ಕಾರ್ಬನ್ ಫೈಬರ್ ದೋಟಿಯ ಬಳಕೆ ಕುರಿತಂತೆ ದಕ್ಷಿಣ ಕನ್ನಡದಲ್ಲಿ ನಿಧಾನವಾಗಿ ಒಲವು ಕಾಣಿಸಲಾರಂಭಿಸಿದೆ. ಕೆಲವೊಂದು ಕಡೆ ಕತ್ತು ನೋವು ಬರಲಾರದೆ ಅನ್ನುವ ಅಪಸ್ವರಗಳನ್ನು ಹೊರತುಪಡಿಸಿದ್ರೆ, ಅಡಿಕೆ ಕೊಯ್ಲಿನ ಕಾರ್ಮಿಕರ ಸಮಸ್ಯೆ ಎದುರಿಸುವ ಮಂದಿ ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರದ ಬಗ್ಗೆ ಒಲವು ತೋರಿಸಲಾರಂಭಿಸಿದ್ದಾರೆ. ಮಾತ್ರವಲ್ಲದೆ ಮರ ಹತ್ತಿ ಕೊಯ್ಲು ಮಾಡುವ ಮಂದಿಯೂ ಅಪಾಯದಿಂದ ಪಾರಾಗಬಹುದಾದ್ರೆ ಒಂದು ಕೈ ನೋಡಬಾರದ್ಯಾಕೆ ಅಂದಿದ್ದಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಮೂರು ನಾಲ್ಕು ಅಡಿಕೆ ಕೌಶಲ್ಯ ಪಡೆ ತರಬೇತಿ ಶಿಬಿರಗಳು ನಡೆದಿದ್ದು, ಕಾರ್ಬನ್ ಫೈಬರ್ ದೋಟಿಯ ಬಗ್ಗೆ ಆಶಾವಾದ ಮೂಡಿದೆ.
ಈ ನಡುವೆ ಪುಣಚ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ತರಬೇತಿಗೆ ಸಿದ್ದತೆಗಳು ಪ್ರಾರಂಭಗೊಂಡಿದ್ದು, ಫೆಬ್ರವರಿ 1 ರಂದು ತರಬೇತಿಗೆ ದಿನ ನಿಗದಿ ಮಾಡಲಾಗಿದೆ.
ಈ ಸಂಬಂಧ ಅಡಿಕೆ ಕೊಯ್ಲು ಮತ್ತು ಸಿಂಪಡಣೆ ಮಾಡುವ ವೃತ್ತಿ ಪರರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಹೀಗಾಗಿ ಪುಣಚ ಗ್ರಾಮದವರ ವಿಳಾಸ ಮೊಬೈಲ್ ನಂಬರ್ ಗಳನ್ನು 9886652495 ಮತ್ತು ಕೇಪು ಗ್ರಾಮದವರ ವಿವರಗಳನ್ನು 94482 01034 ಈ ಮೊಬೈಲ್ ನಂಬರ್ ಗೆ ವಾಟ್ಸಾಪ್ ಮುಖಾಂತರ ಕಳುಹಿಸಿಲು ಮನವಿ ಮಾಡಲಾಗಿದೆ.
ಫೆಬ್ರವರಿ ಒಂದರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರ ವರೆಗೆ ಶಿಬರ ನಡೆಯಲಿದ್ದು, ಅರ್ಜಿಯನ್ನು ಕಚೇರಿಯಿಂದ ಪಡೆದು ಜನವರಿ 25ರ ಒಳಗೆ ಸಲ್ಲಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
ಪ್ರಥಮ ಹಂತದಲ್ಲಿ 20 ಜನರಿಗೆ ಮಾತ್ರ ಅವಕಾಶವಿದ್ದು, ಪುಣಚ ಮತ್ತು ಕೇಪು ಗ್ರಾಮದವರಿಗೆ ಮಾತ್ರ ಈ ತರಬೇತಿ ಅವಕಾಶ ಸಿಗಲಿದೆ.
Discussion about this post