ಬೀಜಿಂಗ್ : ಜಗತ್ತಿಗೆ ಕೊರೋನಾ ಹಂಚಿ ಮಜಾ ಮಾಡುತ್ತಿದ್ದ ಚೀನಾ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ. ಹಾಗಂತ ಅದು ಪಾಠ ಕಲಿಯುತ್ತದೆ ಅನ್ನುವುದು ನಮ್ಮ ಮೂರ್ಖತನವಾಗಬಹುದು.
ಡ್ರ್ಯಾಗನ್ ರಾಷ್ಟ್ರದಲ್ಲಿ ಇದೀಗ ವಿಪರೀತ ಮಳೆ ಸುರಿಯುತ್ತಿದ್ದು, ಮಹಾಮಳೆಗೆ ಚೀನಾ ತತ್ತರಿಸಿ ಹೋಗಿದೆ. ಈ ನಡುವೆ ಚರಂಡಿಗಳಲ್ಲಿ ನೀರು ಹರಿಯಲಾಗದೆ ಮೆಟ್ರೋ ಸುರಂಗದೊಳಕ್ಕೆ ನೀರು ನುಗ್ಗಿದೆ. ಪರಿಣಾಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ 12 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದೆ.
ಈ ದುರ್ಘಟನೆ ಮಧ್ಯ ಚೀನಾದ ಝೆಂಗ್ ಝೋ ನಗರದ ಮೆಟ್ರೋ ಸುರಂಗದಲ್ಲಿ ನಡೆದಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಈ ನಡುವೆ ಚೀನಾದ ಬಹುತೇಕ ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ, ಅನೇಕು ಜನರು ನೆರೆಯ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ.
Discussion about this post