ಜೂನ್ ಅಂತ್ಯಕ್ಕೆ ಸುರಿದ ಮಳೆ ( Rain) ಕರಾವಳಿಯನ್ನು ತಲ್ಲಣಗೊಳಿಸಿತ್ತು. ಬೆಂಗಳೂರು ನಂತರ ಮಂಗಳೂರಿಗೆ ಗ್ರಹಚಾರ ಕಾದಿದೆ ಅನ್ನುವುದನ್ನು ತೋರಿಸಿತ್ತು.
ಮಂಗಳೂರು : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ( Rain ) ಮತ್ತಷ್ಟು ಬಿರುಸು ಪಡೆಯಲಿದೆ. ಮುಂದಿನ ನಾಲ್ಕು ದಿನಗಳ ರಾಜ್ಯದ ಹಲವು ಕಡೆಗಳಲ್ಲಿ ಭಾರೀ ಮಳೆ ( Rain) ನಿರೀಕ್ಷಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ವ್ಯಾಪಕ ಮಳೆ ಸುರಿಯಲಿದ್ದು, ಈ ಜಿಲ್ಲೆಗಳಿಗೆ ಆರೆಂಜ್ ಆಲರ್ಟ್ ( Orange alert ) ನೀಡಲಾಗಿದೆ. ಜುಲೈ 7 ರ ತನಕ ಈ ಆರೆಂಜ್ ಆಲರ್ಟ್ ಮುಂದುವರಿಯಲಿದೆ. ಈ ನಡುವೆ ಆಲರ್ಟ್ ಬದಲಾಗುವ ಸಾಧ್ಯತೆಗಳು ಬದಲಾಗುವ ಹವಾಮಾನದ ಮೇಲೆ ನಿರ್ಧರಿತವಾಗಿರುತ್ತದೆ.
ಇದನ್ನೂ ಓದಿ : ರಾಜ್ಯದಲ್ಲಿ ತೀವ್ರಗೊಂಡ ಮುಂಗಾರು : ಜುಲೈ 1 ರ ತನಕ ವ್ಯಾಪಕ ಮಳೆಯ ಮುನ್ಸೂಚನೆ
ಈ ನಡುವೆ ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ 4 ರಿಂದ ಜುಲೈ 7ರವರೆಗೆ ಮತ್ತು ಚಾಮರಾಜನಗರ, ಬಾಗಲಕೋಟೆ, ಧಾರವಾಡ, ವಿಜಯಪುರ, ರಾಯಚೂರು, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಿಗೆ ಜುಲೈ 5 ರಿಂದ ಜುಲೈ 7ರವರೆಗೆ ಯಲ್ಲೋ ಆಲರ್ಟ್ ನೀಡಲಾಗಿದೆ.
ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆ : ರೆಡ್ ಆಲರ್ಟ್ ಘೋಷಣೆ : ಹಲವು ಕಡೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಇನ್ನು ಭಾನುವಾರ ಕೊಡಗಿನ ನಾಪೋಕ್ಲು ವಿನಲ್ಲಿ 100ಮಿಮೀ, ಭಾಗಮಂಡಲದಲ್ಲಿ 160 ಮಿಮೀ, ಚಿಕ್ಕಮಗಳೂರಿನ ಶೃಂಗೇರಿ 140ಮಿಮೀ, ದಕ್ಷಿಣ ಕನ್ನಡದ ಧರ್ಮಸ್ಥಳದಲ್ಲಿ 90 ಮಿಮೀ, ಬೆಳ್ತಂಗಡಿ 90 ಮಿಮೀ, ಮಾಣಿ 80 ಮಿಮೀ, ಪುತ್ತೂರು 80 ಮಿಮೀ ಮಳೆಯಾಗಿದೆ.
