕೊಳ್ಳುತ್ತೇನೆ ( marriage fraud ) ಎಂದು ಪವಿತ್ರಾಳ ತಲೆ ಕೆಡಿಸಿದ ಮಂಜುನಾಥ ಡಿವೋರ್ಸ್ ಕೊಡಿಸಿದ್ದ.
ಬಳಿಕ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪವಿತ್ರಾ ಹಾಗೂ ಮಂಜುನಾಥ 2021ರ ಜೂನ್ ತಿಂಗಳಿನಲ್ಲಿ ಮದುವೆಯಾಗಿದ್ದರು. ಒಂದಿಷ್ಟು ಸಂಸಾರ ಚೆನ್ನಾಗಿಯೇ ನಡೆದಿತ್ತು. ಆಗ ಗೊತ್ತಾಗಿದ್ದು ಮಂಜುನಾಥ ಸ್ವಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಷಯ ಗೊತ್ತಾದ ಪವಿತ್ರಾ ಗಲಾಟೆ ಮಾಡಿದ್ದಾಳೆ. ಈ ವೇಳೆ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟ ಮಂಜುನಾಥ ಆಕೆಯನ್ನೂ ಮದುವೆಯಾಗಿದ್ದಾನೆ.
ಸ್ವಲ್ಪ ದಿನ ಎಲ್ಲವೂ ಚೆನ್ನಾಗಿತ್ತು. ಬಳಿಕ ಆತ ಮನೆಗೆ ಬರುವುದನ್ನೇ ನಿಲ್ಲಿಸಿದ್ದಾನೆ. ಹೀಗಾಗಿ ಮೋಸ ಹೋದ ಪವಿತ್ರಾ ಮಂಜುನಾಥನ ಮನೆ ಮುಂದೆ ಧರಣಿ ಕೂತಿದ್ದಾರೆ. ಆದರೆ ಈ ಗಲಾಟೆಯ ನಡುವೆ ಮಂಜುನಾಥ ಎರಡನೇ ಹೆಂಡತಿ, ನನಗೂ ನನ್ನ ಗಂಡ ಬೇಕು, ನಾನು ಬಿಟ್ಟುಕೊಡಲಾರೆ ಅಂದಿದ್ದಾಳೆ.
ಆದರೆ ಮಂಜುನಾಥನದ್ದು ಬೇರೆಯದ್ಧೇ ಕಥೆ. ನಾನು ಮತ್ತು ಪ್ರೀತಿಸಿದ್ದು ನಿಜ, ಆದರೆ ನನಗೆ ಬ್ಲ್ಯಾಕ್ ಮೇಲ್ ಮಾಡಿ ಬಲವಂತವಾಗಿ ಪವಿತ್ರಾ ಕಡೆಯವರು ರಿಜಿಸ್ಟರ್ ಮದುವೆ ಮಾಡಿಸಿದ್ದಾರೆ. ಈ ವಿಷಯದಲ್ಲಿ ನನ್ನದೇನೂ ತಪ್ಪಿಲ್ಲ. ಹೀಗಾಗಿ ಕಾನೂನು ಪ್ರಕಾರ ಏನಾಗಬೇಕೋ ಅದು ಅಗಲಿ ಅಂದಿದ್ದಾನೆ.
Discussion about this post