ಬೆಂಗಳೂರು : ಕಾಂಗ್ರೆಸ್ ಶಾಸಕ Zameer Ahmed Khan ಜಮೀರ್ ಅಹ್ಮದ್ಗೆ ಬೆಳ್ಳಂ ಬೆಳಗ್ಗೆ ಐಟಿ ಶಾಕ್ ಎದುರಾಗಿದೆ. ಗುರುವಾರ ಬೆಳ್ಳಗೆ ಅಧಿಕಾರಿಗಳು ಜಮೀರ್ ಮನೆ ಕಚೇರಿಗೆ ದಾಳಿ ನಡೆಸಿದ್ದಾರೆ. ಬಂಬೂ ಬಜಾರ್ ರಸ್ತೆಯಲ್ಲಿರುವ ಜಮೀರ್ ಅಹ್ಮದ್ ಮನೆ ಮೇಲೆ ಎರಡು ಕಾರಿನಲ್ಲಿ ಬಂದ ಅಧಿಕಾರಿಗಳು ಪ್ರವೇಶಿಸಿದ್ದು ಪರಿಶೀಲನೆ ಮುಂದುವರಿಸಿದ್ದಾರೆ. ಈ ವೇಳೆ ಜಮೀರ್ ಮನೆಯಲ್ಲೇ ಇದ್ದರೆ ಎಂದು ಗೊತ್ತಾಗಿದೆ.
ಬೆಳಗ್ಗೆ ಆರು ಗಂಟೆ ಜಮೀರ್ ಸುಮಾರಿಗೆ ಈ ದಾಳಿ ಪ್ರಾರಂಭಗೊಂಡಿದ್ದು, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಜಮೀರ್ ಅಹ್ಮದ್ ಮನೆ ಹಾಗೂ ಫ್ಲಾಟ್ ಮೇಲೂ ದಾಳಿ ನಡೆದಿದ್ದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಜಮೀರ್ ಅಹ್ಮದ್ ಖಾನ್ ಭವ್ಯವಾದ ಮನೆ ಕಟ್ಟಿಸಿದ್ದರು.
Discussion about this post