ಸ್ಪೇನ್ನ ಸ್ಯಾಟರ್ನಿನೊ ಡೆಲಾ ಪ್ಯೂಂಟೆ ಗಾರ್ಸಿಯಾ ಅವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರಿಗೆ 112 ವರ್ಷ 211 ದಿನಗಳಾಗಿವೆ. ಹೀಗಾಗಿ ಸ್ಯಾಟರ್ನಿನೊ ಹೆಸರು ಗಿನ್ನಿಸ್ ವರ್ಡ್ ರೆಕಾರ್ಡ್ನಲ್ಲಿ ದಾಖಲಾಗಿದೆ.
1019 ಫೆಬ್ರವರಿ 11ರಂದು ಸ್ಯಾಟರ್ನಿನೊ ಅವರು ಜನಿಸಿದ್ದು, ತಮ್ಮ ದೀರ್ಘಾಯುಷ್ಯದ ಗುಟ್ಟೇನು ಅಂದ್ರೆ ಶಾಂತಿಯಿಂದ ಜೀವನ ನಡೆಸಿಕೊಂಡು ಬಂದೆ ಅನ್ನುತ್ತಾರೆ. ಫುಟ್ಬಾಲ್ ಕ್ರೀಡೆಯ ಅಭಿಮಾನಿಯಾಗಿರುವ ಸ್ಯಾಟರ್ನಿನೊ ಈ ಹಿಂದೆ ಫುಟ್ಬಾಲ್ ಆಟಗಾರರಾಗಿದ್ದರು. ತಮ್ಮದೇ ತಂಡವನ್ನು ಕಟ್ಟಿಕೊಂಡು ಪ್ಯೂಂಟೆ ಕ್ಯಾಸ್ಟ್ರೋ ಕ್ಲಬ್ ಕೂಡಾ ಪ್ರಾರಂಭಿಸಿದ್ದರಂತೆ.
ICYMI: We verified the world's oldest living man at the age of 112.
— #GWR2022 OUT NOW (@GWR) September 30, 2021
ಇನ್ನು ಸ್ಯಾಟರ್ನಿನೊ ಅವರು ಆಯಂಟೋನಿನಾ ಅನ್ನುವವರನ್ನು ಮದುವೆಯಾಗಿದ್ದು, ಈ ದಂಪತಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಓರ್ವ ಮಗನಿದ್ದಾನೆ. 14 ಮೊಮ್ಮಕ್ಕಳು. ಹೀಗೆ 22 ಸದಸ್ಯದ ಕುಟುಂಬ ಹಿರಿಯ ವ್ಯಕ್ತಿಯಾಗಿ ಸ್ಯಾಟರ್ನಿನೊ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
Discussion about this post