ಬೆಂಗಳೂರು : ಮೇಕದಾಟು ಯೋಜನೆಯನ್ನು ವಿರೋಧಿಸಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಭಟನೆ ನಡೆಸುವುದಾಗಿ ನೀಡಿರುವ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಬಸವಾಜ್ ಬೊಮ್ಮಾಯಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಯೋಜನೆಯನ್ನು ಕರ್ನಾಟಕ ಅರ್ಹವಾಗಿ ರೂಪಿಸಿದೆ. ಅಣ್ಣಾಮಲೈ ಧರಣಿ ನಡೆಸುತ್ತಿರುವುದು ರಾಜಕೀಯ ಪೇರಿತ. ಹೀಗಾಗಿ ಅವನನ್ನು ಅಷ್ಟು ದೊಡ್ಡ ವ್ಯಕ್ತಿ ಮಾಡುವ ಅವಶ್ಯಕತೆಯಿಲ್ಲ. ನಾವೂ ಅದನ್ನು ರಾಜಕೀಯ ಪ್ರೇರಿತ ಮಾಡುವುದು ಬೇಡ. ಹೆಚ್ಚುವರಿ ನೀರು ಸಂಗ್ರಹಕ್ಕೆ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಅಂದಿದ್ದಾರೆ.
ಕುಡಿಯುವ ನೀರು, ಇಂಧನ ಹಾಗೂ ಬರಗಾಲದಂತಹ ಸಂಕಷ್ಟ ಸಮಯದಲ್ಲಿ ಉಪಯೋಗವಾಗುವಂತಹ ಯೋಜನೆ ಇದಾಗಿದ್ದು. ಈ ಯೋಜನೆಯ ಉದ್ದೇಶ ಎಲ್ಲರಿಗೂ ಗೊತ್ತಿದೆ ಅಂದಿರುವ ಸಿಎಂ ಇತ್ತೀಚೆಗೆ ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾದ ವೇಳೆ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಲಾಗಿದೆ.
ಸಂಸದರ ನಿಯೋಗ ಸಹ ಯೋಜನೆ ಪುರಸ್ಕಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದೆ. ಶೀಘ್ರದಲ್ಲೇ ಡಿಪಿಆರ್ ಅನುಮತಿ ಸಿಗುವ ವಿಶ್ವಾಸವಿದೆ ಎಂದು ಸಿಎಂ ತಿಳಿಸಿದ್ದಾರೆ.
Discussion about this post