ಕಾಬೂಲ್ : ಆಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್ ಉಗ್ರ ಸಂಘಟನೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತಿದೆ ಎಂದು ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳಿದ್ದಾನೆ.
ಪ್ರಜಾಪ್ರಭುತ್ವ ಸರ್ಕಾರವನ್ನು ಕೆಡವಿ ಧರ್ಮದ ಆಧಾರದಲ್ಲಿ ಸಾಮ್ರಾಜ್ಯ ಕಟ್ಟಲು ಮುಂದಾಗಿರುವ ತಾಲಿಬಾನ್ ಮುಖಂಡರು ಈಗಾಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ನಾವು ಸ್ತ್ರೀಯರನ್ನು ಗೌರವದಿಂದ ಕಾಣುತ್ತೇವೆ, ಹಿಂಸೆ ನಮ್ಮ ಉದ್ದೇಶವಲ್ಲ ಎಂದೆಲ್ಲಾ ಈಗಾಗಲೇ ಹೇಳಿದ್ದಾರೆ. ಆದರೆ ಹುಟ್ಟು ಗುಣ ಸುಟ್ಟರೂ ಹೋಗದು ಅನ್ನುವಂತೆ ತಾಲಿಬಾನಿಗಳ ರಕ್ಕಸ ಬುದ್ದಿ ಈಗಾಗಲೇ ಜಗತ್ತಿಗೆ ಪರಿಚಯವಾಗಿದೆ.
ಈ ನಡುವೆ ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹೇಳೆ ಅಚ್ಚರಿ ಮೂಡಿಸಿದ್ದು ಭಾರತದೊಂದಿಗೆ ಸಂಬಂಧ ಬೆಳೆಸುವ ಇಚ್ಛೆ ನಾಟಕವೋ, ನಿಜಕ್ಕೂ ಭಾರತದ ಅನಿವಾರ್ಯತೆ ಅವರಿಗೆ ಅರಿವಾಗಿದೆಯೋ ಅನ್ನುವುದು ಗೊತ್ತಾಗಿಲ್ಲ. ಇನ್ನು ತಾಲಿಬಾನ್ ಮುಖಂಡ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನಿಕಜೈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ್ರೆ, ಭಾರತದ ಡೆಹ್ರಾಡೂನ್’ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಈತ ತರಬೇತಿ ಬಳಿಕ ಅಫ್ಘಾನಿಸ್ತಾನಕ್ಕೆ ತೆರಳಿ ಅಫ್ಘನ್ ಮಿಲಿಟರಿ ಸೇರಿಕೊಳ್ಳಬೇಕಾಗಿತ್ತು. ಆದರೆ ಸೇರಿದ್ದು ತಾಲಿಬಾನ್ ಗ್ಯಾಂಗ್.
Discussion about this post