ವಿಜಯಪುರ : ರಾಜ್ಯ ರಾಷ್ಟ್ರ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯುವುದು ಕಡಿಮೆಯಾಗಿದೆ. ಬದಲಾಗಿ ಸಿಡಿ ಬಗ್ಗೆಯೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸಾಕ್ಷಿ ಅನ್ನುವಂತೆ ಅನೇಕ ರಾಜಕೀಯ ನೇತಾರರ ಸಿಡಿಗಳು ಬಿಡುಗಡೆಯಾಗಿದೆ ಕೂಡಾ. ಇದರ ಬೆನ್ನಲ್ಲೇ ಸಿನಿಮಾಗಳ ಟ್ರೇಲರ್ ರೀತಿಯಲ್ಲಿ Coming Up ಗಳು ಕಾಣಿಸಿಕೊಳತೊಡಗಿದೆ.
ಈ ನಡುವೆ ಸಿಡಿ ಭೀತಿ ಎದುರಿಸುತ್ತಿರುವ ರಾಜಕೀಯ ನಾಯಕರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ಕೂಡಾ ತಂದಿದ್ದಾರೆ. ಇದೀಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಿಡಿ ಇದೆಯಂತೆ ಅನ್ನುವ ಸುದ್ದಿಗಳು ಹರಿದಾಡುತ್ತಿದೆ. ಈ ಸಂಬಂಧ ಇನ್ ಸ್ಟಾಗ್ರಾಂ ಪೋಸ್ಟ್ ಹಾಕಲಾಗಿದ್ದು ಬಿಜೆಪಿ ಹಿಂದೂ ಹುಲಿಯ ಸಿಡಿ ಬಿಡುಗಡೆಗೆ ಕ್ಷಣಗಣನೆ, ಭರ್ಜರಿ ಯಶಸ್ಸು ಕಾಣಲಿ ಎಂದು ಆಶಿಸುತ್ತೇವೆ ಅನ್ನುವ ಟೈಟಲ್ ಕೊಡಲಾಗಿದೆ.
ಇದೀಗ ಇನ್ ಸ್ಟಾಗ್ರಾಂ ನಲ್ಲಿ ಅಶ್ಲೀಲ ಪೋಸ್ಟ್ ಹಾಕಿರುವ ಸಂಬಂಧ ಕುರಿತು ಸಿಇಎನ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮಕಾಂಗ್ರೆಸ್” ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ಬಗ್ಗೆ ಸಿಇಎನ್ ಅಪರಾಧ ವಿಭಾಗ ಠಾಣೆಯಲ್ಲಿ ದೂರು ನೀಡಲಾಗಿದೆ.
ವೂಡಾ ಸದಸ್ಯ, ಶಾಸಕ ಯತ್ನಾಳ ಬೆಂಬಲಿಗ ಲಕ್ಷ್ಮಣ ಜಾಧವ ಅನ್ನುವವರು ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
Discussion about this post