ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ವಿವಿಧ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಸೇರಿದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನಾಮನಿರ್ದೇಶನವನ್ನು ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ. ( Karnataka news ) ಬಹುತೇಕ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಯಡಿಯೂರಪ್ಪ ಬೆಂಬಲಿಗರಾಗಿದ್ದರು ಹಾಗೂ ಅವರು ಸಿಎಂ ಆಗಿದ್ದ ಅವಧಿಯಲ್ಲೇ ನೇಮಕಗೊಂಡಿದ್ದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಆಡಳಿತ ವಿರೋಧಿ ಅಲೆಯನ್ನು ತಗ್ಗಿಸುವ ನಿಟ್ಟಿನಲ್ಲಿ ದೆಹಲಿ ವರಿಷ್ಠರು ಕೊಟ್ಟ ಸೂಚನೆಯಂತೆ ಈ ಬೆಳವಣಿಗೆ ನಡೆದಿದೆ ಅನ್ನಲಾಗಿದೆ. ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ಬಹುತೇಕರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. ಹೀಗಾಗಿ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಮುಂದಿನ ಅವಧಿಯಲ್ಲಿ ಅವಕಾಶ ಸಿಗಲಿದೆ ಅನ್ನಲಾಗಿದೆ. ಈಗಾಗಲೇ ಹೊಸಬರ ನೇಮಕಕ್ಕೆ ಈಗಾಗಲೇ ಪಟ್ಟಿ ಸಿದ್ಧವಾಗಿದ್ದು, ದೆಹಲಿ ವರಿಷ್ಠರು ಇದಕ್ಕೆ ಸಮ್ಮತಿಯನ್ನೂ ಕೊಟ್ಟಿದ್ದಾರೆ. ( Karnataka news )
ಇದನ್ನೂ ಓದಿ : Swiggy : ಸ್ವಿಗ್ಗಿ ಬ್ಯಾಗ್ ಹಾಕಿ ಕುದುರೆ ಏರಿದವನು ಫುಡ್ ಡೆಲಿವರಿ ಬಾಯ್ ಅಲ್ವಂತೆ
ಯಾರಿಗೆಲ್ಲ ಕೊಕ್?:
ಎಲ್.ಆರ್.ಮಹದೇವಸ್ವಾಮಿ: ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು
ರವಿ ಕುಶಲಪ್ಪ: ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣ ಕಾರ್ಯಪಡೆ ಸಮಿತಿ
ಮಣಿರಾಜ ಶೆಟ್ಟಿ: ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು
ಅನಂತ ಹೆಗಡೆ ಆಶೀಸರ: ಕರ್ನಾಟಕ ಜೀವ ವೈವಿಧ್ಯ ಮಂಡಳಿ
ಮುಕ್ತಾರ್ ಹುಸೇನ್ ಫಕ್ರುದ್ದಿನ್ ಪಠಾಣಸಾ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ
ತಮ್ಮೇಶಗೌಡ ಎಚ್.ಸಿ: ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
ಸಂತೋಷ್ ರೈ ಬೋಳಿಯಾರ್: ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್
ಎಂ.ಎನ್.ನಂದೀಶ್ ಹಂಜೆ: ಕರ್ನಾಟಕ ಪುಸ್ತಕ ಪ್ರಾಧಿಕಾರ
ಸುನೀಲ್ ಪುರಾಣಿಕ್: ಕರ್ನಾಟಕ ಚಲನಚಿತ್ರ ಅಕಾಡೆಮಿ
ಆನಂದ್ ಆ ಶ್ರೀ ಉಪ್ಪಳ್ಳಿ: ಸಾವಯವ ಕೃಷಿ ಉತ್ಪನ್ನ ಮಟ್ಟದ ಅಧಿಕಾರಯುಕ್ತ ಸಮಿತಿ
ಲಿಂಗರೆಡ್ಡಿ ಗೌಡ:ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ(ತೊಗರಿ ಅಭಿವೃದ್ಧಿ ಮಂಡಳಿ)
ಹನುಮನಗೌಡ ಬೆಳಗುರ್ಕಿ:ಕೃಷಿ ಬೆಲೆ ಆಯೋಗ
ಎನ್.ಶಿವಲಿಂಗಯ್ಯ:ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ, ಕಾವೇರಿ ಜಲಾನಯನ ಯೋಜನೆ (ಕಾಡಾ),ಮೈಸೂರು
ಶರಣಪ್ಪ ತಳವಾರ: ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಕೃಷ್ಣಾ ಮೇಲ್ದಂಡೆ ಯೋಜನೆ, ಭೀಮರಾಯನಗುಡಿ, ಕಲಬುರಗಿ
ತಿಪ್ಪೇರುದ್ರಸ್ವಾಮಿ ಬಿ.ಎಚ್.ಎಂ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ತುಂಗಭದ್ರ ಯೋಜನೆ, ಕಾಡಾ
ಕಾಂತಿಲಾಲ್ ಕೇವಲಚಂದ್ರ ಬನ್ಸಾಲಿ: ಕರ್ನಾಟಕ ದ್ರಾಕ್ಷಿರಸ ಮಂಡಳಿ
ಕೆ.ವಿ.ನಾಗರಾಜ: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ
ಸವಿತಾ ವಿಶ್ವನಾಥ್ ಅಮರಶೆಟ್ಟಿ: ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ
ಎಸ್.ಆರ್.ಗೌಡ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ, ನಿಯಮಿತ
ಎಂ.ಜಯದೇವ:ಬೆಂಗಳೂರು- ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ
