ಐದು ಡಬ್ಬಗಳಲ್ಲಿ ಏಳು ಭ್ರೂಣಗಳನ್ನು ಯಾರು ಎಸೆದಿರಬಹುದು ಅನ್ನುವುದು ಯಕ್ಷ ಪ್ರಶ್ನೆಯಾಗಿತ್ತು
ಬೆಳಗಾವಿ : ಜಿಲ್ಲೆಯ ಮೂಡಲಗಿ ಪಟ್ಟಣದ ಹಳ್ಳದಲ್ಲಿ ಬಾಟಲಿಯಲ್ಲಿ ಭ್ರೂಣ ಪತ್ತೆಯಾದ ಪ್ರಕರಣವನ್ನು ಕೊನೆಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಬೇಧಿಸಿದ್ದಾರೆ. ಈ ಸಂಬಂಧ ಆರು ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದ್ದು, ವೆಂಕಟೇಶ ಹೆರಿಗೆ ಆಸ್ಪತ್ರೆಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್ ಕೋಣೆ ಪೊಲೀಸರ ಸಮ್ಮುಖದಲ್ಲಿ ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ್ದಾರೆ.
ಇನ್ನು ತಪ್ಪು ಒಪ್ಪಿಕೊಂಡಿರುವ ವೆಂಕಟೇಶ ಹೆರಿಗೆ ಆಸ್ಪತ್ರೆ ವೈದ್ಯ ಡಾ. ವೀಣಾ ಕರಡಿ, ಏಳು ಭ್ರೂಣಗಳನ್ನು ತಮ್ಮ ಆಸ್ಪತ್ರೆ ವತಿಯಿಂದಲೇ ಎಸೆಯಲಾಗಿದೆ ಅಂದಿದ್ದಾರೆ. ಆಸ್ಪತ್ರೆಯಲ್ಲಿ ಪ್ರಿಸರ್ವ್ ಮಾಡಿ ಬಾಟಲಿಗಳಲ್ಲಿ ಬ್ರೂಣಗಳನ್ನು ಇಡಲಾಗಿತ್ತು. ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಶಿಫ್ಟ್ ಆಗುವಾಗ ಭ್ರೂಣಗಳನ್ನು ಎಸೆಯಲು ಆಸ್ಪತ್ರೆ ಸಿಬ್ಬಂದಿಗೆ ಕೊಡಲಾಗಿತ್ತು. ಆದರೆ ಅವರು ಅವುಗಳನ್ನು ಜುನ್ 23 ರಂದು ಹಳ್ಳದಲ್ಲಿ ಎಸೆದಿದ್ದಾರೆ ಎಂದು ಕಣಕರೆಡ್ಡಿ ತಪ್ಪೊಪ್ಪಿಕೊಂಡಿದ್ದಾರೆ.
ಈ ಭ್ರೂಣಗಳನ್ನು Demonstration ಸಲುವಾಗಿ ಇಡಲಾಗಿತ್ತು ಅನ್ನುವ ಮಾಹಿತಿ ಸಿಕ್ಕಿದ್ದು, ಈ ಭ್ರೂಣಗಳ ಪೈಕಿ ಒಂದಕ್ಕೆ ತಲೆ ಇಲ್ಲ, ಇನ್ನೊಂದಕ್ಕೆ ಹೊಟ್ಟೆಯ ಕರುಳು ಹೊರಗೆ ಬಂದಿದೆ. ಇನ್ನೆರಡು ಮಕ್ಕಳ ಎದೆ ಅಂಟಿಕೊಂಡಿವೆ ಎಂದು ಡಾ. ವೀಣಾ ಕಣಕರೆಡ್ಡಿ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Discussion about this post