ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಠ್ಯಕ್ರಮದ ( national education policy ) ಕರಡಿನಲ್ಲಿ ಶಿಕ್ಷಣ ಇಲಾಖೆ ಅನೇಕ ಸಲಹೆಗಳನ್ನು ನೀಡಿದೆ
ಬೆಂಗಳೂರು : ಮಧ್ಯಾಹ್ನದ ಬಿಸಿಯೂಟದ ಜೊತೆಗೆ ನೀಡಲಾಗುತ್ತಿರುವ ಮೊಟ್ಟೆ ನಿಲ್ಲಿಸಬೇಕೆಂದು ರಾಷ್ಟ್ರೀಯ ಶಿಕ್ಷಣ ನೀತಿಗೆ ( national education policy ) ಅನುಗುಣವಾಗಿ ರೂಪಿಸಿರುವ ಪಠ್ಯಕ್ರಮ ಕರಡಿನಲ್ಲಿ ಸೂಚಿಸಲಾಗಿದೆ. ಮೊಟ್ಟೆ ಮತ್ತು ಮಾಂಸದಿಂದ ಅನೇಕ ರೋಗಗಳು ಬರುತ್ತದೆ ಹಾಗಾಗಿ ಸಾತ್ವಿಕ ಆಹಾರ ಪದ್ಧತಿಯನ್ನು ಅನುಸರಿಸಬೇಕೆಂದು ಸಲಹೆ ನೀಡಲಾಗಿದೆ.
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ 25 ವಿಷಯಗಳಲ್ಲಿ ಪಠ್ಯಕ್ರಮವನ್ನು ರೂಪಿಸಿದ್ದು, ಪ್ರತೀ ವಿಷಯದಲ್ಲೂ ಹಲವು ಸಲಹೆಗಳನ್ನು ನೀಡಲಾಗಿದೆ. ಅದರಂತೆ ವರ್ಷದ ಕೊನೆಯ 10 ದಿನ ಬ್ಯಾಗ್ ರಹಿತ ದಿನವನ್ನಾಗಿಸಬೇಕು ಎಂದು ಹೇಳಲಾಗಿತ್ತು. ಆ ದಿನಗಳನ್ನು ಸೇವಾ ದಿನ ಎಂದು ಘೋಷಿಸಿ, ಮಕ್ಕಳನ್ನು ವೃತ್ತಿಪರ ಕುಶಲಕರ್ಮಿಗಳ ಬಳಿ ತರಬೇತಿಗೆ ಕಳುಹಿಸಿಕೊಡಬೇಕು ಎಂದು ಸಲಹೆ ನೀಡಲಾಗಿದೆ. ಅಂದ್ರೆ ಕುಂಬಾರ, ಬಡಗಿ ಹೀಗೆ ಅನೇಕ ಕಡೆಗಳಿಗೆ ಮಕ್ಕಳು ತೆರಳಬಹುದಾಗಿದೆ.
ಇದನ್ನೂ ಓದಿ : Dolo 650 : ಡೋಲೋ ಕಂಪನಿಯಿಂದ ವೈದ್ಯರಿಗೆ ಸಾವಿರ ಕೋಟಿ ರೂಪಾಯಿ ಗಿಫ್ಟ್
ಇದೇ ರೀತೀ ಮಕ್ಕಳು ಶೂ ಹಾಕಬಾರದು ಎಂದು ಸಲಹೆ ನೀಡಲಾಗಿದ್ದು, ಶೂ ಹಾಕುವುದರಿಂದ ಮಕ್ಕಳ ಪಾದಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಹೇಳಲಾಗಿದೆ. ಇನ್ನು ಪ್ರತಿಯೊಂದು ಶಾಲೆಗಳು ತನ್ನದೇ ಸಮವಸ್ತ್ರ ನೀಡುವುದನ್ನು ತಪ್ಪಿಸಬೇಕು. ಬದಲಾಗಿ ಎಲ್ಲರಿಗೂ ಒಂದೇ ರೀತಿ ಸಮವಸ್ತ್ರ ಇರಬೇಕು. ಸಮವಸ್ತ್ರಕ್ಕಾಗಿ ಖಾದಿ ಬಳಕೆ ಉತ್ತಮ ಅನ್ನುವ ಸಲಹೆಯನ್ನೂ ಕೂಡಾ ನೀಡಲಾಗಿದೆ.
kho kho league : ಐಪಿಎಲ್ ಮಾದರಿಯಲ್ಲೇ ಖೋ ಖೋ ಲೀಗ್ : ದೇಶಿ ಕ್ರೀಡೆಗೆ ಹೈಟೆಕ್ ಸ್ಪರ್ಶ
ತಮಿಳುನಾಡು ಮೂಲದ ಖೋ..ಖೋ ( kho kho league ) ಹಲವಾರು ವರ್ಷಗಳ ಬಳಿಕ ಮಹಾರಾಷ್ಟ್ರದಲ್ಲಿ ಮತ್ತೆ ಹಳೆಯ ವೈಭವಕ್ಕೆ ಮರಳಿತ್ತು. ಆದರೆ ಅಧುನಿಕ ಕಾಲ ಘಟ್ಟದಲ್ಲಿ ಖೋಖೋ ಶಾಲಾ ಮೈದಾನದಿಂದ ಮರೆಯಾಗಿತ್ತು.