ಕೊರೋನಾ ಲಾಕ್ ಡೌನ್ ತಂದ ಸಂಕಷ್ಟ : ಬ್ಯಾಂಕ್ ಸಾಲ ತೀರಿಸಲು ರಕ್ತ ಚಂದನ ಸ್ಮಗ್ಲಿಂಗ್
ಬೆಂಗಳೂರು : ಕೊರೋನಾ ಲಾಕ್ ಡೌನ್ ನಿಂದಾಗಿ ನಷ್ಟಕ್ಕೆ ಒಳಗಾಗಿದ್ದ ಟ್ರಾನ್ಸ್ ಪೋರ್ಟ್ ಮಾಲೀಕನೊಬ್ಬ ರಕ್ತಚಂದನ ವ್ಯವಹಾರ ಮಾಡಿ ಸಾಲ ತೀರಿಸಲು ಹೋಗಿ ಬೆಂಗಳೂರು ಪೊಲೀಸರ ಅತಿಥಿಯಾದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ತಮಿಳುನಾಡು ಮೂಲದ ಚಂದ್ರು ಕ್ಯಾಂಟರ್ ಮತ್ತು ಕಾರುಗಳನ್ನು ಇಟ್ಟುಕೊಂಡು ಬಾಡಿಗೆ ಮೂಲಕ ಜೀವನ ಸಾಗಿಸುತ್ತಿದ್ದ. ಕೊರೋನಾ ಲಾಕ್ ಡೌನ್ ನಿಂದ ಚಂದ್ರುವಿನ ವ್ಯವಹಾರ ಕುಸಿದು ಬಿತ್ತು. ಹಾಗಂತ ಬ್ಯಾಂಕ್ ಸಿಬ್ಬಂದಿ ಕೇಳಬಕ್ಲ. ಸಾಲ ತೀರಿಸಲು ಪಟ್ಟು ಹಿಡಿದಿದ್ದಾರೆ. ಸಾಲ ಕಟ್ಟಲಾಗದ ಕಾರಣ ಕ್ಯಾಂಟರ್ ಗಳನ್ನು ಜಪ್ತಿ ಮಾಡಿದ್ದಾರೆ.
ಹೀಗಾಗಿ ಹೇಗಾದರೂ ಸರಿ ಬ್ಯಾಂಕ್ ಸಾಲ ತೀರಿಸಿ ಮತ್ತೆ ವ್ಯವಹಾರಗಳನ್ನು ಸರಿ ಮಾಡಬೇಕು ಎಂದು ನಿರ್ಧರಿಸಿದ ಚಂದ್ರು ಕಳ್ಳ ಮಾರ್ಗ ಹಿಡಿದಿದ್ದಾನೆ. ಇದೇ ವೇಳೆ ರಕ್ತಚಂದನ ದಂಧೆಕೋರರ ಬಳಿ ಕೂಲಿ ಕಾರ್ಮಿಕನಾಗಿದ್ದ ವಿಘ್ನೇಶ್ ಪರಿಚಯವಾಗಿದೆ.
ಹೀಗಾಗಿ ವಿಘ್ನೇಶ್ ಜೊತೆ ಸೇರಿ ರಕ್ತಚಂದನ ವ್ಯವಹಾರ ಪ್ರಾರಂಭಿಸಿದ ಚಂದ್ರು ಅಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ರಕ್ತಚಂದನ ಮರದ ತುಂಡಿಗೆ 300 ರೂಪಾಯಿ ನೀಡಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ 2 ಸಾವಿರ ರೂಪಾಯಿಗೆ ಮಾರಲಾರಂಭಿಸಿದ. ಕಳೆದ ಎಂಟು ತಿಂಗಳಿಂದ ವ್ಯವಹಾರ ಚೆನ್ನಾಗಿಯೇ ನಡೆದಿತ್ತು.
ಈ ನಡುವೆ ಕೆಲ ದಿನಗಳ ಹಿಂದೆ ಆರ್.ಪಿ. ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ವಿಘ್ನೇಶ್ ಚಲಾಯಿಸುತ್ತಿದ್ದ ಕಾರು ಪೊಲೀಸರ ಕಣ್ಣಿಗೆ ಬಿದ್ದಿದೆ. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ 51 ಲಕ್ಷ ಮೌಲ್ಯದ 4.53 ಕ್ವಿಂಟಾಲ್ ರಕ್ತ ಚಂದನ ಸಿಕ್ಕಿದೆ.
ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೆಡಿಕಲ್ ವಿದ್ಯಾರ್ಥಿನಿ ಸಾವು
ಕೊಪ್ಪಳ : ಚಲಿಸುತ್ತಿದ್ದ ರೈನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ, ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಬಳ್ಳಾರಿ ಮೂಲಕ ತೇಜಶ್ರೀ ( 22) ಎಂದು ಗುರುತಿಸಲಾಗಿದೆ.
ಕೊಪ್ಪಳ ಕಿಡದಾಳ್ ರೈಲ್ವೆ ಗೇಟ್ ಬಳಿ ಜುಲೈ 2 ರಂದು ಸಂಜೆ ಹೊತ್ತಿಗೆ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ತೇಜಶ್ರೀ ಮೃತಪಟ್ಟಿದ್ದಾಳೆ.
Discussion about this post