ನೀ ಮುಡಿದ ಮಲ್ಲಿಗೆ’, ‘ಚಂದ್ರಮುಖಿ ಪ್ರಾಣಸಖಿ’, ‘ದೇವೀರಿ’, ‘ದೀಪಾವಳಿ’, ‘ಕುರಿಗಳು ಸಾರ್ ಕುರಿಗಳು’, ‘ಪರ್ವ’, ‘ನಿನಗಾಗಿ’, ‘ಪ್ರೀತಿ ಪ್ರೇಮ ಪ್ರಣಯ’, ‘ಶಾಂತಿ’, ‘ಭಗವಾನ್’, ‘ಚಿಂಗಾರಿ’, ‘ಕ್ರೇಜಿಸ್ಟಾರ್’, ‘ನಿರುತ್ತರ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ನಟಿ ಕಮ್ ರಾಜಕಾರಣಿ ಭಾವನಾ ರಾಮಣ್ಣ ಕಿರುತೆರೆಗೆ ಬಂದಿದ್ದಾರೆ.
ಹಿಂದೊಮ್ಮೆ ಕನ್ನಡತಿ ಧಾರವಾಹಿಗೆ ಅತಿಥಿಯಾಗಿ ಬಂದಿದ್ದ ಭಾವನಾ, ಚಂದನವನದಲ್ಲಿ ಉತ್ತಮ ಸಿನಿಮಾದ ನಿರೀಕ್ಷೆಯಲ್ಲಿದ್ದರು. ಜೊತೆಗೆ ರಾಜಕೀಯವಾಗಿ ಅವರಿಗೆ ನೆಲೆ ಸಿಗದ ಕಾರಣ ಚಂದನವನವೇ ಅವರ ಆಯ್ಕೆಯಾಗಿತ್ತು. ಹೀಗಾಗಿಯೇ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಅನ್ನುವ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದರು.
ಇದೇ ಸಂದರ್ಭದಲ್ಲಿ ಕಿರುತೆರೆಯ ಲಕ್ಕಿ ನಿರ್ದೇಶಕ ರಾಮ್ ಜಿ ಗರಡಿಯಿಂದ ಭಾವನಾ ಅವರಿಗೆ ಆಹ್ವಾನ ಬಂದಿದ್ದು, ರಾಮಾಚಾರಿ ಧಾರವಾಹಿಯಲ್ಲಿ ಪ್ರಮುಖ ಪಾತ್ರವೊಂದನ್ನು ನೀಡಲಾಗಿದೆ.
ನಟ ಗುರುದತ್ ಪತ್ನಿಯಾಗಿ ಕಾಣಿಸಿಕೊಳ್ಳಲಿರುವ ಭಾವನಾ ಕಂಪನಿಯನ್ನು ನಡೆಸುವ ಶಕ್ತಿಶಾಲಿ, ಸೊಕ್ಕಿನ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ತನ್ನ ಇಚ್ಛೆಗೆ ಅನುಗುಣವಾಗಿ ಎಲ್ಲವೂ ಯಾವಾಗಲೂ ನಡೆಯಬೇಕೆಂದು ಬಯಸುವ ಹಠಮಾರಿ ಮಹಿಳೆಯ ಪಾತ್ರವನ್ನು ಭಾವನಾ ನಿರ್ವಹಿಸಲಿದ್ದಾರೆ.
Discussion about this post