ನವದೆಹಲಿ : ಕ್ರಿಕೆಟ್ ಆಯ್ತು, ಕಬಡ್ಡಿ ಆಯ್ತು, ಪುಟ್ಭಾಲ್ ಆಯ್ತು ಈಗ ಖೋ ಖೋ ಸರದಿ. ( kho kho league ) ಹೌದು ಈ ಮಣ್ಣಿನ ಕ್ರೀಡೆ ಮತ್ತೆ ವೈಭವಕ್ಕೆ ಮರಳುವ ದಿನಗಳು ಬಂದಿದೆ. ಕ್ರಿಕೆಟ್, ಕಬಡ್ಡಿ ರೀತಿಯಲ್ಲೇ ಖೋ ಖೋ ಆಟಕ್ಕೂ ಲೀಗ್ ಪ್ರಾರಂಭಗೊಳ್ಳಲಿದೆ.
ಮೊದಲ ಆವೃತ್ತಿಯ ಅಲ್ಟಿಮೇಟ್ ಖೋ ಖೋ ಲೀಗ್ ( ultimate kho kho league ) ಆಗಸ್ಟ್ 14 ರಂದು ಪ್ರಾರಂಭಗೊಳ್ಳಲಿದೆ. ಪುಣೆಯ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಚೊಚ್ಚಲ ಆವೃತ್ತಿಗೆ ಚಾಲನೆ ಸಿಗಲಿದೆ. ಡಾಬರ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಅಮಿತ್ ಬರ್ಮನ್ ಅವರು ಭಾರತೀಯ ಖೋ ಖೋ ಫೆಡರೇಶನ್ ಸಹಯೋಗದೊಂದಿಗೆ ಈ ಲೀಗ್ ಅನ್ನು ಆರಂಭಿಸುತ್ತಿದ್ದಾರೆ. ಒಟ್ಟು 6 ತಂಡಗಳು ಈ ಬಾರಿ ಪಾಲು ಪಡೆಯಲಿದ್ದು, ಫ್ರಾಂಟೈಸಿ ಆಧಾರದಲ್ಲಿ ಲೀಗ್ ಪಂದ್ಯಗಲು ನಡೆಯಲಿದೆ.
ಯಾವುದು 6 ತಂಡಗಳು
ಕೆಎಲ್ಓ ಸ್ಫೋಟ್ಸ್ ಒಡೆತನದ ಚೆನೈ ಕ್ವಿಕ್ ಗನ್ಸ್ , ಅದಾನಿ ಸ್ಫೋರ್ಟ್ ಲೈನ್ ಒಡೆತನದ ಗುಜರಾತ್ ಜೈಂಟ್ಸ್ , ಬಾದ್ ಶಾ ಹಾಗೂ ಪುನೀತ್ ಬಾಲನ್ ಒಡೆತನದ ಮುಂಬೈ ಕಿಲಾಡೀಸ್, ಓಡಿಶಾ ಸರ್ಕಾರದ ಒಡಿಶಾ ಜಗ್ಗರ್ ನಟ್ಸ್, ಕ್ಯಾಪ್ಕಿ ಗ್ಲೋಬಲ್ ಮಾಲೀಕತ್ವದ ರಾಜಸ್ಥಾನ ವಾರಿಯರ್ಸ್ ಮತ್ತು ಜಿಎಂಆರ್ ಸ್ಫೋರ್ಟ್ಸ್ ಒಡೆತನದ ತೆಲುಗು ಯೋಧಾಸ್ ತಂಡಗಳು ಈ ಕೂಟದಲ್ಲಿ ಪಾಲು ಪಡೆಯಲಿದೆ.
ಚೊಚ್ಚಲ ಪಂದ್ಯದಲ್ಲಿ ಭಾರತದ ಆಟಗಾರರ ಜೊತೆಗೆ ವಿದೇಶಿ ಆಟಗಾರರು ಕೂಡಾ ಇರಲಿದ್ದಾರೆ. ಇಂದು ಆಟಗಾರರ ಆಯ್ಕೆ ನಡೆಯಲಿದ್ದು, ಇಂಗ್ಲೆಂಡ್, ಇರಾನ್, ದಕ್ಷಿಣ ಕೊರಿಯಾ, ಶ್ರೀಲಂಕಾ, ಬಾಂಗ್ಲಾ ಮತ್ತು ನೇಪಾಳದ ಆಟಗಾರರು ವಿವಿಧ ತಂಡಗಳನ್ನು ಸೇರಿಕೊಳ್ಳಲಿದ್ದಾರೆ.
Discussion about this post