ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಕುರಿತಂತೆ ಪ್ರಾರಂಭವಾಗಿರುವ ವಿವಾದ ಇದೀಗ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರನ್ನ ಗುರಿ ಮಾಡಿದೆ. ಪಠ್ಯ ಪುಸ್ತಕ ಕುರಿತಂತೆ ಚರ್ಚೆ ನಡೆಯಬೇಕಾಗಿದ್ದ ಜಾಗದಲ್ಲಿ ರೋಹಿತ್ ಚಕ್ರತೀರ್ಥ ಅವರ ಸಾಮಾಜಿಕ ಜಾಲತಾಣಗಳ ಪೋಸ್ಟ್ ಬಗ್ಗೆ ಚರ್ಚೆ ನಡೆಯತ್ತಿದೆ. ಬರಗೂರು ಹಾಗೂ ಚಕ್ರತೀರ್ಥ ಅವರು ಪರಿಷ್ಕರಣೆ ಬಗ್ಗೆ ಚರ್ಚೆ ನಡೆದಿರುತ್ತಿದ್ರೆ ಫಲಿತಾಂಶವೊಂದನ್ನು ನಿರೀಕ್ಷಿಸಬಹುದಿತ್ತು.
ಸಾಮಾಜಿಕ ಜಾಲತಾಣಗಳ ಪೋಸ್ಟ್ ಬಗ್ಗೆ ಪೊಲೀಸರು ಹಾಗೂ ನ್ಯಾಯಾಲಯಗಳು ಕ್ರಮ ಕೈಗೊಳ್ಳಬೇಕೇ ಹೊರತು, ಅದನ್ನು ಚರ್ಚಿಸುವುದು ಕೇವಲ ರಾಜಕೀಯವಾಗುತ್ತದೆ.
ಈ ನಡುವೆ ಪಠ್ಯ ಪುಸ್ತಕ ಪರಿಷ್ಕಣೆ ಕುರಿತಂತೆ ಎದ್ದಿರುವ ಆರೋಪಗಳಿಗೆ ಸರ್ಕಾರ ಸ್ಪಷ್ಟನೆ ಕೊಟ್ಟಿದೆ. ಈ ಬಗ್ಗೆ ಸುದೀರ್ಘ ಹೇಳಿಕೆ ಹೊರ ಬಿದ್ದಿದ್ದು, ಬಸವಣ್ಣ ಅವರ ಕುರಿತಂತೆ ಕೇಳಿ ಬಂದಿರುವ ಆಕ್ಷೇಪಕ್ಕೆ ಸ್ಪಂದಿಸಿರುವ ಸರ್ಕಾರ, ಯಾರ ಭಾವನೆಗೂ ಧಕ್ಕೆ ಬಾರದಂತೆ ಪರಿಷ್ಕರಿಸುವುದಾಗಿ ಭರವಸೆ ನೀಡಿದೆ. ಜೊತೆಗೆ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯಿಂದ ರಚಿತವಾದ ಪಠ್ಯ ಪುಸ್ತಕದಲ್ಲಿರುವ ಅಂಶಗಳನ್ನು ಉಲ್ಲೇಖಿಸುವ ಮೂಲಕ, ಆಗಿಲ್ಲದ ವಿವಾದ ಈಗ್ಯಾಕೆ ಅನ್ನುವ ಪ್ರಶ್ನೆಯನ್ನು ಪರೋಕ್ಷವಾಗಿ ಎತ್ತಿದೆ.
ಇನ್ನು ಕುವೆಂಪು ಅವರಿಗೆ ಅವಮಾನವಾಗಿರುವ ಆರೋಪದ ಕುರಿತಂತೆ ಸೂಕ್ತ ತನಿಖೆಗಾಗಿ ಸೈಬರ್ ಪೊಲೀಸರಿಗೆ ಸೂಚನೆ ನೀಡಲಾಗಿದೆ.
ಇನ್ನು ರೋಹಿತ್ ಚಕ್ರತೀರ್ಥ ಅವರನ್ನು ವಜಾಗೊಳಿಸಬೇಕು ಅನ್ನುವ ಆಗ್ರಹಕ್ಕೆ ಕುರಿತಂತೆ, ಪ್ರಸ್ತುತ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿದ್ದು, ಪರಿಷ್ಕರಣಾ ಸಮಿತಿ ವಿಸರ್ಜನೆಗೊಂಡಿದೆ ಅಂದಿದೆ.
ಇನ್ನು ಹಲವು ಪಾಠಗಳ ಸೇರ್ಪಡೆ ಕುರಿತಂತೆಯೂ ಮಾಹಿತಿ ನೀಡಲಾಗಿದೆ.
Discussion about this post