ಬೆಂಗಳೂರು : ಕೆಲವೊಂದು ಧಾರ್ಮಿಕ ಕಟ್ಟುಪಾಡುಗಳ ಕಾರಣದಿಂದ ಉಸಿರು ನಿಂತ ಮೇಲೂ ಅಂಗಾಂಗ ದಾನ ಮಾಡಲು ಜನ ಹಿಂಜರಿಯುತ್ತಾರೆ. ಈ ಕಾರಣದಿಂದಲೇ ಸಕಾಲಕ್ಕೆ ಅಂಗಾಂಗಗಳು ಸಿಗದೇ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸಂಚಾರಿ ವಿಜಯ್ ಕುಟುಂಬಸ್ಥರು ಕೈಗೊಂಡ ನಿರ್ಧಾರದಿಂದ ಅದೆಷ್ಟೋ ಮಂದಿ ಪುನರ್ ಜನ್ಮ ಪಡೆದಿದ್ದಾರೆ. ಈ ನಡುವೆ ಅಂಗಾಂಗ ದಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರ್ಧಾರ ಮಾಡಿದ್ದಾರೆ.
ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಾಂಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯ
ಇನ್ನು ಜನರಲ್ಲಿ ಅಂಗಾಂಗ ದಾನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಅಂಗಾಂಗ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಹತ್ವದ ಘೋಷಣೆ ಮಾಡಿದ್ದಾರೆ. ಮಣ್ಣಲ್ಲಿ ಮಣ್ಣಾಗಿ ಹೋಗುವ ದೇಹದ ಅಂಗಾಂಗಳಿಂದ ಇನ್ನೊಂದು ಜೀವವನ್ನು ಉಳಿಸಲು ಸಾಧ್ಯವಿದೆ ಅಂತಹ ಅಂಗಾಂಗಳ ದಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ.
ಅಂಗಾಂಗಕ್ಕೆ ದಾನಕ್ಕೆ ಮುಖ್ಯಮಂತ್ರಿ ನಿರ್ಧಾರ
ವಿಶ್ವ ಅಂಗಾಂಗ ದಿನದ ಪ್ರಯುಕ್ತ ಇಂದು ಅವರು ತಮ್ಮ ಅಂಗಾಂಗಗಳ ದಾನಕ್ಕೆ ಹೆಸರು ನೊಂದಾಯಿಸುವ ಮೂಲಕ ಅಂಗಾಂಗ ದಾನದ ಪ್ರತಿಜ್ಞೆ ಸ್ವೀಕರಿಸಿದ್ದಾರೆ . ಈ ಮೂಲಕ ರಾಜ್ಯದ ಜನರಿಗೂ ಅಂಗಾಂಗ ದಾನಕ್ಕೆ ಮುಂದಾಗುವಂತೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಇಂದು ವಿಶ್ವ ಅಂಗಾಂಗ ದಿನವಾಗಿದ್ದು, ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಈ ಬಗ್ಗೆ ಸಂಕಲ್ಪ ಮಾಡಬೇಕು. ಈ ಮೂಲಕ ಇನ್ನೊಬ್ಬರ ಜೀವಕ್ಕೆ ಆಸರೆಯಾಗಬೇಕು ಎಂದು ಮನವಿ ಮಾಡಿದ್ದಾರೆ.
Discussion about this post