ಬೆಂಗಳೂರು : ಕೆಲ ದಿನಗಳಿಂದ ವಾರಕ್ಕೊಂದು ಕಟ್ಟಡಗಳು ಉರುಳಿ ಬೀಳುತ್ತಿದೆ. ಕೆಲವೊಂದು ಕಟ್ಟಡಗಳು ಉರುಳಿ ಬೀಳಲು BBMP ಅಧಿಕಾರಿಗಳೇ ಕಾರಣ ಅನ್ನುವುದು ಸ್ಪಷ್ಟ. ಈ ನಡುವೆ ಬೆಂಗಳೂರಿನ ಎಂಟು ವಲಯಗಳಲ್ಲಿ ಶಿಥಿಲಗೊಂಡ ಕಟ್ಟಡಗಳ ಸರ್ವೇಗೆ ಸೂಚಿಸಲಾಗಿದ್ದು 300ಕ್ಕೂ ಹೆಚ್ಚು ಕಟ್ಟಡಗಳು ಬೀಳುವ ಸ್ಥಿತಿಯಲ್ಲಿದೆ ಎಂದು ಗೊತ್ತಾಗಿದೆ.
2019ರಲ್ಲಿ ಸರ್ವೇ ನಡೆಸಿದಾಗ 185 ಶಿಥಿಲ ಕಟ್ಟಡಗಳು ಪತ್ತೆಯಾಗಿತ್ತು. ಆ ಪೈಕಿ ಕೇವಲ 10 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಕೆಲ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದೆ. ಆದರೆ 2 ವರ್ಷಗಳ ಬಳಿಕ ನಡೆದ ಸರ್ವೇಯಲ್ಲಿ ಶಿಥಿಲಗೊಂಡ ಕಟ್ಟಡಗಳ ಸಂಖ್ಯೆ ದುಪ್ಪಟ್ಟಾಗಿದೆ.
ಈ ನಡುವೆ ಸಂಖ್ಯೆಯ ಬಗ್ಗೆ ಅನುಮಾನಗಳು ಹುಟ್ಟಿದ್ದು, ನಿಖರ ಮಾಹಿತಿ ನೀಡುವಂತೆ ವಲಯವಾರು ಜಂಟಿ ಆಯುಕ್ತರಿಗೆ ಸೂಚಿಸಲಾಗಿದೆ.
Discussion about this post