ನವದೆಹಲಿ : ಅದ್ಯಾವ ಸರ್ಕಾರ ಅಧಿಕಾರಕ್ಕೆ ಬರಲಿ ಹಸಿರು ಶಾಲು ಹೊದ್ದು, ನಾವು ರೈತ ಪರ, ನಾವು ಮಣ್ಣಿನ ಮಕ್ಕಳು ಅನ್ನುತ್ತಾರೆ. ಆದರೆ ರೈತ ಬೆಳೆದ ಬೆಳೆಗೆ ಸೂಕ್ತ ಬೆಲೆ ಕಲ್ಪಿಸುವ ಯೋಗ್ಯತೆ ಇವರಿಗಿರುವುದಿಲ್ಲ. ಭತ್ತ ಬೆಳೆದ ರೈತರ ಸಂಕಷ್ಟ ಇದಕ್ಕೆ ಉತ್ತಮ ಉದಾಹರಣೆ. ಭತ್ತಕ್ಕೆ ಬೆಂಬಲ ಬೆಲೆ ಕೊಡುವ ನಿಟ್ಟಿನಲ್ಲಿ ಸೂಕ್ತ ನಿಯಮ ರೂಪಿಸಿ ಅಂದ್ರೆ ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ.
ಈ ನಡುವೆ ರೈತರ ಆತ್ಮಹತ್ಯೆ ವಿಚಾರದಲ್ಲಿ ಕರ್ನಾಟಕ ನಂಬರ್ 2 ಅನ್ನು ಅಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಕೇಂದ್ರ ಸರ್ಕಾರವೇ ಲೋಕಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು 2020ರಲ್ಲಿ ಭಾರತದಲ್ಲಿ 5579 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, 2567 ರೈತರು ಮಹರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ರೆ, ಕರ್ನಾಟಕದಲ್ಲಿ 1072 ರೈತರು ಆತ್ಮಹತ್ಯೆ ಶರಣಾಗಿದ್ದಾರೆ.
ಮೂರನೇ ಸ್ಥಾನದಲ್ಲಿ ಆಂಧ್ರ ಪ್ರದೇಶವಿದ್ದು ಅಲ್ಲಿ 564 ರೈತರು, ನಾಲ್ಕನೇ ಸ್ಥಾನದಲ್ಲಿ ತೆಲಂಗಾಣವಿದ್ದು ಅಲ್ಲಿ 466, 5ನೇ ಸ್ಥಾನದಲ್ಲಿ ಮಧ್ಯಪ್ರದೇಶವಿದ್ದು ಅಲ್ಲಿ 235, ನಂತರದ ಸ್ಥಾನದಲ್ಲಿ ಛತ್ತೀಸ್ಗಢವಿದ್ದು ಅಲ್ಲಿ 227 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಲೋಕಸಭೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, 2019ರಲ್ಲಿ 5957 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.
ಈ ವರ್ಷ ಅಕಾಲಿಕವಾಗಿ ಸುರಿದ ಮಳೆ ರೈತರನ್ನು ಕಂಗಾಲು ಮಾಡಿದೆ. ರೈತರಿಗೆ ಪರಿಹಾರ ನೀಡಬೇಕಾಗಿರುವ ಸರ್ಕಾರ ಜಿಲ್ಲಾಧಿಕಾರಿಗಳು ನೀಡುವ ವರದಿಯನ್ನು ಕಾಯುತ್ತಿದೆ.
Discussion about this post