ಕಾಬೂಲ್ : ಆಫ್ಘಾನ್ ಅನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು ಇದೀಗ ಶಾಂತಿದೂತರ ಮುಖವಾಡ ತೊಟ್ಟಿದ್ದಾರೆ. ಆದರೆ ಇದನ್ನು ಅರಿಯದ ಕೆಲ ಪ್ರಗತಿಪರರು ಬುದ್ದಿಜೀವಿಗಳು ತಾಲಿಬಾನಿ ಪರ ಬ್ಯಾಟ್ ಬೀಸುತ್ತಿದ್ದಾರೆ. ಇದಕ್ಕೆ ಕೆಲ ರಾಷ್ಟ್ರಗಳು ಸಾಥ್ ನೀಡುತ್ತಿದೆ. ಹಾಗಂತ ಶಾಂತಿದೂತರ ಮುಖವಾಡ ತೊಟ್ಟರೆ ಕೈಗಳಿಗೆ ಅಂಟಿರುವ ರಕ್ತದ ಕಲೆಗಳನ್ನು ಅಳಿಸಲು ಸಾಧ್ಯವೇ. ಅಷ್ಟೇ ಅಲ್ಲದೆ ತಾಲಿಬಾನಿಗಳಿಗೆ ರಕ್ತ ಕುಡಿಯದಿದ್ರೆ ನಿದ್ದೆ ಹತ್ತೋದಿಲ್ಲ ಅಂದ ಮೇಲೆ ಅವರು ಶಾಂತಿ ಪ್ರಿಯರಾಗಲು ಹೇಗೆ ಸಾಧ್ಯ.
ಈ ನಡುವೆ ಅಫ್ಘಾನ್ ನಲ್ಲಿ ಅಟ್ಟಹಾಸಗೈಯುತ್ತಿರುವ ತಾಲಿಬಾನಿಗಳು ಜನರನ್ನು ಹಿಂಸಿಸುತ್ತಿದ್ದಾರೆ. ಇರೋ ಬರೋ ಕಡೆ ಪ್ರತ್ಯಕ್ಷವಾಗುತ್ತಿದ್ದ ಮಾನವ ಹಕ್ಕು ಹೋರಾಟಗಾರರು ಮೌನಕ್ಕೆ ಶರಣಾಗಿದ್ದಾರೆ ಅಂದ್ರೆ ತಾಲಿಬಾನಿಗಳ ಅಟ್ಟಹಾಸ ಹೇಗಿರಬಹುದು ಎಂದು ಊಹಿಸಬಹುದಾಗಿದೆ.
ಇದೀಗ ಮತ್ತೆ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳು 8 ತಿಂಗಳ ಗರ್ಭಿಣಿ ಮಹಿಳಾ ಪೊಲೀಸ್ ಓರ್ವಳನ್ನು ಕುಟುಂಬದವರ ಕಣ್ಣೆದುರಲ್ಲೇ ಅಮಾನವೀಯವಾಗಿ ಹತ್ಯೆ ಮಾಡಿದ್ದಾರೆ. ಮೃತಳನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ.
ಗನ್ ಹಿಡಿದು ಮನೆಗೆ ನುಗ್ಗಿದ ಉಗ್ರರು ಮನೆಯವರನ್ನು ಕಟ್ಟಿಹಾಕಿದ್ದಾರೆ. ಬಾನು ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.
Discussion about this post