ಕಾಬೂಲ್ : ನಾವು ಶಾಂತಿ ಪ್ರಿಯರು, ಸಮಾನತೆ ಪ್ರಿಯರು ಎಂದು ವಿಶ್ವಕ್ಕೆ ಸಂದೇಶ ಸಾರಲು ಹೊರಟಿರುವ ತಾಲಿಬಾನಿಗಳು, ಹುಟ್ಟು ಗುಣ ಸುಟ್ಟರೂ ಹೋಗದು ಅನ್ನುವ ಗಾದೆಯನ್ನು ಸತ್ಯ ಮಾಡಲು ಹೊರಟಿದ್ದಾರೆ. ಈಗಾಗಲೇ ಮಹಿಳಾ ಸಮಾನತೆ ಬಗ್ಗೆ ಮಾತನಾಡಿರುವ ನಾಯಕರು ಒಂದೆಡೆಯಾದರೆ, ಮತ್ತೊಂದು ಕಡೆ ಮಹಿಳೆಯರು ಹೊರಗಡೆ ಕಾಣಿಸಿಕೊಳ್ಳುವಂತಿಲ್ಲ. ಮೈ ಮುಚ್ಚುವುದು ಕಡ್ಡಾಯ, ಬಾಲಕಿಯರಿಗೆ ಶಿಕ್ಷಣವಿಲ್ಲ ಹೀಗೆ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದ್ದಾರೆ.
ಈ ನಡುವೆ ಅಫಘಾನಿಸ್ತಾನದಲ್ಲಿ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿರುವ ತಾಲಿಬಾನಿಗಳು, ಸಲಿಂಗಕಾಮಿಯೊಬ್ಬನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಕಾಬೂಲ್ ನಲ್ಲಿ ತಾಲಿಬಾನಿಗ ಕೈ ವಶವಾಗುತ್ತಿದ್ದಂತೆ ಮನೆಯಲ್ಲಿ ಅವಿತುಕೊಂಡಿದ್ದ ವ್ಯಕ್ತಿಯನ್ನು ಸ್ನೇಹಿತರ ಸೋಗಿನಲ್ಲಿ ಸಂಪರ್ಕಿಸಿದ ಇಬ್ಬರು ತಾಲಿಬಾನಿಗಳು, ದೇಶದಿಂದ ಸುರಕ್ಷಿತವಾಗಿ ಪಾರಾಗಲು ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಬಳಿಕ ಆತನ ಪ್ರವೇಶಿಸಿ ಅತ್ಯಾಚಾರ ನಡೆಸಿ, ಬಳಿಕ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಈ ಮೂಲಕ ಅಫ್ಘಾನ್ ನಲ್ಲಿ ಇಸ್ಲಾಮಿಕ್ ಕಾನೂನು ಹೇಗಿರಲಿದೆ ಅನ್ನುವುದಕ್ಕೆ ಒಂದೊಂದೇ ಸಾಕ್ಷಿಗಳನ್ನು ಕೊಡಲಾರಂಭಿಸಿದ್ದಾರೆ.
Discussion about this post