ಜಗತ್ತಿನ ಎಲ್ಲಾ ಸಾಮಾಜಿಕ ಜಾಲತಾಣಗಳಿಂದ ಬಹಿಷ್ಕಾರಕ್ಕೆ ಒಳಗಾದ ಎಕೈಕ ವ್ಯಕ್ತಿ ಅಂದ್ರೆ ಅದು ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಒಂದಲ್ಲ ಒಂದು ವಿವಾದಿಂದ ಕೂಡಿದ ಟ್ವೀಟ್ ಮಾಡಿದ ಕಾರಣಕ್ಕೆ ಟ್ವಿಟ್ಟರ್ ಟ್ರಂಪ್ ಅವರಿಗೆ ಶಾಶ್ವತ ನಿಷೇಧ ಹೇರಿತ್ತು. ಇನ್ನು ಫೇಸ್ ಬುಕ್ ಕಥೆಯೂ ಇದೇ ಆಗಿದೆ.
ಈ ನಡುವೆ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸ್ವಂತ ಸಾಮಾಜಿಕ ಜಾಲತಾಣ ಆರಂಭಿಸುವುದಾಗಿ ಹೇಳಿದ್ದಾರೆ. ಹಾಗಂತ ಇದು ಹೊಸ ವಿಷಯವಲ್ಲ. ಅಮೆರಿಕ ಚುನಾವಣೆ ಸಂದರ್ಭದಲ್ಲೇ ಫೇಸ್ ಬುಕ್ ಮತ್ತು ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವುದಾಗಿ ಘೋಷಿಸಿದ್ದರು. ಅದನ್ನೇ ಇದೀಗ ಕಾರ್ಯರೂಪಕ್ಕೆ ತರಲು ಹೊರಟಿದ್ದಾರೆ.
ಹೊಸ ಸಾಮಾಜಿಕ ಜಾಲತಾಣಕ್ಕೆ ಟ್ರೂತ್ ಸೋಷಿಯಲ್ ಎಂದು ನಾಮಕರಣ ಮಾಡಲಾಗಿದ್ದು, ನವೆಂಬರ್ನಲ್ಲಿ ಟ್ರಂಪ್ ಅವರ ಟ್ರೂತ್ ಸೋಷಿಯಲ್ ಜನರ ಬಳಕೆಗೆ ಸಿಗುವ ಸಾಧ್ಯತೆಗಳಿದೆ.
ಟೆಕ್ ದೈತ್ಯರಿಗೆ ಇದೀಗ ತಾಂಟ್ರೆ ಬಾ ತಾಂಟ್ ಎಂದು ಟ್ರಂಪ್ ತಾಂಟಲು ಹೊರಟಿದ್ದಾರೆ. ಅದರಲ್ಲಿ ಸಕ್ಸಸ್ ಆಗುತ್ತಾರೆಯೇ ಅನ್ನುವುದನ್ನು ಕಾದು ನೋಡಬೇಕಾಗಿದೆ.
Former U.S. president Donald Trump launches ‘TRUTH’ social media platform
Discussion about this post