ಬೆಂಗಳೂರು : ಮಾಜಿ ಸಚಿವ ಹಾಲಿ ಕಾಂಗ್ರೆಸ್ ಶಾಸಕ ಜಮೀರ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಲಭ್ಯ ಮಾಹಿತಿ ಪ್ರಕಾರ ಜಮೀರ್ ಮನೆ ಮೇಲೆ ದಾಳಿ ನಡೆಸಿದ್ದು ಐಟಿ ಅಧಿಕಾರಿಗಳಲ್ಲ, ಬದಲಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಐಎಂಎ ಪ್ರಕರಣ ಸಂಬಂಧ ಈ ದಾಳಿ ನಡೆದಿದ್ದು, ರೋಶನ್ ಬೇಗ್ ಹಾಗೂ ಜಮೀರ್ ಅಹಮ್ಮದ್ ಅವರಿಗೆ ಸೇರಿದ ಒಟ್ಟು 12 ಸ್ಥಳಗಳಿಗೆ ಈ ದಾಳಿ ನಡೆದಿದ್ದು, ಇವರಿಬ್ಬರ ವಿದೇಶಿ ಹೂಡಿಕೆಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಗೊತ್ತಾಗಿದೆ. ರೋಷನ್ ಬೇಗೆ ಪುತ್ರಿಯ ಮೇಲೆ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಜಮೀರ್ ಗೆ ಸೇರಿದ 6 ಕಡೆ ಪರಿಶೀಲನೆ ನಡೆಯುತ್ತಿದೆ. ಜಮೀರ್ ಶ್ರೀಲಂಕಾದಲ್ಲಿ ಕ್ಯಾಸಿನೋ ಹೊಂದಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಈ ನಡುವೆ ಜಮೀರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆಯುವ ಸಾಧ್ಯತೆಗಳು ಇದೆ ಎನ್ನಲಾಗಿದೆ.
Discussion about this post