ಶರಣು ಭೀಮಣ್ಣ ತಳ್ಳೀಕೇರಿ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
ಅಣ್ಣಪ್ಪ:ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್)
ಕೆ.ಹೇಮಂತ ಕುಮಾರ್ ಗೌಡ: ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು
ಶಶಿಕಲಾ ವಿ.ಟೆಂಗಳಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಮತ್ತು ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿಗಮ
ಅಂತೋಣಿ ಸೆಬಾಸ್ಟಿನ್: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಪ್ರಮೀಳಾ ನಾಯ್ಡು: ಕರ್ನಾಟಕ ರಾಜ್ಯ ಮಹಿಳಾ ಆಯೋಗ
ಚಿಕ್ಕಮ್ಮ ಬಸವರಾಜ: ಬಾಲಭವನ ಸೊಸೈಟಿ
ಹರಿಕೃಷ್ಣ ಬಂಟ್ವಾಳ: ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
ಜೀವನಮೂರ್ತಿ.ಎಸ್: ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ
ಸಿ.ಮುನಿಕೃಷ್ಣ: ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ ಮತ್ತು ಏಜೆನ್ಸೀಸ್ ಲಿಮಿಟೆಡ್
ಬೇಳೂರು ರಾಘವೇಂದ್ರ ಶೆಟ್ಟಿ: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ
ಕೃಷ್ಣಪ್ಪಗೌಡ ಎನ್.ಆರ್:ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಎಸ್.ಲಿಂಗಮೂರ್ತಿ: ಮೈಸೂರು ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್
ಬಿ.ಕೆ.ಮಂಜುನಾಥ್: ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ
ಎಚ್.ಹನುಮಂತಪ್ಪ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಎಂ.ರಾಮಚಂದ್ರಪ್ಪ: ಕೇಂದ್ರ ಪರಿಹಾರ ಸಮಿತಿ
ಬಾಬು ಪತ್ತಾರ್:ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ
ಕೆ.ರವೀಂದ್ರ ಶೆಟ್ಟಿ:ಕರ್ನಾಟಕ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮ
ಆರ್.ಅನುರಾಧ ಪಾಟೀಲ: ಡಿ.ದೇವರಾಜ ಅರಸ್ ಸಂಶೋಧನಾ ಸಂಸ್ಥೆ
ಕೆ.ರತ್ನಪ್ರಭ:ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ
ಎನ್.ವಿ.ಫಣೀಶ್: ಮೈಸೂರು ಪೈಂಟ್ಸ್ ಮತ್ತು ವಾರ್ನಿಸ್ ನಿಯಮಿತ
ಈರಣ್ಣ ಶಿ.ಜಡಿ:ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಧಾರವಾಡ
ಶೃತಿ:ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ
ಕೆ.ರೇವಣ್ಣಪ್ಪ ಕೋಳಗಿ: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಕೆ.ಪಿ.ಪುರುಷೋತ್ತಮ್: ಕರ್ನಾಟಕ ಕ್ರೀಡಾ ಪ್ರಾಧಿಕಾರ
ನೀಲಕಂಠ ಬಿ.ಮಾಸ್ತರಮರಡಿ: ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ
ಎಸ್.ದತ್ತಾತ್ರಿ: ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ
ಎಸ್.ಎನ್.ಈಶ್ವರಪ್ಪ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ
ಎಂ.ಆರ್.ವೆಂಕಟೇಶ್: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ಈ ನಡುವೆ ಕರ್ನಾಟಕ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ತಾರಾ, ಕ್ರೆಡಲ್ ಅಧ್ಯಕ್ಷ ರುದ್ರೇಶ್ ಹಾಗೂ ಕೆಎಸ್ಟಿಜಿಎಸ್ ಅಧ್ಯಕ್ಷ ಸಿದ್ದಲಿಂಗಸ್ವಾಮಿಯವರನ್ನು ಉಳಿಸಿಕೊಳ್ಳಲಾಗಿದೆ. ತಾರಾ ಅವರನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷೆಯಾಗಿ ಉಳಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಅದ್ಯಾವ ಕಾರಣಕ್ಕಾಗಿ, ಪಕ್ಷಕ್ಕೆ ಯಾವ ಕೊಡುಗೆಯನ್ನು ಪರಿಗಣಿಸಿ ಅವರನ್ನು ಉಳಿಸಿಕೊಳ್ಳಲಾಯ್ತು ಅನ್ನುವುದೇ ಇದೀಗ ಕುತೂಹಲ.
Discussion about this post