ತುಮಕೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಶಂಕಿತ ಕಿಂಗ್ ಪಿನ್ ಪತ್ರಕರ್ತ ನರೇಶ್ ಗೌಡ ಯುವ ಕಾಂಗ್ರೆಸ್ ಮುಖಂಡರಾಗಿ ಬದಲಾಗಿದ್ದಾರೆ. ಶಿರಾ ಪಟ್ಟಣದಲ್ಲಿ ನರೇಶ್ ಗೌಡ ಅವರ ಪ್ಲೆಕ್ಸ್ ಗಳು ರಾರಾಜಿಸುತ್ತಿದ್ದು, ಯುವ ಕಾಂಗ್ರೆಸ್ ಮುಖಂಡ ಎಂದೇ ಬರೆಯಲಾಗಿದೆ. ಪರಿಸ್ಥಿತಿ ನೋಡಿದರೆ ಪಟ್ಟಣದಲ್ಲಿ ಯುವ ಕಾಂಗ್ರೆಸ್ ಮುಖಂಡರೊಬ್ಬರನ್ನು ಬೆಳೆಸಲು ಡಿಕೆಶಿ ನಿರ್ಧರಿಸಿದಂತಿದೆ.
ಭಾನುವಾರ ನರೇಶ್ ಗೌಡ ಶಿರಾ ಪಟ್ಟಣಕ್ಕೆ ಭೇಟಿ ಕೊಟ್ಟಿದ್ದು ಈ ವೇಳೆ ಅಭಿಮಾನಿಗಳು ಅದ್ದೂರಿ ಸ್ವಾಗತ ಕೊಟ್ಟಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಹೆಗಲ ಮೇಲೆ ಕೂರಿಸಿ ಅದ್ದೂರಿ ಸ್ವಾಗತ ನೀಡಿದ್ದಾರೆ. ಜೆಸಿಬಿ ತಂದು ಹೂ ಸುರಿದಿದ್ದಾರೆ.
ಇನ್ನು ಪಟ್ಟಣದಲ್ಲಿ ಹಾಕಲಾಗಿರುವ ನರೇಶ್ ಗೌಡ ಪ್ಲೆಕ್ಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಫೋಟೋ ಬೇರೆ ಮುದ್ರಿಸಲಾಗಿದೆ. ಅಲ್ಲಿಗೆ ಶಿರಾ ಪಟ್ಟಣಕ್ಕೊಬ್ಬ ಕಾಂಗ್ರೆಸ್ ಯುವ ನಾಯಕ ಸಿಕ್ಕ ಅಂದಾಯ್ತು.
Discussion about this post