ತುಮಕೂರು : ತುರುವೆಕೆರೆ ತಾಲೂಕಿನ ಹರಿಕಾರನಹಳ್ಳಿ ಗ್ರಾಮದ ಅನೇಕ ರೈತರ ಮನೆಗಳಲ್ಲಿ ಹಸುಗಳು ಮರಣವನ್ನಪ್ಪುತ್ತಿದ್ದು ಹೈನುಗಾರರನ್ನು ಆತಂಕಕ್ಕೆ ದೂಡಿದೆ. ಈಗಾಗಲೇ 8 ಹಸುಗಳು ಮೃತಪಟ್ಟಿದ್ದು ಕಾಲುಬಾಯಿ ರೋಗದ ಶಂಕೆ ವ್ಯಕ್ತವಾಗಿದೆ.
ದಂಡಿನಶಿವರ ಮತ್ತು ಲಕ್ಕಸಂದ್ರದ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಏಕಾಏಕಿ ಹಸುಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಕಾಲುಗಳಲ್ಲಿ ಗಾಯ ಕಾಣಿಸಿಕೊಳ್ಳುತ್ತದೆ. ನಿಧಾನವಾಗಿ ಕೃಶವಾಗುವ ಹಸುಗಳು ಹಾಲಿನ ಕೊಡುವ ಪ್ರಮಾಣವನ್ನು ಕಡಿಮೆ ಮಾಡುತ್ತಿದೆ. ಜೊತೆಗೆ ರಾಸುಗಳ ದೇಹದಲ್ಲಿ ಅಲ್ಲಲ್ಲಿ ಗಾಯಗಳು ಕಾಣಿಸಿಕೊಳ್ಳಲಾರಂಭಿಸುತ್ತದೆ.
ಹಾಲು ನೀಡುತ್ತಿದ್ದ ಸೀಮೆ ಹಸುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವುದು ರೈತರಿಗೆ ಬರಸಿಡಿಲು ಬಡಿದಂತಾಗಿದೆ. ಈ ಬಗ್ಗೆ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಕಾಲುಬಾಯಿ ರೋಗದ ಲಸಿಕೆಯನ್ನು ಸಕಾಲದಲ್ಲಿ ನೀಡದಿರುವುದು ಕೂಡಾ ಕಾರಣವಿರಬಹುದು ಅನ್ನಲಾಗಿದೆ. ಮೃತ ರಾಸುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ಕಾರಣವೇನು ಅನ್ನುವುದನ್ನು ಹೇಳಲು ಸಾಧ್ಯ ಎಂದು ಪಶು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
Discussion about this post