ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಬೆವರಳಿಸಿದ ಸ್ನೇಹ ದುಬೆ ಇದೀಗ ವೈರಲ್ ಆಗಿದ್ದಾರೆ. ಜಗತ್ತಿನ ಮುಂದೆ ಪಾಕಿಸ್ತಾನ ಮುಖವಾಡ ಕಳಚಿಟ್ಟಿರುವ ಭಾರತ ನಾರಿ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ.
ಈ ನಡುವೆ ದುಬೈ ವೈರಲ್ ಆದ ಬೆನ್ನಲ್ಲೇ ಅಜ್ ತಕ್ ನ ವರದಿಗಾರ್ತಿ ಅಂಜಲಿ ಕಶ್ಯಪ್ ಕೂಡಾ ವೈರಲ್ ಆಗಿದ್ದಾರೆ. ನಮ್ಮಲ್ಲಿ ಮಾತ್ರ ಎಂದು ಸುದ್ದಿ ಮಾಡಲು ಸ್ನೇಹ ದುಬೆಯವರ ಕಚೇರಿ ಸಿಬ್ಬಂದಿಯ ಮನವಿ ಲೆಕ್ಕಿಸದೆ ಒಳ ನುಗ್ಗಿದ ಅಂಜಲಿ ಸಂದರ್ಶನಕ್ಕೆ ಮುಂದಾಗಿದ್ದಾರೆ.
ಈ ವೇಳೆ ಅಂಜಲಿ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡ ಸ್ನೇಹ ಅಪ್ಪಟ ಭಾರತೀಯ ಶೈಲಿಯಲ್ಲಿ ಕೈಮುಗಿದು ಧನ್ಯವಾದ ಅಂದಿದ್ದಾರೆ. ಮತ್ತೊಂದು ಪ್ರಶ್ನೆ ಕೇಳಲು ಹೋಗುತ್ತಿದ್ದಂತೆ ಕೂತಿದ್ದ ಜಾಗದಿಂದ ಎದ್ದು ನಿಂತು ದಯವಿಟ್ಟು ಹೊರ ನಡೆಯಿರಿ ಎಂದು ಅತ್ಯಂತ ಗೌರವದಿಂದ ಹೇಳಿದ್ದಾರೆ.
ಇದೀಗ ಅಂಜಲಿ ನಡೆ ಟೀಕೆಗೆ ಗುರಿಯಾಗಿದ್ದು, ಪತ್ರಕರ್ತರಾಗಿದ್ದವರು ಹೇಗೆ ನಡೆದುಕೊಳ್ಳಬಾರದು ಅನ್ನುವುದಕ್ಕೆ ಈ ಘಟನೆ ಸಾಕ್ಷಿ ಅಂದಿದ್ದಾರೆ. ಬಹುತೇಕ ಅಧಿಕಾರಿಗಳು ಮಾಧ್ಯಮಗಳ ಮುಂದೆ ಮಾತನಾಡುವುದಕ್ಕೆ ನಿರ್ಬಂಧವಿದೆ. ಅದರಲ್ಲೂ ವಿಶ್ವಸಂಸ್ಥೆಯಂತಹ ವಿಚಾರಗಳಲ್ಲಿ ಯಾರು ಬೇಕೋ ಅವರು ಮಾತನಾಡುವ ಹಾಗಿಲ್ಲ. ಅಂತರರಾಷ್ಟ್ರೀಯ ವಿಚಾರಗಳನ್ನು ಯಾರು ಮಾಧ್ಯಮದ ಮುಂದೆ ಮಾತನಾಡಬೇಕು ಅನ್ನುವುದುಕ್ಕೆ ನೀತಿ ನಿಯಮಗಳಿದೆ. ಅವೆಲ್ಲವೂ ಪತ್ರಕರ್ತರಾಗಿದ್ದವರಿಗೆ ಖಂಡಿತಾ ಗೊತ್ತಿರುತ್ತದೆ.
ಒಟ್ಟಿನಲ್ಲಿ ಇತೀ ಬುದ್ದಿವಂತಿಕೆ ಮಾಡಲು ಹೋದ ಅಜ್ ತಕ್ ಅಂಜಲಿ ಕೂಡಾ ದುಬೆಯವರ ಜೊತೆ ವೈರಲ್ ಆಗಿದ್ದಾರೆ.
Discussion about this post