ಬೀಜಿಂಗ್ : ವಿಶ್ವಕ್ಕೆ ಕೊರೋನಾ ಹಂಚಿದ ಚೀನಾ ರಕ್ಷಣಾ ಕ್ಷೇತ್ರದ ಮೂಲಕವೂ ವಿಶ್ವಕ್ಕೆ ಸೆಡ್ಡು ಹೊಡೆಯಲು ಮುಂದಾಗಿದೆ. ಈಗಾಗಲೇ ಈ ಸಂಬಂಧ ಅನೇಕ ಸಂಶೋಧನೆಗಳನ್ನು ಕೈಗೊಂಡಿರುವ ಡ್ರ್ಯಾಗನ್ ರಾಷ್ಟ್ರ ಮತ್ತೊಂದು ಆತಂಕಕಾರಿ ಕ್ಷಿಪಣಿ ಸಂಶೋಧಿಸಿದೆ ಅನ್ನುವ ಸುದ್ದಿ ಬಂದಿದೆ.
ಇಡೀ ಭೂಮಿಯನ್ನು ಸುತ್ತು ಹಾಕಿ ನಿಗದಿತ ಗುರಿಯದ ಮೇಲೆ ದಾಳಿ ನಡೆಸಲು ಸಾಮರ್ಥ್ಯ ಹೊಂದಿರುವ ಸೂಪರ್ ಸಾನಿಕ್ ಅಣ್ವಸ್ತ್ರ ಕ್ಷಿಪಣಿಯನ್ನು ಚೀನಾ ಪರೀಕ್ಷೆ ಮಾಡಿದೆ ಎಂದು ಬ್ರಿಟನ್ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ ಚೀನಾ ಈ ಸುದ್ದಿಯನ್ನು ನಿರಾಕರಿಸಿದ್ದು, ನಾವು ಪರೀಕ್ಷೆ ಮಾಡಿದ್ದು ಕ್ಷಿಪಣಿಯಲ್ಲ ಅದೊಂದು ಆಂತರಿಕ್ಷ ವಾಹನ ಅಂದಿದೆ.
ವರದಿಗಳ ಪ್ರಕಾರ, ಚೀನಾ ಪರೀಕ್ಷೆ ಮಾಡಿರುವ ಅಣ್ವಸ್ತ್ರ ಕ್ಷಿಪಣಿ ಶಬ್ದಕ್ಕಿಂತ 5 ಪಟ್ಟು ವೇಗದಲ್ಲಿ ಅಂದ್ರೆ ಗಂಟೆಗೆ ಏನಿಲ್ಲ ಅಂದರೂ 6115 ಕಿಮೀ ವೇಗವನ್ನು ಈ ಕ್ಷಿಪಣಿ ಕ್ರಮಿಸಬಲ್ಲುದು. ಈ ಕ್ಷಿಪಣಿ, ಕ್ಷಿಪಣಿ ನಿರೋಧಕ ವ್ಯವಸ್ಥೆಗೆ ಕಾಣಿಸಿಕೊಳ್ಳುವುದಿಲ್ಲ, ಹೀಗಾಗಿ ಈ ಹೈಪರ್ ಸಾನಿಕ್ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸುವುದು ಕಷ್ಟ. ಇನ್ನು ಬ್ರಿಟನ್ ನ ಫೈನಾನ್ಸಿಯಲ್ ಟೈಮ್ಸ್ ಪತ್ರಿಕೆಯ ವರದಿ ನೋಡಿ ಅಮೆರಿಕಾ ಕಂಗಲಾಗಿದೆ.
China tested a nuclear-capable hypersonic missile in August that circled the globe before speeding towards its target.Launch in August of nuclear-capable rocket that circled the globe took US intelligence by surprise
Discussion about this post