ಬೆಂಗಳೂರು : ರಾಜ್ಯದ ಹಲವು ಕಡೆಗಳಲ್ಲಿ ಇದು ಎಸಿಬಿ ಅಧಿಕಾರಿಗಳು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಅಕ್ರಮ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದ್ದು, ಕೋಟಿ ಕೋಟಿ ರೂಪಾಯಿ ಮೊತ್ತದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಂತೆ ಕಂತೆ ದಾಖಲೆಗಳು ದೊರೆತಿದೆ. ಕೆಲ ಅಧಿಕಾರಿಗಳ ಮನೆಯಲ್ಲಿ ಬ್ಯಾಂಕ್ ಗಳೇ ಪತ್ತೆಯಾದರೆ ಮತ್ತೆ ಕೆಲವರ ಮನೆಯಲ್ಲಿ ಚಿನ್ನದ ಅಂಗಡಿಯೇ ಇತ್ತು.
ಈ ನಡುವೆ ರೈತರನ್ನು ಉದ್ದಾರ ಮಾಡಪ್ಪ ಎಂದು ನೇಮಕವಾಗಿದ್ದ ಅಧಿಕಾರಿಯೊಬ್ಬ ರೈತರ ದುಡ್ಡು ತಿಂದು ಹೆಂಡತಿಗೆ 5 ತಾಳಿ ಮಾಡಿದ ವಿಷಯವೂ ಬಹಿರಂಗವಾಗಿದೆ. ಕೇವಲ 5 ತಾಳಿ ಮಾತ್ರವಲ್ಲದೆ ಆ ಅಧಿಕಾರಿಯ 5 ತಲೆಮಾರು ಕೂತು ಉಣ್ಣುವಷ್ಟು ಆಸ್ತಿ ಮಾಡಿರುವುದು ಕೂಡಾ ಬೆಳಕಿಗೆ ಬಂದಿದೆ.
ಗದಗದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪನ ಮನೆಯ ಮೇಲೆ ದಾಳಿ ನಡೆಸಿದ ವೇಳೆ ಮನೆಯಲ್ಲಿ 7 ಕೆ.ಜಿ. ಚಿನ್ನ, 55 ಚಿನ್ನದ ಬಿಸ್ಕಟ್, 15 ಲಕ್ಷ ಕ್ಯಾಶ್, 20 ಕ್ಕೂ ಹೆಚ್ಚು ಗೋಲ್ಡ್ ಕಾಯಿನ್, 5 ತಾಳಿ ಸರ, 10 ಸರ, 10 ನಕ್ಲೆಸ್, 12 ಬ್ರಾಸ್ಲೆಟ್, 4 ಜೊತೆ ಚಿನ್ನದ ಬಳೆ, 22 ಉಂಗುರ, 20 ಜೊತೆ ಚಿನ್ನದ ಓಲೆ ಮತ್ತು ದೊಡ್ಡ ಪ್ರಮಾಣದ ಬೆಳ್ಳಿ ಆಭರಣ ಪತ್ತೆಯಾಗಿದೆ.
ಜೊತೆಗೆ ಬೇನಾಮಿ ಹೆಸರಿನಲ್ಲಿದ್ದ ಭೂಮಿಯ ದಾಖಲೆ ಪತ್ರಗಳು ಕೂಡಾ ಪತ್ತೆಯಾದ್ದು, ಗದಗದಲ್ಲಿ 2 ಅಂತಸ್ತಿನ ಮನೆ ಮತ್ತು ಚನ್ನಗಿರಿಯಲ್ಲಿ ಫಾರ್ಮ್ ಹೌಸ್ ಇರುವುದು ಗೊತ್ತಾಗಿದೆ. ಇದು ಪ್ರಾಥಮಿಕ ಮಾಹಿತಿಯಾಗಿದ್ದು, ಇನ್ನುಳಿದಂತೆ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಸರ್ಕಾರ ರೈತರ ಆದಾಯ ಡಬ್ಬಲ್ ಮಾಡ್ತೀವಿ ಅಂತಾ ಹೇಳುತ್ತಿದೆ. ಇಲ್ಲಿ ನೋಡಿದರೆ ರೈತರ ಹೆಸರಿನಲ್ಲಿ ಕೃಷಿ ಅಧಿಕಾರಿಗಳು ಕುಬೇರರಾಗುತ್ತಿದ್ದಾರೆ. ಪಾಪ ಕೃಷಿ ಮಂತ್ರಿಗೆ ಇವೆಲ್ಲಾ ಗೊತ್ತಿಲ್ಲ ಅಂದುಕೊಂಡ್ರೆ ನಮ್ಮಂತ ಬಕ್ರಗಳು ಮತ್ಯಾರು ಇಲ್ಲ.
Discussion about this post