ಬೆಂಗಳೂರು : ಬಸವರಾಜ್ ಬೊಮ್ಮಾಯಿ ಸಂಪುಟಕ್ಕೆ ನೇಮಕಗೊಂಡಿರುವ ಮಂತ್ರಿಗಳ ಪೈಕಿ ಬಹುತೇಕರು ಈಗಾಗಲೇ ಮುಖ್ಯಮಂತ್ರಿಗಳು ಕೊಟ್ಟ ಖಾತೆಯ ಅಧಿಕಾರ ವಹಿಸಿಕೊಂಡಿದ್ದಾರೆ. ಒಂದಿಬ್ಬರು ಖಾತೆಯ ಬಗ್ಗೆ ತೃಪ್ತಿ ಹೊಂದಿಲ್ಲ, ಹೀಗಾಗಿ ಅಧಿಕಾರ ವಹಿಸಿಕೊಂಡಿಲ್ಲ. ಈ ನಡುವೆ ಬೊಮ್ಮಾಯಿ ಸಂಪುಟದಲ್ಲಿ ಪ್ರಮುಖ ಖಾತೆ ಪಡೆದಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಇನ್ನೂ ತಮ್ಮ ಖಾತೆಯ ಅಧಿಕಾರ ಸ್ವೀಕರಿಸಿಲ್ಲ.
ಸುನಿಲ್ ಕುಮಾರ್ ಅವರಿಗೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಖಾತೆಯನ್ನು ನೀಡಲಾಗಿದೆ. ಈ ಪೈಕಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿ ರವೀಂದ್ರ ಕಲಾ ಕ್ಷೇತ್ರದಲ್ಲಿ ಅಧಿಕಾರ ಸ್ವೀಕರಿಸಿರುವ ಸುನಿಲ್ ಕುಮಾರ್ ಇಂಧನ ಖಾತೆಯನ್ನು ನಾಲ್ಕೈದು ದಿನ ಕಳೆದ ಮೇಲೆ ಸ್ವೀಕರಿಸುವುದಾಗಿ ಹೇಳಿದ್ದಾರೆ. ಅಂದ್ರೆ ಆಗಸ್ಟ್ 15 ಕಳೆದ ಮೇಲೆ ಸಚಿವರಾಗಿ ಅಧಿಕಾರ ಸ್ವೀಕರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸಂಸ್ಕೃತಿ ಇಲಾಖೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇಂಧನ ಖಾತೆ ಸಚಿವರಾಗಿ ಸುನಿಲ್ ಕುಮಾರ್ ಇಂದೇ ಅಧಿಕಾರ ಸ್ವೀಕರಿಸಬಹುದಿತ್ತು. ಆದರೆ ಇಂಧನ ಖಾತೆ ವಿಚಾರದಲ್ಲಿ ನಡೆಯುತ್ತಿರುವ ಗೊಂದಲ ಬಗೆ ಹರಿಯುವ ತನಕ ಅಧಿಕಾರ ಸ್ವೀಕರಿಸದಿರಲು ಸುನಿಲ್ ಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಇಂಧನ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಮುಖ್ಯಮಂತ್ರಿಗಳು ಮನಸ್ಸು ಬದಲಾಯಿಸಿ ಇಂಧನ ಖಾತೆಯನ್ನು ಆನಂದ್ ಸಿಂಗ್ ಅವರಿಗೆ ಕೊಟ್ರೆ, ಮುಜುಗರವಾಗಬಾರದೆಂದು ಕಾರ್ಕಳ ಶಾಸಕರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಒಂದು ಸಲ ಆನಂದ್ ಸಿಂಗ್ ಖಾತೆ ಕ್ಯಾತೆ ಗೊಂದಲ ಪರಿಹಾರವಾದ್ರೆ ಬಳಿಕ ಇಂಧನ ಖಾತೆ ಸಚಿವರಾಗಿ ಅಧಿಕಾರ ವಹಿಸಲು ಸುನಿಲ್ ಕುಮಾರ್ ನಿರ್ಧರಿಸಿದ್ದಾರೆ. ಆದರೆ ಸಂಪ್ರದಾಯ ಮುರಿಯಬಾರದು ಅನ್ನು ನಿಟ್ಟಿನಲ್ಲಿ ಇವತ್ತು ನಡೆದ ಇಂಧನ ಖಾತೆಯ ಮೇಲ್ವಿಚಾರಣಾ ಸಭೆಯಲ್ಲಿ ಸುನಿಲ್ ಕುಮಾರ್ ಪಾಲ್ಗೊಂಡಿದ್ದಾರೆ. ಈಗಾಗಲೇ ಖಾತೆ ಬದಲಾವಣೆ ಸಲುವಾಗಿ ಪಟ್ಟು ಹಿಡಿದಿರುವ ಆನಂದ್ ಸಿಂಗ್ ಆಗಸ್ಟ್ 15ರ ಗಡುವು ವಿಧಿಸಿದ್ದಾರೆ
Discussion about this post