ಬೆಂಗಳೂರು : ದೀಪಾವಳಿ ಸಂದರ್ಭದಲ್ಲಿ ಪಟಾಕಿ ಹೊಡೆಯುವಾಗ ಎಚ್ಚರವಿರಲಿ. ಅದರಲ್ಲೂ ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಕಿವಿ ಕಣ್ಣಿಗೆ ಅಪಾಯ ಉಂಟು ಮಾಡುವ ಪಟಾಕಿಗಳಿಂದ ದೂರವಿರಿ ಎಂದು ಅದೆಷ್ಟು ಹೇಳಿದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ಇದರ ಫಲವಾಗಿ ಈ ಬಾರಿ ಬೆಂಗಳೂರು ಒಂದರಲ್ಲೇ 52ಕ್ಕೂ ಹೆಚ್ಚು ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಈ ಪೈಕಿ ಮೂವರಿಗೆ ದೃಷ್ಟಿ ಬರುವ ಸಾಧ್ಯತೆಗಳೇ ಇಲ್ಲ ಅನ್ನಲಾಗಿದೆ.
ಈ ಮೂವರ ಪೈಕಿ ಒಬ್ಬ 8 ವರ್ಷದ ಬಾಲಕನಾಗಿದ್ದು, ಮತ್ತೊಬ್ಬ 14 ವರ್ಷದ ಬಾಲಕನಾಗಿದ್ದಾನೆ. ಮತ್ತೊಬ್ಬರು 70 ವರ್ಷದ ಅಜ್ಜಿ. 14 ವರ್ಷದ ಬಾಲಕ ಸಕ್ಕರೆಗೊಲ್ಲಹಳ್ಳಿಯವನಾಗಿದ್ದು, ಬೇರೆಯವರು ಸಿಡಿಸಿದ ಬಿಜಲಿ ಪಟಾಕಿಯಿಂದ ಗಾಯಗೊಂಡಿದ್ದಾನೆ. ಇನ್ನು 70 ವರ್ಷದ ಅಜ್ಜಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೇರೆಯವರು ಸಿಡಿಸಿದ ಪಟಾಕಿಯ ಕಿಡಿ ತಾಗಿ ಗಂಭೀರವಾಗಿ ಗಾಯಗೊಂಡಿದ್ದರು.
ಇನ್ನು ಈ ಬಾರಿ ಪಟಾಕಿಯಿಂದ ಗಾಯಗೊಂಡು 23 ಮಂದಿ ಮಿಂಟೋ ಆಸ್ಪತ್ರೆಗೆ ದಾಖಲಾಗಿದ್ದು, 20 ಮಂದಿ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಗರವಾಲ್ ಆಸ್ಪತ್ರೆಯಲ್ಲಿ 2, ವಿಕ್ಟೋರಿಯಾ ಬರ್ನ್ಸ್ ವಾರ್ಡ್ ನಲ್ಲಿ 4 ಮತ್ತು ಇತರೆ ಆಸ್ಪತ್ರೆಗಳಲ್ಲಿ 3 ಮಂದಿಗೆ ಚಿಕಿತ್ಸೆ ನೀಡಲಾಗಿದೆ.
Discussion about this post