ಬೆಂಗಳೂರು : ಐಎಂಎ ಹಗರಣ, ವಿದೇಶದಲ್ಲಿ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಾದ ವಿಚಾರಗಳಲ್ಲಿ ಆಗಿದೆ ಎನ್ನಲಾದ ಗೋಲ್ ಮಾಲ್ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಗುರುವಾರ ಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ನಿವಾಸಕ್ಕೆ ದಾಳಿ ನಡೆಸಿದ್ದರು.
ಜಮೀರ್ ಗೆ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ಜ ಅಧಿಕಾರಿಗಳು ಸತತ 23 ಗಂಟೆಗಳ ಶೋಧ ಕಾರ್ಯವನ್ನು ಶುಕ್ರವಾರ ಬೆಳಗ್ಗೆ ಮುಕ್ತಾಯಗೊಳಿಸಿದ್ದಾರೆ. ಗುರುವಾರ ಬೆಳಗ್ಗೆ 6 ಗಂಟೆಗೆ ಮನೆಗೆ ಬಂದವರು ಶುಕ್ರವಾರ ಬೆಳಗ್ಗೆ 5 ಗಂಟೆಗೆ ನಿರ್ಗಮಿಸಿದ್ದಾರೆ. ಈ ವೇಳೆ ಹಲವು ದಾಖಲೆಗಳನ್ನು ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ ಮುಂದಿನ ದಿನಗಳಲ್ಲಿ ದೆಹಲಿಗೆ ಕರೆಯುತ್ತೇವೆ ಬನ್ನಿ ಅಂದಿದ್ದಾರೆ.
ಈ ನಡುವೆ ಈ ದಾಳಿಯನ್ನು ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಇದು ಐಎಂಎ ವಿಚಾರದಲ್ಲಿ ಆಗಿರುವ ದಾಳಿಯಾಗಿದ್ರೆ ಸೂಕ್ತ ತನಿಖೆಯಾಗಲೇಬೇಕು. ಯಾಕಂದ್ರೆ ಐಎಂಎ ಸಂಸ್ಥೆ ಅದೆಷ್ಟು ಬಡವರ ಹಣ ನುಂಗಿದೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಬಡವರು ರಕ್ತ ಸುರಿಸಿ ಸಂಪಾದಿಸಿದ ಹಣದಲ್ಲಿ ರಾಜಕಾರಣಿಗಳು ಮಜಾ ಮಾಡಿದ್ರೆ ಸುಮ್ನೆ ಬಿಡಬೇಕಾ..?
Discussion about this post