ಉಡುಪಿ : ಶ್ರೀ ಕೃಷ್ಣಾಪುರ ಮಠ ಶ್ರೀಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಮಹೋತ್ಸವ ಸಮಿತಿ ಹಾಗೂ ಉಪ ಸಮಿತಿಯ ಸಭೆ ಮತ್ತು ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಶನಿವಾರ ಶ್ರೀ ಕೃಷ್ಣ ಸಭಾಂಗಣದಲ್ಲಿ ನಡೆಯಿತು.
ಶಾಸಕ ರಘುಪತಿ ಭಟ್, ಉದ್ಯಮಿ ನೇರಂಬಳ್ಳಿ ರಾಘವೇಂದ್ರ ರಾಯರು, ಕರ್ನಾಟಕ ಬ್ಯಾಂಕ್ ಎಜಿಎಂ ರಾಜಗೋಪಾಲ್ ರಾವ್ ಮನವಿ ಪತ್ರ ಬಿಡುಗಡೆ ಮಾಡಿದರು.
ಪರ್ಯಾಯ ಮಹೋತ್ಸವದ ಗೌರವಾಧ್ಯಕ್ಷರು, ಆನೆಗುಡ್ಡೆ ದೇವಸ್ಥಾನದ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ, ಸಮಿತಿ ಪ್ರಧಾನ ಕಾರ್ಯದರ್ಶಿ ವಿಷ್ಣು ಪ್ರಸಾದ್ ಪಾಡಿಗಾರ್, ಕೋಶಾಧಿಕಾರಿ ರವಿಪ್ರಸಾದ್ ಉಪಸ್ಥಿತರಿದ್ದರು.
Discussion about this post